»   » ಕ್ರೇಜಿಸ್ಟಾರ್ ಬರ್ತ್‌ಡೇಗೆ ತೆರೆದುಕೊಳ್ಳಲಿದೆ ಕ್ರೇಜಿಲೋಕ

ಕ್ರೇಜಿಸ್ಟಾರ್ ಬರ್ತ್‌ಡೇಗೆ ತೆರೆದುಕೊಳ್ಳಲಿದೆ ಕ್ರೇಜಿಲೋಕ

Posted By:
Subscribe to Filmibeat Kannada

ಕ್ರೇಜಿಲೋಕ ಸಿನಿಮಾ ಸಿದ್ಧಗೊಂಡು ತಿಂಗಳುಗಳೇ ಆಗಿಹೋಗಿದೆ. ಕವಿತಾ ಲಂಕೇಶ್ ನಿರ್ದೇಶನದ, ರವಿಚಂದ್ರನ್, ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ ಅಭಿನಯವಿರುವ ಈ ಚಿತ್ರದ ಆಡಿಯೋ ಬಿಡುಗಡೆಯಾಗಿಯೇ ಸಾಕಷ್ಟು ಸಮಯವಾಯ್ತು. ಆದರೆ ಇನ್ನೂ ಬಿಡುಗಡೆಯ ಭಾಗ್ಯ ಒದಗಿ ಬಂದಿಲ್ಲ.

ನಿರ್ಮಾಪಕ ಕಿಂಗ್ ರವಿ ಪ್ರಕಾರ ಥೇಟರುಗಳ ಅಭಾವ ಮತ್ತು ದೊಡ್ಡ ಚಿತ್ರಗಳ ಅಬ್ಬರವೇ ಈ ವಿಳಂಬಕ್ಕೆ ಕಾರಣ. ಆದಾಗ್ಯೂ ಕ್ರೇಜಿಲೋಕದ ಬಿಡುಗಡೆಗಾಗಿ ಅವರೂ ಸಾಕಷ್ಟು ಓಡಾಡುತ್ತಿದ್ದರು. ಅದಕ್ಕೆ ಈಗ ಮುಹೂರ್ತ ನಿಗದಿಯಾಗಿದೆ. ಇದೇ ತಿಂಗಳ ಮೂವತ್ತನೇ ತಾರೀಖು ರವಿಚಂದ್ರನ್ ಅವರ ಹುಟ್ಟುಹಬ್ಬವಿರುವುದರಿಂದ, ಅದೇ ನೆವದಲ್ಲಿ ಈ ಚಿತ್ರವನ್ನೂ ಬಿಡುಗಡೆ ಮಾಡಿಬಿಡುವುದು ಚಿತ್ರತಂಡದ ಯೋಜನೆ.

ಖುದ್ದು ರವಿಚಂದ್ರನ್ ಈ ಸಿನಿಮಾ ಬಗ್ಗೆ ಜಾಸ್ತಿ ಹೇಳಿಕೊಂಡಿಲ್ಲವಾದರೂ, ಅವರ ಮತ್ತೆ ಬೇರೆ ಇನ್ಯಾವುದೇ ಸಿನಿಮಾ ಈ ಸಲದ ಹುಟ್ಟುಹಬ್ಬದಂದು ಸಿದ್ಧವಿಲ್ಲವಾದ್ದರಿಂದ ಕ್ರೇಜಿಲೋಕ ಈ ಅವಕಾಶವನ್ನ ತಾನು ಬಳಸಿಕೊಳ್ಳುವ ಸಾಧ್ಯತೆಗಳು ನಿಚ್ಛಳವಾಗಿವೆ. ಟಿಪಿಕಲ್ ರವಿಚಂದ್ರನ್ ಸಿನಿಮಾವಲ್ಲದಿದ್ದರೂ, ಅವರ ಸಿನಿಮಾಗಳಲ್ಲಿ ಕಂಡು ಬರುವ ಶೃಂಗಾರ ಮತ್ತು ಹಾಸ್ಯವನ್ನ ಕ್ರೇಜಿಲೋಕ ಕೂಡಾ ಕಟ್ಟಿಕೊಡಲಿದೆ ಎಂಬ ಭರವಸೆ ಕೊಡುತ್ತಾರೆ ನಿರ್ದೇಶಕಿ ಕವಿತಾ ಲಂಕೇಶ್. (ಒನ್‌ಇಂಡಿಯಾ ಕನ್ನಡ)

English summary
Crazy Star Ravichandran's Crazy Loka film to be released on his birthday 31st May 2012. Its a love, sentiment and action has got a U/A certificate from the regional censor board. Kavitha Lankesh directed movie V Ravichandran, Daisy Boppana, Harshika Poonachcha, Dr Bharathi Vishnuvardhana are in the cast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada