twitter
    For Quick Alerts
    ALLOW NOTIFICATIONS  
    For Daily Alerts

    ಬರ್ತಡೇ ಬಾಯ್ ರವಿಚಂದ್ರನ್ ಚಿತ್ರಗಳಲ್ಲಿ ನಿಮಗಾವುದಿಷ್ಟ?

    |

    ವಯಸ್ಸಾದಂತೆ ನಮ್ಮ ಕನಸುಗಾರ ರವಿಚಂದ್ರನ್ ಹ್ಯಾಂಡ್ಸಮ್ ಆಗಿ ಕಾಣಿಸುತ್ತಿದ್ದಾರೆ. ಸಿನಿಮಾನೇ ಸರ್ವಸ್ವ ಎಂದು ಬದುಕಿರುವ ರವಿ ಸರ್ ಗೆ ಇಂದು 54ನೇ (30.05.1961) ಹುಟ್ಟುಹಬ್ಬದ ಸಂಭ್ರಮ.

    ತಾಂತ್ರಿಕತೆಯ ಪರಿಪೂರ್ಣ ಜ್ಞಾನ, ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ. ಹೆಣ್ಣನ್ನು ತನ್ನ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸುವ ಶೈಲಿಗೆ ರವಿಚಂದ್ರನ್ ಅವರಿಗೆ ಇನ್ನೊಬ್ಬರು ಸಾಟಿ ಇದುವರೆಗೂ ಸ್ಯಾಂಡಲ್ ವುಡ್ ನಲ್ಲಿ ಬಂದಿಲ್ಲ.

    ರಾಜಾಜಿನಗರದ ತನ್ನ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರವಿಚಂದ್ರನ್, ಇತ್ತೀಚಿನ ವರ್ಷಗಳಲ್ಲಿ ಮನೆಯಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

    ಸಿನಿಮಾ ವೃತ್ತಿ ಜೀವನದಲ್ಲಿ ಸೋಲು ಮತ್ತು ಗೆಲುವಿನ ರುಚಿ ಕಂಡಿರುವ ರವಿಚಂದ್ರನ್ ಸದ್ಯ ಸಿನಿಮಾ ಜೊತೆಜೊತೆಗೆ ಕಿರುತೆರೆಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನೆಗೆಟಿವ್ ಫೀಲ್ ಬರುವ, ಸಮಾಜಕ್ಕೆ ತಪ್ಪು ಸಂದೇಶ ಸಾರುವ ಚಿತ್ರಗಳನ್ನು ನಾನು ನಿರ್ದೇಶನ ಮಾಡಲು ಹೋಗೋಲ್ಲ. ಇತರ ಭಾಷೆಯ ಚಿತ್ರದ ದೃಶ್ಯಗಳನ್ನು ಕದಿಯುವ ಅಭ್ಯಾಸವಿಲ್ಲ ಎಂದು ನೇರವಾಗಿ ಮಾತನಾಡುವ ರವಿಚಂದ್ರನ್ ನಿರ್ದೇಶನದ ಇಪ್ಪತ್ತು ಚಿತ್ರಗಳು ಇದುವರೆಗೆ ಬಿಡುಗಡೆಯಾಗಿದೆ.

    ಅವರ ನಿರ್ದೇಶನದ ಅಪೂರ್ವ ಚಿತ್ರೀಕರಣದ ಹಂತದಲ್ಲಿದ್ದು, ಇನ್ನೊಂದು ರವಿ ಕನಸಿನ ಮಂಜಿನಹನಿ ಯಾವ ಹಂತದಲ್ಲಿದೆ ಎನ್ನುವುದು ಗೊತ್ತಿಲ್ಲ.

    ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಅವರು ನಟಿಸಿ, ನಿರ್ದೇಶಿಸಿದ ಸೂಪರ್ ಹಿಟ್ ಮತ್ತು ಸೋತ ಚಿತ್ರಗಳ ಒಂದು ಸಣ್ಣ ಝಲಕ್ ಸ್ಲೈಡಿನಲ್ಲಿ..

    ಪ್ರೇಮಲೋಕ

    ಪ್ರೇಮಲೋಕ

    ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆ ಬರೆದ ಚಿತ್ರ ಪ್ರೇಮಲೋಕ. ರವಿಚಂದ್ರನ್, ಜೂಹಿ ಚಾವ್ಲಾ, ಲೀಲಾವತಿ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1987ರಲ್ಲಿ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಈ ಚಿತ್ರದ ಹಾಡಿನ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೂ ದೊಡ್ಡ ಬ್ರೇಕ್ ನೀಡಿತು.

    ರಣಧೀರ

    ರಣಧೀರ

    1988ರಲ್ಲಿ ಬಿಡುಗಡೆಯಾದ ಮತ್ತೊಂದು ಸೂಪರ್ ಹಿಟ್ ಚಿತ್ರ ರಣಧೀರ. ರವಿಚಂದ್ರನ್, ಖುಷ್ಬೂ, ಅನಂತ್ ನಾಗ್, ಸುಧೀರ್, ಮಾಸ್ಟರ್ ಮಂಜುನಾಥ್ ಚಿತ್ರದ ತಾರಾಗಣದಲ್ಲಿದ್ದರು.

    ಕಿಂದರಿಜೋಗಿ

    ಕಿಂದರಿಜೋಗಿ

    ರವಿಚಂದ್ರನ್ ನಿರ್ದೇಶಿಸಿ, ನಾಯಕ ನಟನಾಗಿ ಕಾಣಿಸಿಕೊಂಡ ಕಿಂದರಿಜೋಗಿ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಜೂಹಿ ಚಾವ್ಲಾ, ಲೋಕೇಶ್, ಬಾಲಕೃಷ್ಣ, ಮುಖ್ಯಮಂತ್ರಿ ಚಂದ್ರು ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರ 1989ರಲ್ಲಿ ಬಿಡುಗಡೆಯಾಗಿತ್ತು.

    ಶಾಂತಿಕ್ರಾಂತಿ

    ಶಾಂತಿಕ್ರಾಂತಿ

    ರವಿ ವೃತ್ತಿಗೆ ಮತ್ತೊಮ್ಮೆ ಸೋಲು ಉಣಿಸಿದ ಚಿತ್ರ ಶಾಂತಿಕ್ರಾಂತಿ. ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾದ ಈ ಚಿತ್ರದ ತೆಲುಗು ಆವೃತ್ತಿಯಲ್ಲಿ ನಾಗಾರ್ಜುನ ಕಾಣಿಸಿಕೊಂಡಿದ್ದರು. ಜೂಹಿ ಚಾವ್ಲಾ, ಖುಷ್ಬೂ, ಅನಂತನಾಗ್, ಶ್ರೀನಾಥ್ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

    ಪುಟ್ನಂಜ

    ಪುಟ್ನಂಜ

    ಪತ್ತಿಕಾದ ಪಟ್ಟನಾಮ್ ತಮಿಳು ಚಿತ್ರದ ರಿಮೇಕ್ ಪುಟ್ನಂಜ. 1995ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್, ಮೀನಾ, ಉಮಾಶ್ರೀ, ಲೋಕೇಶ್ ಪ್ರಮುಖ ತಾರಾಗಣದಲ್ಲಿದ್ದರು. ಚಿತ್ರದಲ್ಲಿನ ಉಮಾಶ್ರೀ ಅಭಿನಯ ಭಾರೀ ಪ್ರಶಂಸೆಗೆ ಒಳಗಾಗಿತ್ತು.

    ಸಿಪಾಯಿ

    ಸಿಪಾಯಿ

    ರವಿಚಂದ್ರನ್, ಚಿರಂಜೀವಿ, ಸೌಂದರ್ಯ, ತಾರಾ, ಉಮಾಶ್ರೀ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರ 1996ರಲ್ಲಿ ಬಿಡುಗಡೆಯಾಗಿತ್ತು.

    ಕಲಾವಿದ

    ಕಲಾವಿದ

    1997ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರವಿಚಂದ್ರನ್, ರೋಜ, ಡಾಲಿ, ಉಮಾಶ್ರೀ, ವೈಶಾಲಿ ಕಾಸರವಳ್ಳಿ ಮುಂತಾದವರಿದ್ದರು.

    ಏಕಾಂಗಿ

    ಏಕಾಂಗಿ

    ರವಿಚಂದ್ರನ್ ಅವರಿಗೆ ಭಾರೀ ನೋವು ನೀಡಿದ ಚಿತ್ರ ಏಕಾಂಗಿ. ಚಿತ್ರ ಬಾಕ್ಸಾಫೀಸ್ ನಲ್ಲಿ ಭಾರೀ ಸೋಲು ಅನುಭವಿಸಿತು. ರವಿಚಂದ್ರನ್, ರಮ್ಯಕೃಷ್ಣ, ಪ್ರಕಾಶ್ ರೈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

    ಅಹಂ ಪ್ರೇಮಾಸ್ಮಿ

    ಅಹಂ ಪ್ರೇಮಾಸ್ಮಿ

    2005ರಲ್ಲಿ ಬಿಡುಗಡೆಯಾದ ಈ ಚಿತ್ರ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ರವಿ ಸಹೋದರ ಬಾಲಾಜಿ, ರವಿಚಂದ್ರನ್, ಆರತಿ ಚಾಬ್ರಿಯಾ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

    ಹಠವಾದಿ

    ಹಠವಾದಿ

    2006ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್, ರಾಧಿಕಾ, ಶರಣ್, ದೊಡ್ಡಣ್ಣ ಮುಂತಾದವರಿದ್ದರು.

    English summary
    Crazy star Ravichandran Birthday special: He acted and simultaneously directed ten movies list.
    Monday, June 1, 2015, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X