»   » ರವಿಮಾಮನ 'ಮಂಜಿನಹನಿ' 3ನೇ ಬಾರಿ ಶೂಟಿಂಗ್

ರವಿಮಾಮನ 'ಮಂಜಿನಹನಿ' 3ನೇ ಬಾರಿ ಶೂಟಿಂಗ್

By: ಜೀವನರಸಿಕ
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ರ ಪ್ರತೀ ಹುಟ್ಟಹಬ್ಬಕ್ಕೂ ಅವರ ಅಭಿಮಾನಿಗಳ ಮನಸ್ಸಲ್ಲಿ ಅದೊಂದು ಪ್ರಶ್ನೆ ಸದಾ ಕಾಡುತ್ತಿರುತ್ತೆ. ಆ ಪ್ರಶ್ನೆಗೆ ಹೆದರಿ ರವಿಮಾಮ ಕಳೆದಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳೋಕೂ ಮನಸ್ಸು ಮಾಡಿರಲಿಲ್ಲ. ಈಗ ಮತ್ತೆ ರವಿಮಾಮನ ಹುಟ್ಟುಹಬ್ಬ ಹತ್ತಿರವಾಗ್ತಿದೆ. ಆ ಪ್ರಶ್ನೆ ಮತ್ತೆ ಸಿನಿಪ್ರೇಮಿಗಳ ಮನಸ್ಸಲ್ಲಿದೆ.

ಅದು 'ಮಂಜಿನಹನಿ'. ಅದೊಂದು ಸಿನಿಮಾ ಅನೌನ್ಸ್ ಮಾಡಿದ ರವಿಚಂದ್ರನ್ ಮೂರು ವರ್ಷಗಳಾದ್ರೂ ಸಿನಿಮಾ ರಿಲೀಸ್ ವರೆಗೂ ತಂದಿಲ್ಲ. ಹೀಗೆ ಹೇಳಿ ಪ್ರತೀ ವರ್ಷ ಕಳೆದಾಗ್ಲೂ ಏನೋ ವಿಶೇಷವಾದದ್ದನ್ನ ಮಾಡ್ತಿದ್ದಾರೆ ಅದಕ್ಕೆ ಲೇಟಾಗ್ತಿದೆ ಅಂತ ಅಂದುಕೊಂಡ ಅಭಿಮಾನಿಗಳು 'ಮಂಜಿನ ಹನಿ'ಯ ಫಸ್ಟ್ ಲುಕ್ ನೋಡ್ಕೊಂಡು ಸುಮ್ಮನಾಗ್ತಿದ್ದಾರೆ. [ಕಿಚ್ಚ ಸುದೀಪ್ ಗೆ ಅಪ್ಪನಾಗಿ ಕ್ರೇಜಿಸ್ಟಾರ್]


ಇದ್ರ ನಡುವೆ 'ಕ್ರೇಜಿಸ್ಟಾರ್' ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ ಗೆ ಬಂದು ನಿಂತಿದೆ. ಅದನ್ನ ಯಾವಾಗ ರಿಲೀಸ್ ಮಾಡ್ತಾರೆ? ಮತ್ತೊಮ್ಮೆ ರವಿಚಂದ್ರನ್-ಪ್ರಿಯಾಂಕಾ ಜೋಡಿ ಒಂದಾಗಿರೋ ಥ್ರಿಲ್ ಅನುಭವಿಸೋ ಕಾತರ ಬೇರೆ ಸಿನಿಪ್ರೇಮಿಗಳಲ್ಲಿದೆ. [ಊರಿಗೊಬ್ಳೆ ಪದ್ಮಾವತಿ ನಮಿತಾ]

2007ರಲ್ಲಿ ಆರಂಭವಾದ 'ಮಂಜಿನಹನಿ' ಚಿತ್ರ 2013ರ ಜನವರಿಯಲ್ಲೇ ತೆರೆಕಾಣುತ್ತದೆ ಎಂದಿದ್ದರು. ಈಗ 2014 ಬರುತ್ತಿದೆ. ಈಗಾಗಲೆ ಮಂಜಿನ ಹನಿಗೆ ನೀರಿನಂತೆ ಹಣ ಖರ್ಚಾಗಿದೆ. ರವಿಚಂದ್ರನ್ ಚಿತ್ರದ ನಿರ್ಮಾಪಕ, ನಿರ್ದೇಶಕ, ಕಥೆಗಾರ, ಚಿತ್ರಕಥೆಗಾರ, ಸಂಭಾಷಣೆಕಾರ, ನಾಯಕ! ಸಂಗೀತ ಮಾತ್ರ ಹರಿಕೃಷ್ಣ. ಈ ವರ್ಷವಾದರೂ ತೆರೆಕಾಣುತ್ತಾ?

English summary
Manjina Hani is a much ambitious project for Crazy Star V.Ravichandran. There are 7 different avatars of the crazy star in this movie. It has taken almost 7 years to nearly complete this movie. Ravichandran claims that this is not an ordinary movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada