For Quick Alerts
  ALLOW NOTIFICATIONS  
  For Daily Alerts

  ಶಿವರಾಜ್‌ ಕುಮಾರ್ ಮನೆಗೆ ಹಳೆಯ ಗೆಳೆಯ ವೆಂಕಟೇಶ್ ಪ್ರಸಾದ್ ಭೇಟಿ

  |

  ಶಿವರಾಜ್ ಕುಮಾರ್ ನಿವಾಸ ಈಗ ಕನ್ನಡ ಚಿತ್ರರಂಗದ ಶಕ್ತಿ ಕೇಂದ್ರವಾಗಿದೆ. ಶಿವಣ್ಣನಿಗೆ ಚಂದನವನದ ಜವಾಬ್ದಾರಿ ವಹಿಸಿದಮೇಲೆ ಶಿವಣ್ಣನ ನಿವಾಸಕ್ಕೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

  KABZA A NEW VISION OF UNDERWORLD PHOTOSHOOT | UPENDRA | KABZA | R CHANDRU| Filmibeat Kannada

  ಇತ್ತೀಚೆಗಷ್ಟೆ ಡಿ.ಕೆ.ಶಿವಕುಮಾರ್, ಸಿಟಿ ರವಿ ಅಂಥಹಾ ಸಕ್ರಿಯ ರಾಜಕೀಯದ ಪ್ರಭಲ ನಾಯಕರು ಭೇಟಿ ನೀಡಿದ್ದರು. ಇದೀಗ ಮಾಜಿ ಕ್ರಿಕೆಟಿಗರೊಬ್ಬರು ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

  ಶಿವಣ್ಣ ಬಗ್ಗೆ ಪುನೀತ್‌ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್ಶಿವಣ್ಣ ಬಗ್ಗೆ ಪುನೀತ್‌ಗೆ ಎರಡು ತಿಂಗಳ ಹಿಂದೆ ಸಲಹೆ ನೀಡಿದ್ದರು ಜಗ್ಗೇಶ್

  ಶಿವರಾಜ್ ಕುಮಾರ್ ಅವರ ಹಳೆಯ ಸ್ನೇಹಿತರೂ ಆಗಿರುವ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಇಂದು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಆರ್.ಚಂದ್ರು, ಕೆ.ಪಿ.ಶ್ರೀಕಾಂತ್ ಸಹ ಜೊತೆಯಲ್ಲಿದ್ದರು.

  ಇಬ್ಬರೂ ಹಳೆಯ ಸ್ನೇಹಿತರು

  ಇಬ್ಬರೂ ಹಳೆಯ ಸ್ನೇಹಿತರು

  ಶಿವರಾಜ್ ಕುಮಾರ್ ಹಾಗೂ ವೆಂಕಟೇಶ್ ಪ್ರಸಾದ್ ಹಳೆಯ ಸ್ನೇಹಿತರು. ಮುಂಚೆ ಕೆಲವು ಬಾರಿ ಒಟ್ಟಿಗೆ ಕ್ರಿಕೆಟ್ ಆಡಿದ್ದು ಸಹ ಉಂಟು. ಕರ್ನಾಟಕದ ಸಾಕಷ್ಟು ಕ್ರಿಕೆಟಿಗರೊಂದಿಗೆ ಶಿವರಾಜ್ ಕುಮಾರ್ ಉತ್ತಮ ಸ್ನೇಹ ಹೊಂದಿದ್ದಾರೆ. ಅನಿಲ್ ಕುಂಬ್ಳೆ ಸಹ ಶಿವಣ್ಣನಿಗೆ ಆತ್ಮೀಯರು.

  ಶಿವಣ್ಣನಿಗೆ ಕ್ರಿಕೆಟ್ ಅಚ್ಚು-ಮೆಚ್ಚು

  ಶಿವಣ್ಣನಿಗೆ ಕ್ರಿಕೆಟ್ ಅಚ್ಚು-ಮೆಚ್ಚು

  ಶಿವರಾಜ್‌ ಕುಮಾರ್ ಅವರಿಗೆ ಕ್ರಿಕೆಟ್‌ ಎಂದರೆ ಪಂಚಪ್ರಾಣ. ಕೊರೊನಾ ಸಮಯದಲ್ಲಿ ತಮ್ಮ ನಿವಾಸದ ಬಳಿ ಬಾರಿ ಕ್ರಿಕೆಟ್ ಆಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ ಶಿವಣ್ಣ. ಈ ಕ್ರಿಕೆಟ್ ಆಟಕ್ಕೆ ಸಿನಿಮಾದ ಕೆಲವು ಸ್ನೇಹಿತರನ್ನು ಆಹ್ವಾನಿಸುತ್ತಾರೆ.

  ಶಿವಣ್ಣ ಮನೆಯಲ್ಲಿ ಮಹತ್ವದ ಸಭೆ: ಯಾವೆಲ್ಲಾ ನಟರು ಹಾಜರಿದ್ದರು?ಶಿವಣ್ಣ ಮನೆಯಲ್ಲಿ ಮಹತ್ವದ ಸಭೆ: ಯಾವೆಲ್ಲಾ ನಟರು ಹಾಜರಿದ್ದರು?

  ರಣಜಿ ತಂಡಕ್ಕೆ ಪ್ರಯತ್ನಿಸಿದ್ದರು

  ರಣಜಿ ತಂಡಕ್ಕೆ ಪ್ರಯತ್ನಿಸಿದ್ದರು

  ಉತ್ತಮ ಕ್ರಿಕೆಟ್ ಪಟು ಆಗಿದ್ದ ಶಿವರಾಜ್ ಕುಮಾರ್, ತಮಿಳುನಾಡು ರಣಜಿ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗುವ ಕನಸು ಇಟ್ಟುಕೊಂಡಿದ್ದರು. ಆದರೆ ಕೊನೆಯ ಹಂತದಲ್ಲಿ ಶಿವರಾಜ್ ಕುಮಾರ್ ಆಯ್ಕೆ ಆಗಲಿಲ್ಲ. ನಂತರ ಅವರ ಸಿನಿಮಾ ರಂಗಕ್ಕೆ ಬಂದರು.

  ಕ್ರಿಕೆಟ್ ಟೂರ್ನಿಗೆ ತಪ್ಪದೆ ಹಾಜರ್

  ಕ್ರಿಕೆಟ್ ಟೂರ್ನಿಗೆ ತಪ್ಪದೆ ಹಾಜರ್

  ಕನ್ನಡ ಸಿನಿಮಾ ರಂಗದಿಂದ ಆಯೋಜಿತವಾಗುವ ಕ್ರಿಕೆಟ್ ಟೂರ್ನಿಗಳಿಗೆ ತಪ್ಪದೆ ಹಾಜರಾಗುತ್ತಾರೆ ಶಿವರಾಜ್‌ಕುಮಾರ್. ವಯಸ್ಸು 58 ಆದರೂ ಹುಮ್ಮಸ್ಸಿನಿಂದ ಆಟವಾಡುತ್ತಾರೆ ಶಿವರಾಜ್ ಕುಮಾರ್.

  ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

  English summary
  Former cricketer Venkatesh Prasad visited actor Shiva Rajkumar's house on Friday. Shiva Rajkumar has many cricketers friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X