ಡೇಟಾ ಟ್ರಾಫಿಕ್ ಕಡಿತಗೊಳಿಸಿದ ನೆಟ್‌ಫ್ಲಿಕ್ಸ್, ಫೇಸ್‌ಬುಕ್

ಆನ್‌ಲೈನ್ ಸ್ಟ್ರೀಮಿಂಗ್ ಸೇವೆಯಾದ ನೆಟ್‌ಫ್ಲಿಕ್ಸ್ ಐಎನ್‌ಸಿ (NFLX.O) ಮತ್ತು ಸಾಮಾಜಿಕ ಮಾಧ್ಯಮದ ದಿಗ್ಗಜ ಫೇಸ್‌ಬುಕ್ ಐಎನ್‌ಸಿ (FB.O) ಭಾರತದಲ್ಲಿ ದೂರಸಂಪರ್ಕ ನೆಟ್‌ವರ್ಕ್‌ಗಳ ಸರಾಗ ನಿರ್ವಹಣೆಗೆ ಅನುಕೂಲವಾಗುವಂತೆ ತಮ್ಮ ಸೇವೆಗಳಲ್ಲಿನ ಡೇಟಾ ಪ್ರಮಾಣವನ್ನು ತಗ್ಗಿಸುವುದಾಗಿ ಪ್ರಕಟಿಸಿವೆ.

ಲಾಕ್‌ಡೌನ್ ಪರಿಣಾಮದಿಂದ ಲಕ್ಷಾಂತರ ಜನರು ಮನೆಯೊಳಗೆ ಇದ್ದು ಇಂಟರ್‌ನೆಟ್‌ಅನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಅದರ ವೇಗದ ಕಡಿಮೆಯಾಗುತ್ತಿದೆ. ಈ ಸಂದರ್ಭದಲ್ಲಿ ಇತರೆ ಅವಶ್ಯಕತೆಗಳಿಗೆ ಇಂಟರ್‌ನೆಟ್ ಬೇಕಾಗಿರುವುದರಿಂದ ನೆಟ್‌ಫ್ಲಿಕ್ಸ್ ಮತ್ತು ಫೇಸ್‌ಬುಕ್‌ಗಳು ಭಾರತದಲ್ಲಿ ಡೇಟಾ ಟ್ರಾಫಿಕ್ ಅನ್ನು ಕಡಿತಗೊಳಿಸಿವೆ.

ಮುಂದಿನ 30 ದಿನಗಳವರೆಗೆ ಭಾರತದ ದೂರಸಂಪರ್ಕ ಜಾಲದಲ್ಲಿನ ಟ್ರಾಫಿಕ್‌ಅನ್ನು ಶೇ 25ರಷ್ಟು ಇಳಿಸುವುದಾಗಿ ನೆಟ್‌ಫ್ಲಿಕ್ಸ್ ತಿಳಿಸಿದೆ. ಇಂಟರ್‌ನೆಟ್ ಬಳಕೆಯಲ್ಲಿ ಹೆಚ್ಚಳವಾಗುವಂತೆ ಮಾಡಲು ಅಂತರ್ಜಾಲ ಸೇವಾ ಪೂರೈಕೆದಾರರಿಗೆ ನೆರವಾಗಲು ಯುರೋಪ್‌ನಲ್ಲಿ ಈಗಾಗಲೇ ಈ ರೀತಿಯ ನಡೆಯನ್ನು ಅನುಸರಿಸಿದೆ.

 Coronavirus Outrbreak Netflix And Facebook To Cut Data Traffic In India

ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ನೆಟ್‌ಫ್ಲಿಕ್ಸ್ 16 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿದೆ. ಆದರೆ ಭಾರತದಲ್ಲಿ ಎಷ್ಟು ಮಂದಿ ನೆಟ್‌ಫ್ಲಿಕ್ಸ್ ಬಳಸುತ್ತಿದ್ದಾರೆ ಎನ್ನುವುದನ್ನು ಕಂಪೆನಿ ಬಹಿರಂಗಪಡಿಸಿಲ್ಲ.

ಫೇಸ್‌ಬುಕ್‌ ಕೂಡ ಭಾರತದಲ್ಲಿ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಬಿಟ್ ರೇಟ್‌ಗಳನ್ನು ತಾತ್ಕಾಲಿಕವಾಗಿ ಇಳಿಸುವ ಅಥವಾ ವಿಡಿಯೋಗಳ ಪಿಕ್ಚರ್ ಗುಣಮಟ್ಟವನ್ನು ತಗ್ಗಿಸುವುದಾಗಿ ತಿಳಿಸಿದೆ.

More from Filmibeat

English summary
Netflix and Facebook said they would reduce the amount of data traffic to ease congested telecoms networks in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X