Just In
Don't Miss!
- Sports
SMAT: ಮೊದಲ ಕ್ವಾ.ಫೈನಲ್ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ
- News
ಅನಾರೋಗ್ಯಕ್ಕೆ ಒಳಗಾದ ಶಶಿಕಲಾಗೆ ಕೋವಿಡ್ ಸೋಂಕು ಪತ್ತೆ
- Finance
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದ ಹೊಸ ವಿವಾದಾತ್ಮಕ ನಟಿ
ವಿವಾದಾತ್ಮಕ ನಟಿಯರೆಂದರೆ ನಮ್ಮ ಸ್ಯಾಂಡಲ್ ವುಡ್ ಚಿತ್ರರಂಗದವರಿಗೆ ಅದೇನ್ ಮೋಹನೋ ಗೊತ್ತಿಲ್ಲ. ಇನ್ನು ವಿವಾದಾತ್ಮಕ ನಟಿ ಮಣಿಯರು ತಮ್ಮ ಚಿತ್ರಗಳಲ್ಲಿ ನಟಿಸಿದರೆ, ಏನೋ ಪ್ಲಸ್ ಪಾಯಿಂಟ್ ಆಗಬಹುದು ಅಥವಾ ಸಿನಿಮಾ ಚೆನ್ನಾಗಿ ಓಡಬಹುದು ಎಂಬ ಭ್ರಮೆಯಿಂದ ಕರೆತರುವುದುಂಟು.
ಇನ್ನು ಬಿಚ್ಚಮ್ಮ ಪೂನಂ ಪಾಂಡೆ, ಶ್ವೇತಾ ಪ್ರಸಾದ್ ಹೀಗೆ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಫೇಮಸ್ ಆದ ನಟಿ ಮಣಿಯರು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ ಟಾಲಿವುಡ್ ಬೆಡಗಿ ಖುಷಿ ಮುಖರ್ಜಿ.
ಈ ಗ್ಲಾಮರ್ ಬೊಂಬೆ ಖುಷಿ ಮುಖರ್ಜಿ ಅವರು ತೆಲುಗಿನ 'ದೊಂಗ ಪ್ರೇಮ' ಎಂಬ ಚಿತ್ರದಲ್ಲಿ ನಟಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ.
ಕನ್ನಡದ 'ಕರುಣಾ ನಿಧಿ' ಎಂಬ ಚಿತ್ರದಲ್ಲಿ ನಟಿಸಲು ವಿವಾದಾತ್ಮಕ ನಟಿ ಖುಷಿ ಅವರು ಬಲಗಾಲಿಟ್ಟು ಗಾಂಧಿನಗರಕ್ಕೆ ಕಾಲಿಟ್ಟಿದ್ದು, ಈ ಚಿತ್ರದಲ್ಲಿ ಇವರಿಗೆ ನಾಯಕನಾಗಿ ನಟ ಮೋಹನ್ ಅವರು ಸಾಥ್ ನೀಡಲಿದ್ದಾರೆ. [ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?]
ಅಂದಹಾಗೆ ಖುಷಿ ಮುಖರ್ಜಿ ಟಿವಿ ಚಾನಲ್ ಒಂದರ ಲೈವ್ ಶೋನಲ್ಲಿ ಒಬ್ಬ ಹುಡುಗನ ಕಪಾಳಕ್ಕೆ ಹೊಡೆದು, ಧಮಕಿ ಹಾಕಿ ಸಖತ್ ಸುದ್ದಿಯಾಗಿದ್ದರು. ಅದರೆ ಈ ಘಟನೆ ನಡೆದು ಐದು ತಿಂಗಳಾಗಿದ್ದು, ಅವೆಲ್ಲವನ್ನು ಮರೆತು ಈ ನಟಿ ಮಣಿ ಕನ್ನಡ ಇಂಡಸ್ಟ್ರಿಗೆ ನಾಯಕಿಯಾಗಿ ಭರ್ಜರಿ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ.
ಖ್ಯಾತ ನಿರ್ದೇಶಕ ಎ.ಜಿ ಶೇಷಾದ್ರಿ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದು, ಇದೇ ಶುಕ್ರವಾರದಿಂದ (ನವೆಂಬರ್ 27) ಚಿತ್ರದ ಶೂಟಿಂಗ್ ನಡೆಯಲಿದೆ. ಚಿತ್ರಕ್ಕೆ ಕಥೆಯನ್ನು ಎ.ಜಿ ಶೇಷಾದ್ರಿ ಅವರೇ ಒದಗಿಸಿದ್ದು, ನಟ ಮೋಹನ್ ಅವರು ನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಿನಿಮಾಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ.
ಅದೇನೇ ಇರಲಿ ಒಟ್ನಲ್ಲಿ ವಿವಾದಾತ್ಮಕ ನಟಿ ಚಂದನವನಕ್ಕೆ ಕಾಲಿಟ್ಟಿದ್ದು, ಇನ್ನು ಇಲ್ಲಿ ಅದ್ಯಾವ ಅವಾಂತರ ಎಬ್ಬಿಸ್ತಾರೆ ಅಂತ ಕಾದು ನೋಡೋಣ.