»   » ನಟ ದರ್ಶನ್ ಚಿತ್ರಕ್ಕೆ ಸಿಪಿ ಯೋಗೀಶ್ವರ್ ಪುತ್ರಿ ನಿಶಾ

ನಟ ದರ್ಶನ್ ಚಿತ್ರಕ್ಕೆ ಸಿಪಿ ಯೋಗೀಶ್ವರ್ ಪುತ್ರಿ ನಿಶಾ

Posted By:
Subscribe to Filmibeat Kannada
Actress Nisha Yogeshwar
ಕನ್ನಡ ಬೆಳ್ಳಿಪರದೆಗೆ ಮತ್ತೊಬ್ಬ ಬೆಡಗಿಯ ಆಗಮನವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರಕ್ಕೆ ಈ ಬೆಡಗಿ ಅಡಿಯಿಡುತ್ತಿದ್ದಾರೆ. ಈಕೆ ಬೇರಾರು ಅಲ್ಲ ಹಾಲಿ ಚನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ಅವರ ಪುತ್ರಿ ನಿಶಾ ಯೋಗೇಶ್ವರ್.

ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಅಂಬರೀಷ' ಚಿತ್ರದಲ್ಲಿ ನಿಶಾ ಅವರು ನಾಯಕಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಟಿ ಪ್ರಿಯಾಮಣಿ ಸಹ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮಹೇಶ್ ಸುಖಧರೆ.

ಸೌತ್ ಬ್ಯೂಟಿ ಅಮಲಾ ಪೌಲ್ ಅವರನ್ನು ಕರೆತರಲು ಮಹೇಶ್ ಪ್ರಯತ್ನಿಸಿದ್ದರು, ಆದರೆ ಡೇಟ್ಸ್ ಹೊಂದಾಣಿಕೆಯಾಗದೆ ಆ ಜಾಗಕ್ಕೆ ನಿಶಾ ಯೋಗೀಶ್ವರ್ ಅವರನ್ನು ಕರೆತರುತ್ತಿದ್ದಾರೆ. ಸದ್ಯಕ್ಕೆ ಮಾತುಕತೆ ಆಗಿದ್ದು ಕೆಲವೇ ದಿನಗಳಲ್ಲಿ ಎಲ್ಲವೂ ಫೈನಲ್ ಆಗುತ್ತದೆ ಎನ್ನುತ್ತವೆ ಮೂಲಗಳು.

ಇನ್ನೊಂದು ಮೂಲದ ಪ್ರಕಾರ, ಈಗಾಗಲೆ ಇಬ್ಬರೂ 'ಅಂಬರೀಷ' ಚಿತ್ರದಲ್ಲಿ ಅಭಿನಯಿಸಲು ಅಂಕಿತ ಹಾಕಿದ್ದು, ಫೋಟೋಶೂಟ್ ಸಹ ಮುಗಿದಿದೆಯಂತೆ. ಆಗಸ್ಟ್ 15ರಂದು ಚಿತ್ರ ಸೆಟ್ಟೇರುತ್ತಿರುವುದು ಮತ್ತೊಂದು ವಿಶೇಷ.

ಮಹೇಶ್ ಸುಖಧರೆ ಅವರು ಈ ಹಿಂದೆ ಸಿಪಿ ಯೋಗೀಶ್ವರ್ ಅವರೊಂದಿಗೆ 'ಸೈನಿಕ' ಚಿತ್ರ ಮಾಡಿದ್ದರು. ಈಗ ಅವರ ಮಗಳನ್ನು ಬೆಳ್ಳೆಪರದೆಗೆ ಪರಿಚಯಿಸುತ್ತಿದ್ದಾರೆ. ಇನ್ನು ನಿಶಾ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಅಪ್ಪನ ಪರ ಪ್ರಚಾರದಲ್ಲೂ ಭಾಗಿಯಾಗಿದ್ದರು. (ಏಜೆನ್ಸೀಸ್)

English summary
CP Yogeshwar, present MLA of Channapatna, daughter Nisha Yogeshwar make her Sandalwood debut opposite Challenging Star Darshan in Ambareesha.
Please Wait while comments are loading...