»   » ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ

ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ

Posted By:
Subscribe to Filmibeat Kannada
ಬಿಗ್ ಬಾಸ್ ಅಯ್ಯಪ್ಪನಿಗೆ ಬೋಲ್ಡ್ ಆದ ಕನ್ನಡ ನಟಿ | Filmibeat Kannada

ಕನ್ನಡದ ನಟಿ ಅನು ಪೂವಮ್ಮ ಜೊತೆ ಬಿಗ್ ಬಾಸ್ ಖ್ಯಾತಿಯ ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ಇತ್ತೀಚಿಗಷ್ಟೆ ನಿಶ್ಚಿತಾರ್ಥ ನಡೆದಿದೆ.

ಬಿಗ್ ಬಾಸ್ ಮುಗಿದ ನಂತರವೇ ಅಯಪ್ಪ ಹಾಗೂ ಅನು ಪೂವಮ್ಮ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು ಸದ್ಯ ಇಬ್ಬರು ಮನೆಯವರು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೆ ನಡೆದ ಸಮಾರಂಭದಲ್ಲಿ ಎರಡು ಕುಟುಂಬದ ಗುರು ಹಿರಿಯರು ಹಾಗೂ ಬಂಧುಗಳು ಹಾಜರಿದ್ದು ಅಯ್ಯಪ್ಪ ಹಾಗೂ ಅನು ಜೋಡಿ ಪರಸ್ಪರ ಉಂಗುರವನ್ನು ಬದಲಿಸಿಕೊಂಡು ಅಧಿಕೃತವಾಗಿ ಜೋಡಿ ಆಗಿದ್ದಾರೆ.

Cricketer NC Ayyappa got engaged with actress Anu Pooamma

ಅನು ಪೂವಮ್ಮ ಅವರು ಕನ್ನಡದ ಕರ್ವ, ಕಥಾವಿಚಿತ್ರ, ಲೈಫ್ ಸೂಪರ್, ಪಾನಿಪುರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮುದ್ದು ಲಕ್ಷ್ಮೀ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಮುಂದಿನ ವರ್ಷ ಕೊಡಗಿನ ವಿರಾಜಪೇಟೆಯಲ್ಲಿ ಮದುವೆಯಾಗಲಿದೆ.

Cricketer NC Ayyappa got engaged with actress Anu Pooamma

ಅಯ್ಯಪ್ಪ ಅವರು ಕನ್ನಡದ ನಟಿ ಪ್ರೇಮ ಅವರ ಸಹೋದರ. ರಿಯಾಲಿಟಿ ಶೋ ಬಿಗ್ ಬಾಸ್ ಹಾಗೂ ಕ್ರಿಕೆಟ್ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

English summary
Cricketer NC Ayyappa got engaged with actress Anu Pooamma. engagement were held in the Kodava tradition in Vasant nagar, Bangalore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X