»   »  'ಕಿರಿಕ್ ಪಾರ್ಟಿ' ನೋಡಿ ಫುಲ್ ಖುಷ್ ಆದ ಭಾರತ ಕ್ರಿಕೆಟ್ ತಂಡದ ಆಟಗಾರ

'ಕಿರಿಕ್ ಪಾರ್ಟಿ' ನೋಡಿ ಫುಲ್ ಖುಷ್ ಆದ ಭಾರತ ಕ್ರಿಕೆಟ್ ತಂಡದ ಆಟಗಾರ

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಸುದ್ದಿ ಮಾಡಿರುವ ಚಿತ್ರ. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಬ್ಲ್ಯಾಕ್ ಬಸ್ಟರ್ ಸಿನಿಮಾ.

ಇಂತಹ ಸೂಪರ್ ಹಿಟ್ ಚಿತ್ರವನ್ನ ಇತ್ತೀಚೆಗಷ್ಟೇ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರನೊಬ್ಬ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಬಗ್ಗೆ, ಚಿತ್ರಕಥೆ ಬಗ್ಗೆ, ಅಭಿನಯದ ಬಗ್ಗೆ ಹಾಗೂ ನಿರ್ದೇಶನ ಬಗ್ಗೆ ಪ್ರಶಂಸೆಯ ನುಡಿಗಳನ್ನ ನುಡಿದಿದ್ದಾರೆ. ಈ ಆಟಗಾರ ಕನ್ನಡದಲ್ಲಿ ಮಾತನಾಡಿರುವುದು ಮತ್ತೊಂದು ವಿಶೇಷ.['ಕಿರಿಕ್ ಪಾರ್ಟಿ' ನೋಡಿ ಎಂಜಾಯ್ ಮಾಡಿದ ತೆಲುಗು ನಟ ಯಾರು.?]

ಅಷ್ಟಕ್ಕೂ, 'ಕಿರಿಕ್ ಪಾರ್ಟಿ' ಚಿತ್ರವನ್ನ ನೋಡಿದ ಆ ಕ್ರಿಕೆಟ್ ಆಟಗಾರ ಯಾರು? ಸಿನಿಮಾ ನೋಡಿ ಏನಂದ್ರು? ಮುಂದೆ ಓದಿ....

'ಕಿರಿಕ್ ಪಾರ್ಟಿ' ನೋಡಿದ ಶ್ರೀಶಾಂತ್

ಭಾರತ ಕ್ರಿಕೆಟ್ ತಂಡದ ವೇಗಿ ಎಸ್.ಶ್ರೀಶಾಂತ್ ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರವನ್ನ ನೋಡಿದ್ದಾರೆ. ಶ್ರೀಶಾಂತ್ ಗಾಗಿ ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಪ್ರದರ್ಶನವನ್ನ ಅಯೋಜಿಸಿದ್ದರು.[ಅಟ್ಲಾಂಟಾ ನಗರದಲ್ಲಿ ಮಿನುಗುತ್ತಿದೆ ಕನ್ನಡದ 'ಕಿರಿಕ್ ಪಾರ್ಟಿ']

ಚಿತ್ರದ ಬಗ್ಗೆ ಶ್ರೀಶಾಂತ್ ಏನು ಹೇಳಿದರು

''ತುಂಬಾ ಚೆನ್ನಾಗಿದೆ. ತುಂಬಾ ಪ್ರೆಶ್ ಆಗಿದೆ. ಕಾಲೇಜ್ ದಿನ ಹಾಗೂ ಸ್ಕೂಲ್ ದಿನಗಳನ್ನ ನೆನಪಿಸುತ್ತೆ. ಸೂಪರ್ ಹಿಟ್ ಚಿತ್ರ. ನನಗೆ ವಿಶೇಷವಾದ ಸ್ಕ್ರೀನಿಂಗ್ ತೋರಿಸಿದ್ದು, ನನಗೆ ಖುಷಿ ಕೊಟ್ಟಿದೆ. ಮ್ಯೂಸಿಕ್, ಸ್ಕ್ರೀನ್ ಪ್ಲೇ ಉತ್ತಮವಾಗಿದೆ. ಇದೊಂದು ಫರ್ಫೆಕ್ಟ್ ಕನ್ನಡ ಚಿತ್ರವೆಂದು ಸಂತಸ ವ್ಯಕ್ತಪಡಿಸಿದ್ದಾರೆ''- ಎಸ್.ಶ್ರೀಶಾಂತ್, ಭಾರತದ ತಂಡದ ಕ್ರಿಕಟಿಗ [ಕನ್ನಡಿಗರಿಗೆ ಹೆಮ್ಮೆ ತಂದ 'ಕಿರಿಕ್ ಪಾರ್ಟಿ' ಚಿತ್ರತಂಡ]

'ಆಪ್ತಮಿತ್ರ' ಕೊನೆಯ ಚಿತ್ರ ನೋಡಿದ್ದರಂತೆ

ಡಾ.ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಕನ್ನಡದ 'ಆಪ್ತಮಿತ್ರ' ಚಿತ್ರವನ್ನ ಶ್ರೀಶಾಂತ್ ಕೊನೆಯದಾಗಿ ನೋಡಿದ್ದರಂತೆ. ಅದಾದ ನಂತರ 'ಕಿರಿಕ್ ಪಾರ್ಟಿ' ನೋಡಿದ್ದು ತುಂಬಾ ವಿಶೇಷವಾಗಿದೆಯಂತೆ.['ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ']

ರಕ್ಷಿತ್ ಶೆಟ್ಟಿ ಅಭಿನಯ ಮೆಚ್ಚಿದ ಕ್ರಿಕೆಟಿಗ

'ಕಿರಿಕ್ ಪಾರ್ಟಿ' ಚಿತ್ರದಲ್ಲಿನ ರಕ್ಷಿತ್ ಶೆಟ್ಟಿ ಅಭಿನಯವನ್ನ ಶ್ರೀಶಾಂತ್ ಹಾಡಿ ಹೊಗಳಿದ್ದಾರೆ. ಹಾಗೇ, ಇಬ್ಬರು ನಟಿಯರು ಮತ್ತು ಕಲಾವಿದರು ಕೂಡ ಅತ್ಯುತ್ತಮವಾಗಿ ನಟಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.['ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

ರೀಮೆಕ್ ನಲ್ಲಿ ನಟಿಸುವ ಲೆಕ್ಕಾಚಾರ?

ಅಂದ್ಹಾಗೆ, 'ಕಿರಿಕ್ ಪಾರ್ಟಿ' ಚಿತ್ರ ನೂರು ದಿನ ಯಶಸ್ವಿ ಪ್ರದರ್ಶನದ ನಂತರ ಶ್ರೀಶಾಂತ್ ಅವರಿಗಾಗಿ ಸ್ಪೆಷಲ್ ಶೋ ಅಯೋಜಿರುವುದು ಕುತೂಹಲ ಹುಟ್ಟಿಸಿದೆ. ಹಾಗೆ, ರೀಮೇಕ್ ನಲ್ಲಿ ಶ್ರೀಶಾಂತ್ ಅಭಿನಯಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಆದ್ರೆ, ಅದಕ್ಕೆ ಸದ್ಯ ಉತ್ತರವಿಲ್ಲ.

ಶತದಿನ ಆಚರಿಸಿದ್ದ 'ಕಿರಿಕ್ ಪಾರ್ಟಿ'

ಕಳೆದ ಡಿಸೆಂಬರ್ 30 ರಂದು ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಸಿನಿಮಾ ಇತ್ತೀಚೆಗಷ್ಟೇ ಶತದಿನವನ್ನ ಆಚರಿಸಿಕೊಂಡಿದೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು.

English summary
Recently, Cricketer Sreesanth Watched the Kannada movie Kirik Party and appreciated it a lot. The Movie Directed by Rishab Shetty, and Starring Rakshith Shetty, Rashmika Mandanna, Samyukath hegde.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X