Just In
Don't Miss!
- News
ABP-C Voter Opinion Poll: ಪಶ್ಚಿಮ ಬಂಗಾಳದಲ್ಲಿ ಜನರ ಒಲವು ಯಾರ ಪರ?
- Sports
'ಭಾರತದೆದುರು ಸರಣಿ ಡ್ರಾಗೊಂಡರೆ ಅದು ಸೋಲಿಗಿಂತಲೂ ಕೆಟ್ಟದ್ದು!'
- Automobiles
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವೀರಪ್ಪನ್ ಕುರಿತ ವೆಬ್ ಸೀರಿಸ್ ಬಿಡುಗಡೆಗೆ ತಡೆಯಾಜ್ಞೆ ನೀಡಿದ ಕೋರ್ಟ್; ಮುತ್ತುಲಕ್ಷ್ಮಿ ಹೇಳಿದ್ದೇನು?
ಕಾಡುಗಳ್ಳ ವೀರಪ್ಪನ್ ಕುರಿತ ವೈಬ್ ಸೀರಿಯಸ್ ಬಿಡುಗಡೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. 'ವೀರಪ್ಪನ್; ಹಂಗರ್ ಫರ್ ಕಿಲಿಂಗ್' ಟೈಟಲ್ ನಲ್ಲಿ ಅಟ್ಟಹಾಸ ನಿರ್ದೇಶಕ ಎ ಎಂ ಆರ್ ರಮೇಶ್ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಇದೀಗ ಈ ವೆಬ್ ಸೀರಿಸ್ ಬಿಡುಗಡೆಗೆ ಮಾಡದಂತೆ ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ವೆಬ್ ಸಿರಿಸ್ ನ ಯಾವುದೇ ಸ್ಕ್ರೀನಿಂಗ್ ಮಾಡುವಂತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಹಾಕುವಂತಿಲ್ಲ, ಒಟಿಟಿಯಲ್ಲೂ ರಿಲೀಸ್ ಮಾಡುವಂತಿಲ್ಲ ಅಲ್ಲದೇ ಯಾವುದೇ ಭಾಷೆಯಲ್ಲೂ ಈ ಸೀರಿಸ್ ಬಿಡುಗಡೆ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.
ವೆಬ್ ಸೀರಿಸ್ ರಿಲೀಸ್ ಗೆ ತಡೆಕೋರಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕೋರ್ಟ್ ಮೆಟ್ಟಿಲೇರಿದ್ದು. ಈ ಬಗ್ಗೆ ಮಾತನಾಡಿರುವ ನೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, 'ನ್ಯಾಯಾಲಯದಲ್ಲಿ ನಮ್ಮ ಅರ್ಜಿಗೆ ತಡೆಯಾಜ್ಞೆ ಸಿಕ್ಕಿದೆ ನಿರ್ದೇಶಕ ಎ ಎಮ್ ಆರ್ ರಮೇಶ್ ಯಾಕೆ ವೀರಪ್ಪನ ಹೆಸರು ಹೇಳಿ ಹಣ ಮಾಡುತ್ತಿದ್ದಾರೆ ಗೊತ್ತಿಲ್ಲ. ಇದರಿಂದ ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳು ಗೌರವಯುತ ಜೀವನಕ್ಕೆ ಧಕ್ಕೆಯಾಗುತ್ತಿದೆ' ಎಂದಿದ್ದಾರೆ.
'ವೀರಪ್ಪನ್ ಮಾಡಿರುವ ಒಳ್ಳೆ ಕೆಲಸಗಳನ್ನು ಯಾಕೆ ಎ ಎಮ್ ರಮೇಶ್ ತೋರಿಸಲ್ಲ. ಪದೇ ಪದೇ ತನ್ನ ಗಂಡನ ಹೆಸರಿನಲ್ಲಿ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡಬೇಡಿ' ಎಂದು ಪತ್ನಿ ಮುತ್ತುಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.
'ಎ ಎಂ ರಮೇಶ್ ಅವರು ಈ ಹಿಂದೆ ಅಟ್ಟಹಾಸ ಎಂಬ ಸಿನಿಮಾ ಮಾಡಿದ್ರು. ವೆಬ್ ಸೀರಿಸ್ ಮೂಲಕ ಎ ಎಂ ರಮೇಶ್ ಪೊಲೀಸರ ಸಾಹಸದ ಕುರಿತಾಗಿ ಹೇಳಲು ಹೊರಟ್ಟಿದ್ದಾರೆ. ಈಗಾಗಲೇ ವೆಬ್ ಸೀರಿಸ್ ಚಿತ್ರೀಕರಣವಾಗಿದೆ. ಆಗಸ್ಟ್ ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಆದರೀಗ ನ್ಯಾಯಾಲಯದಲ್ಲಿ ನಮ್ಮ ಅರ್ಜಿ ತಡೆಯಾಜ್ಞೆ ಸಿಕ್ಕಿದೆ' ಎಂದಿದ್ದಾರೆ.
ಪತಿಯ ಹೆಸರಿನಲ್ಲಿ ಸಿನಿಮಾ ವೆಬ್ ಸೀರಿಸ್ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಯಾವುದೇ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ರೇಷನ್ ಕಾರ್ಡ್ ಸಿಕ್ಕಿಲ್ಲ ಎಂದು ಮುತ್ತುಲಕ್ಷ್ಮಿ ಅಳಲು ತೋಡಿಕೊಂಡಿದ್ದಾರೆ.
'ವೀರಪ್ಪನ್; ಹಂಗರ್ ಫರ್ ಕಿಲಿಂಗ್' ವೆಬ್ ಸೀರಿಸ್ ನಲ್ಲಿ ನಟ ಕಿಶೋರ್ ವೀರಪ್ಪನ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ವೆಬ್ ಸೀರಿಸ್ ಒಟ್ಟು 10 ಸಂಚಿಕೆಗಳಿದ್ದು, ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ. ಈ ಸೀರಿಸ್ ನಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರು ನಟಿಸಿದ್ದಾರೆ ಎನ್ನಲಾಗುತ್ತಿದೆ.