»   » ಶಿರಡಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬರ್ತ್ ಡೇ

ಶಿರಡಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಬರ್ತ್ ಡೇ

Posted By:
Subscribe to Filmibeat Kannada
ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಪಾಠಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂದೋ ಎಳ್ಳುನೀರು ಬಿಟ್ಟಿದ್ದಾರೆ. ಈ ಬಾರಿಯ ಅವರ 52ನೇ ಹುಟ್ಟುಹಬ್ಬಕ್ಕೂ ಅವರು ಬೆಂಗಳೂರಿನಲ್ಲಿರುವುದಿಲ್ಲ. ಬದಲಾಗಿ ಕುಟುಂಬ ಸಮೇತ ಶಿರಡಿಗೆ ಹೋಗುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, "ಈ ಬಾರಿಯ ನನ್ನ ಹುಟ್ಟುಹಬ್ಬ ಶಿರಡಿಯಲ್ಲಿ ಆಚರಿಸಿಕೊಳ್ಳಬೇಕೆಂದಿದ್ದೇನೆ. ಕುಟುಂಬ ಸಮೇತ ನಾನು ಶಿರಡಿಗೆ ಹೋಗುತ್ತಿದ್ದೇನೆ. ಬೆಂಗಳೂರಿಗೆ ಬರುವುದು ಎರಡು ಮೂರು ದಿನ ಆಗಬಹುದು...

ಹಾಗಾಗಿ ನನ್ನ ಅಭಿಮಾನಿಗಳು ಯಾರೂ ಮೇ 30ರಂದು ರಾಜಾಜಿನಗರದ ಮನೆಗೆ ಬರುರುವುದು ಬೇಡ" ಎಂದು ವಿನಂತಿಸಿಕೊಂಡಿದ್ದಾರೆ. ಆದರೆ ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದು ಉಡುಗೊರೆಯನ್ನೂ ನೀಡುತ್ತಿದ್ದಾರೆ.

ಅದೇನೆಂದರೆ ತಮ್ಮ ಇಬ್ಬರು ಪುತ್ರರನ್ನೂ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ತಮ್ಮ ಇಬ್ಬರು ಪುತ್ರರಾದ ಮನೋರಂಜನ್ ಮತ್ತು ವಿಕ್ರಂ ಅವರ ಸ್ಕ್ರೀನ್ ನೇಮ್ ಸಹ ಬದಲಾಯಿಸುತ್ತಿದ್ದಾರೆ. ದೊಡ್ಡ ಮಗನಿಗೆ ಆರ್ ಆರ್ಯನ್ ಎಂದೂ ಚಿಕ್ಕವನಿಗೆ ಆರ್ ಸೂರ್ಯನ್ ಎಂದು ನಾಮಕರಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ಇತ್ತೀಚೆಗೆ ರವಿಚಂದ್ರನ್ ಸಹ ತಮ್ಮ ಸ್ಕ್ರೀನ್ ನೇಮ್ ಬದಲಾಯಿಸಿಕೊಂಡಿದ್ದರು. ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ತಮ್ಮ ಹೆಸರನ್ನು ರವಿಚಂದರನ್ (Ravichandaran) ಎಂದು ಬದಲಾಯಿಸಿಕೊಂಡಿದ್ದರು.

ಇದರ ಜೊತೆಗೆ ರವಿಚಂದ್ರನ್ ಅವರು ತಮ್ಮ ಹಿರಿಯ ಪುತ್ರನಿಗಾಗಿ ಮೂರು ಕಥೆಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಈ ಚಿತ್ರಗಳ ಶೀರ್ಷಿಕೆಯನ್ನೂ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅವಳು ಆವರಿಸಿದಳು, ಅಂದು ಹಾಗೂ ಅಪೂರ್ವ ಎಂಬ ಚಿತ್ರಗಳು ಅವರ ಬರ್ತ್ ಡೇ ದಿನವೇ ಅನೌನ್ಸ್ ಆಗಲಿವೆ. (ಒನ್ಇಂಡಿಯಾ ಕನ್ನಡ)

English summary
Kannada films dream marchant, Crazy Star V Ravichandran celebrates his 52nd birthday in Shirdi on 30th May 30, 2013. He changed his son Manoranjan and Vikram screen names as R Aryan and R Suryan.
Please Wait while comments are loading...