»   » ದಶಕದ ಬಳಿಕ ಮತ್ತೆ ತೆರೆಯ ಮೇಲೆ ಬರ್ತಿದ್ದಾರೆ 'ಸೈನಿಕ' ಯೋಗೇಶ್ವರ್

ದಶಕದ ಬಳಿಕ ಮತ್ತೆ ತೆರೆಯ ಮೇಲೆ ಬರ್ತಿದ್ದಾರೆ 'ಸೈನಿಕ' ಯೋಗೇಶ್ವರ್

Posted By:
Subscribe to Filmibeat Kannada

ಸುಮಾರು ಒಂದೂವರೆ ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಸಿ.ಪಿ ಯೋಗೇಶ್ವರ್ ಅವರು ಮತ್ತೆ ಬಣ್ಣ ಹಚ್ಚುವ ಇರಾದೆಯಲ್ಲಿದ್ದಾರೆ. 'ಸೈನಿಕ' ಚಿತ್ರದ ಮೂಲಕ ಮನೆಮಾತಾಗಿದ್ದ ನಟ ಕಮ್ ರಾಜಕೀಯ ವ್ಯಕ್ತಿ ಯೋಗೇಶ್ವರ್ ಮತ್ತೊಂದು ಚಿತ್ರ ಮಾಡುವ ಉತ್ಸಾಹದಲ್ಲಿದ್ದಾರೆ.

ಹಲವಾರು ವರ್ಷಗಳ ಗ್ಯಾಪ್ ತೆಗೆದುಕೊಂಡು ಮತ್ತೆ ಗಾಂಧಿನಗರಕ್ಕೆ ವಾಪಸಾಗಿರುವ ಯೋಗೇಶ್ವರ್ ಅವರು 'ಸೈನಿಕ 2' ಚಿತ್ರ ಮಾಡುವ ಯೋಚನೆ ಮಾಡಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಕೂಡ ಈಗಿನಿಂದಲೇ ಶುರು ಹಚ್ಚಿಕೊಂಡಿದ್ದಾರೆ.[ನಟ ದರ್ಶನ್ ಚಿತ್ರಕ್ಕೆ ಸಿಪಿ ಯೋಗೀಶ್ವರ್ ಪುತ್ರಿ ನಿಶಾ]

2002 ರಲ್ಲಿ ಸಾಕ್ಷಿ ಶಿವಾನಂದ್ ಅವರ ಜೊತೆ 'ಸೈನಿಕ' ಚಿತ್ರ ಮಾಡಿದ ಸಿ.ಪಿ ಯೋಗೇಶ್ವರ್ ಅವರಿಗೆ ಆ ಚಿತ್ರದಿಂದ ಸಾಕಷ್ಟು ಯಶಸ್ಸು ಸಿಕ್ಕಿತ್ತು. ತದನಂತರ ಚಿತ್ರರಂಗದಿಂದ ದೂರವಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಇದೀಗ ಮತ್ತೆ ಬಣ್ಣ ಹಚ್ಚಲು ಮನಸ್ಸು ಮಾಡಿರುವ ಸಿ.ಪಿ ಯೋಗೇಶ್ವರ್ ಅವರು 'ಸೈನಿಕ' ಚಿತ್ರದ ಮುಂದುವರಿದ ಭಾಗವನ್ನು ಬಹಳ ವಿಭಿನ್ನವಾಗಿ ಮಾಡುವ ಆಲೋಚನೆ ಮಾಡಿದ್ದಾರೆ. ಅಷ್ಟಕ್ಕೂ ಅವರಿಗೆ ಇದೀಗ ಸಿನಿಮಾ ಮಾಡುವ ಯೋಚನೆ ಬಂದಿದ್ದಾದರೂ ಏಕೆ ಅನ್ನೋದಕ್ಕೆ ಉತ್ತರ ಕೆಳಗಿನ ಸ್ಲೈಡುಗಳಲ್ಲಿ...

ಸೈನಿಕರ ಕುರಿತು ಸಂಪೂರ್ಣ ಚಿತ್ರಣ

ಇದುವರೆಗೂ ನಮ್ಮ ದೇಶದ ಸೈನಿಕರ ಕುರಿತು ಸಂಪೂರ್ಣ ವಿವರವಾಗಿ ಯಾರೂ ಚಿತ್ರ ಮಾಡಿಲ್ಲ. ಹಾಗಾಗಿ ಇತ್ತೀಚೆಗೆ ನಡೆದಂತಹ ಹಲವು ಘಟನೆಗಳನ್ನು ಇಟ್ಟುಕೊಂಡು, ಅವರ ಕುರಿತಾಗಿ ಇನ್ನಷ್ಟು ವಿಷಯಗಳನ್ನು ಕಲೆ ಹಾಕಿ ಸಿನಿಮಾ ಮಾಡುವ ಯೋಚನೆ ಸಿ.ಪಿ.ಯೋಗೇಶ್ವರ್ ಅವರದು.

ದೇಶಪ್ರೇಮ ಹೆಚ್ಚಿಸುವ ಸಿನಿಮಾ

ಸೈನಿಕರ ಇಡೀ ಜೀವನವನ್ನು ಸವಿಸ್ತಾರವಾಗಿ ಸಿನಿಮಾದ ಮೂಲಕ ತೋರಿಸಿ ಮನಕಲಕುವಂತಹ ಸಿನಿಮಾ ಮತ್ತು ದೇಶಪ್ರೇಮವನ್ನು ಹೆಚ್ಚಿಸುವಂತಹ ಕಥೆಯನ್ನು ತೆರೆಯ ಮೇಲೆ ತೋರಿಸಬೇಕು ಅನ್ನೋ ಕನಸನ್ನು ಇದೀಗ ನನಸು ಮಾಡಲು ಹೊರಟಿದ್ದಾರೆ ಯೋಗೇಶ್ವರ್ ಅವರು.

ಸೈನಿಕರ ಸ್ಥಿತಿ-ಗತಿ ತೆರೆಯ ಮೇಲೆ

ಚಿತ್ರರಂಗದಲ್ಲಿ ಹಲವು ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಆದರೆ ದೇಶ ಕಾಯುವ ಯೋಧರ ಬಗ್ಗೆ ಹೆಚ್ಚಾಗಿ ಯಾವುದೇ ಸಿನಿಮಾಗಳು ಬರುತ್ತಿಲ್ಲ. ಹೀಗಾಗಿ 'ಸೈನಿಕ 2' ಮಾಡಲು ಯೋಗೇಶ್ವರ್ ಸಿದ್ಧರಾಗಿದ್ದಾರೆ.

ಇತ್ತೀಚಿನ ಬೆಳವಣಿಗೆಗಳು ಸ್ಫೂರ್ತಿ

ಇತ್ತೀಚೆಗೆ ನಡೆದಂತಹ ಹಲವಾರು ಬೆಳವಣಿಗೆಗಳನ್ನು ಇಟ್ಟುಕೊಂಡು, ಸೈನಿಕರ ಸ್ಥಿತಿ-ಗತಿ, ಅವರಿಗಾಗುವ ಸಮಸ್ಯೆ, ಕುಟುಂಬ ಪಡುತ್ತಿರುವ ನೋವು, ಅವರು ಎಷ್ಟರಮಟ್ಟಿಗೆ ದೇಶದ ರಕ್ಷಣೆ ಮಾಡುತ್ತಾರೆ ಮುಂತಾದ ವಿಚಾರಗಳನ್ನು ಸಿನಿಮಾದಲ್ಲಿ ತರುವ ಆಲೋಚನೆ ಯೋಗೇಶ್ವರ್ ಅವರದು.

ಸಿಯಾಚಿನ್ ದುರಂತ ಆಧಾರ

ಸಿಯಾಚಿನ್ ದುರಂತದಲ್ಲಿ ಹುತಾತ್ಮರಾದ ಕರ್ನಾಟಕದ ಯೋಧರ ಕಥೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲು ಯೋಗೇಶ್ವರ್ ಬಯಸಿದ್ದಾರೆ. ಮಿಲಿಟರಿ ಕ್ಯಾಂಪ್ ನಲ್ಲಿ ಶೂಟಿಂಗ್ ಮಾಡಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಅನುಮತಿ ಪಡೆಯಲು ಯೋಗೇಶ್ವರ್ ಆಲೋಚನೆ ಮಾಡಿದ್ದಾರೆ.

ನೈಜ ಕಥೆ

'ಇಂಡಿಯನ್ ಡಿಫೆನ್ಸ್ ನ ಸಹಾಯ ತೆಗೆದುಕೊಂಡು, ನೈಜತೆ ಜೊತೆಗೆ ಕೆಲ ವಿಷಯ ಇಟ್ಟುಕೊಂಡು ಕಥೆ ಹೆಣೆಯಲಾಗುತ್ತದೆ. ಇಲ್ಲಿ ಬುದ್ಧಿವಂತ ತಂಡವೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ' ಎಂದು ಯೋಗೇಶ್ವರ್ ತಿಳಿಸಿದ್ದಾರೆ. ಚಿತ್ರತಂಡದ ಸದಸ್ಯರನ್ನು ಗೌಪ್ಯವಾಗಿ ಇಡಲಾಗಿದೆ.

English summary
Politician and actor, CP Yogeshwar, who is still remembered for his film Sainika, released in 2002, had the extrasensory perception of the need of the audience during the time. He is now planning to make a comeback with Sainika II.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada