For Quick Alerts
  ALLOW NOTIFICATIONS  
  For Daily Alerts

  ವಿನೋದ್ ಪ್ರಭಾಕರ್ ನಟನೆಯ 'ಕ್ರ್ಯಾಕ್' ಚಿತ್ರದ ಬಿಡುಗಡೆಯ ದಿನಾಂಕ ನಿಗದಿ

  By Naveen
  |

  ವಿನೋದ್‌ ಪ್ರಭಾಕರ್‌ ನಟನೆಯ 'ಕ್ರ್ಯಾಕ್' ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಎಲ್ಲ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡಿದೆ.

  'ಟೈಸನ್' ಸಿನಿಮಾದ ನಂತರ ನಟ ವಿನೋದ್‌ ಪ್ರಭಾಕರ್‌ 'ಕ್ರ್ಯಾಕ್' ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿಯೂ ಅವರು ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ಖದರ್ ತೋರಿಸಿದ್ದಾರೆ. ವಿಶೇಷ ಅಂದರೆ ಈ ಹಿಂದೆ 'ಟೈಸನ್' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಮ್ ನಾರಾಯಣ್ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ.

  'ಪ್ರತಿಯೊಬ್ಬನಲ್ಲೂ ಒಬ್ಬ ಮೆಂಟಲ್ ವ್ಯಕ್ತಿ ಇರುತ್ತಾನೆ. ಸಣ್ಣ ವಿಷಯಕ್ಕೂ ಕ್ರ್ಯಾಕ್ ನಂತೆ ವರ್ತಿಸುತ್ತಾನೆ' ಎಂಬ ವಿಷಯದ ಮೇಲೆ ಚಿತ್ರದ ಕಥೆ ಇದೆಯಂತೆ. ಇದೊಂದು ಪಕ್ಕಾ ಆಕ್ಷನ್ ಇರುವ ಕಮರ್ಷಿಯಲ್ ಸಿನಿಮಾವಾಗಿದೆಯಂತೆ. 'ಆರ್​ಎಕ್ಸ್ ಸೂರಿ' ಖ್ಯಾತಿಯ ಆಕಾಂಕ್ಷಾ ಚಿತ್ರದ ನಾಯಕಿಯಾಗಿದ್ದು, ಡಾ.ಶಮಿತಾ ಮಲ್ನಾಡ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಂದಹಾಗೆ, 'ಕ್ರ್ಯಾಕ್' ಸಿನಿಮಾ ಇದೇ ತಿಂಗಳ 15 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

  English summary
  Vinod Prabhakar starrer Kannada Movie 'Crack'is all set to release on september 15th all over Karnataka. The movie is directed by Ram Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X