»   » ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ

ದರ್ಶನ್ ತೋಟದ ಮನೆಯಲ್ಲಿ ಆಗಿದ್ದೇನು? ಫುಲ್ ಸ್ಟೋರಿ

Posted By: ಹರಾ
Subscribe to Filmibeat Kannada

ವಿವಾದಗಳನ್ನ ಹುಡುಕಿಕೊಂಡು ತಾವೇ ಹೋಗುತ್ತಾರೋ, ಇಲ್ಲಾ ಕಾಂಟ್ರವರ್ಸಿಗಳೇ ಇವರನ್ನ ಅರಸಿ ಬರುತ್ತವೋ ಗೊತ್ತಿಲ್ಲ. ಒಟ್ನಲ್ಲಿ, ಕಳೆದ ಕೆಲ ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಟೈಮ್ ನೆಟ್ಟಗಿಲ್ಲ.

ಬೇಡದ ವಿಷಯಗಳಿಗೆ ಹೆಚ್ಚು ಸುದ್ದಿಯಾಗುತ್ತಿರುವ ದರ್ಶನ್ ವಿರುದ್ಧ ಇಂದು ಅಪವಾದವೊಂದು ಕೇಳಿಬಂದಿದೆ. ತಮ್ಮ ತೋಟದ ಕೆಲಸಕ್ಕಿದ್ದ ಮಹೇಶ್ ನ ಅನಾರೋಗ್ಯದ ವಿಚಾರದಲ್ಲಿ ದರ್ಶನ್ ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನುವ ಸುದ್ದಿ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲಿ ಪ್ರತಿ ಗಂಟೆಗೊಮ್ಮೆ ಹೆಡ್ ಲೈನ್ ಆಗಿ ಬಿತ್ತರವಾಗುತ್ತಿದೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗಾ ಅನ್ನೋದು?]

ಈ ಹಿಂದೆ ಸಮಾಜಮುಖಿ ಕೆಲಸಗಳಿಂದಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ದರ್ಶನ್, ಈಗ ಈ ರೀತಿ ವರ್ತಿಸುತ್ತಿರುವುದೇಕೆ..? ದರ್ಶನ್ ವಿರುದ್ದ ಕೇಳಿ ಬರುತ್ತಿರುವ ಆರೋಪದಲ್ಲೂ ರಾಜಕೀಯ ಅಡಗಿದೆಯಾ..? ದರ್ಶನ್ ಪರ ವಹಿಸಿರುವ ಅವರ ಅಭಿಮಾನಿಗಳು ಬಿಚ್ಚಿಟ್ಟಿರುವ ಸತ್ಯ ಸಂಗತಿಗಳೇನು..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಮುಂದೆ ಓದಿ....

ದರ್ಶನ್ ವಿರುದ್ದ ಕೇಳಿಬರುತ್ತಿರುವ ಆರೋಪ ಏನು?

ಚಾಮರಾಜನಗರದ ನಿಜಲಿಂಗಪುರ ಗ್ರಾಮದ ಮಹೇಶ್ ದಂಪತಿ ಕಳೆದ ಐದು ವರ್ಷಗಳಿಂದ ತಮ್ಮ ಜೀವನಕ್ಕಾಗಿ ದರ್ಶನ್ ರವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ, ದರ್ಶನ್ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹೇಶ ತನ್ನ ಬಲಗಣ್ಣನ್ನ ಕಳೆದುಕೊಂಡಿದ್ದಾನೆ. ಎತ್ತಿನ ಕೊಂಬು ಮಹೇಶನ ಕಣ್ಣಿಗೆ ತಾಗಿ, ಕಣ್ಣಿನ ಮೂಲಕ ಹಾದು ತಲೆಯ ಭಾಗದಲ್ಲಿ ಬಂದಿತ್ತು. ಮಿದುಳಿನ ನರಗಳಿಗೂ ಗಾಯವಾಗಿದ್ದರಿಂದ ಮಹೇಶನಿಗೆ ಲಕ್ವ ಹೊಡೆದಿದೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ನಿಜವಾದ ದರ್ಶನ]

ಕೆಲಸಗಾರನ ಮೇಲೆ ದರ್ಶನ್ ನಿರ್ಲಕ್ಷ್ಯ?

ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಮಹೇಶ್ ಚಿಕಿತ್ಸೆಗೆ ದರ್ಶನ್ ಸಹಾಯ ಮಾಡಿಲ್ಲ. ಧನ ಸಹಾಯಕ್ಕಂತ ಮಹೇಶ್ ಪತ್ನಿ, ದರ್ಶನ್ ಮನೆಗೆ ತೆರಳಿದ್ದಾಗ, ದರ್ಶನ್ ತಾಯಿ ಹೊರಗಟ್ಟಿದ್ದಾರೆ. ಆ ಕಡೆ ಕೆಲಸ ಮಾಡುವ ಪರಿಸ್ಥಿತಿಯಲ್ಲಿಲ್ಲದೆ, ಈ ಕಡೆ ಚಿಕಿತ್ಸೆಗೆ ದುಡ್ಡು ಇಲ್ಲದೇ ಮಹೇಶ್ ದಂಪತಿ ಕಷ್ಟ ಅನುಭವಿಸುತ್ತಿದ್ದಾರೆ. [ದರ್ಶನ್ ಮನೆ ಮುಂದೆ ಆ ರಾತ್ರಿ ನಡೆದಿದ್ದಾದರೂ ಏನು?]

ದರ್ಶನ್ ಅಭಿಮಾನಿಗಳು ಬಿಚ್ಚಿಟ್ಟಿರುವ ಸತ್ಯ ಸಂಗತಿ ಏನು?

ಆದ ಘಟನೆ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವ ಸುದ್ದಿ ಒಂದಾದರೆ, ದರ್ಶನ್ ಅಧಿಕೃತ ಅಭಿಮಾನಿಗಳ ಬಳಗ 'ಡಿ' ಕಂಪನಿ ಹೇಳುತ್ತಿರುವುದೇ ಬೇರೆ. ಘಟನೆಯ ಸಂಪೂರ್ಣ ವೃತ್ತಾಂತವನ್ನ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿರುವ 'ಡಿ' ಕಂಪನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ಬ್ಯಾಟಿಂಗ್ ಮಾಡಿದೆ. ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿ ಅಂದಿದ್ದಾರೆ. [ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]

ಹಾಗಾದ್ರೆ, ನಿಜ ಸಂಗತಿ ಏನು..?

''ನಿಜ ಸಂಗತಿ ಏನೆಂದರೆ, ಇಲ್ಲಿಯವರೆಗೂ ಮಹೇಶನ ಚಿಕಿತ್ಸೆಗೆ ಆದ ಸಂಪೂರ್ಣ ಖರ್ಚನ್ನು ದರ್ಶನ್ ಭರಿಸಿದ್ದಾರೆ. ಇಲ್ಲಿಯವರೆಗೂ ಮಹೇಶ್ ಪ್ರಾಣ ಉಳಿಸಲು ಖರ್ಚಾದ ಮೊತ್ತ 13 ಲಕ್ಷ ರೂಪಾಯಿಗಳು. ಇಷ್ಟಲ್ಲದೇ ಪ್ರತಿ ತಿಂಗಳು, 10 ಸಾವಿರ ರೂಪಾಯಿಗಳನ್ನು (ಚಿಕಿತ್ಸೆಯ ಖರ್ಚನ್ನು ಹೊರತುಪಡಿಸಿ) ಯಾವುದೇ ಕೆಲಸ ಮಾಡಿಸಿಕೊಳ್ಳದೇ ದರ್ಶನ್ ರವರು ನೀಡುತ್ತಾ ಬಂದಿದ್ದಾರೆ. ಇನ್ನು ಮುಂದೆಯೂ ಮಹೇಶ್ ಚಿಕಿತ್ಸೆ ಖರ್ಚನ್ನು ತಾವೇ ನೋಡಿಕೊಳ್ಳುವುದಾಗಿಯೂ ದರ್ಶನ್ ಭರವಸೆ ನೀಡಿದ್ದಾರೆ.'' - 'ಡಿ' ಕಂಪನಿ.

ಹಣದಾಸೆಗೆ ಸಿಲುಕಿದೆಯಾ ಮಹೇಶ್ ಕುಟುಂಬ?

''ತನ್ನ ನಿರ್ಲಕ್ಷ್ಯತನದಿಂದ ಕಣ್ಣು ಕಳೆದುಕೊಂಡ ಮಹೇಶನಿಗೆ ದರ್ಶನ್ ನೆರವಾಗಿದ್ದಾರೆ. ಇಷ್ಟಾದರೂ ಸಹ ಹಣದ ಆಸೆಗೆ ಸಿಲುಕಿರುವ ಮಹೇಶ್ ಪರಿವಾರವು ದರ್ಶನ್ ಮ್ಯಾನೇಜರ್ ಬಳಿ 25 ಲಕ್ಷ ರೂಪಾಯಿಗಳನ್ನು ನೀಡುವಂತೆ ಧಮಕಿ ಹಾಕಿದ್ದಾರೆ. ಇದಕ್ಕೆ ನಿರಾಕರಿಸಿದಾಗ ದರ್ಶನ್ ವಿರುದ್ಧ ಮೀಡಿಯಾ ಮುಂದೆ ಬಂದಿದ್ದಾರೆ'' - 'ಡಿ' ಕಂಪನಿ.('ಡಿ' ಕಂಪನಿ ಹಾಕಿಕೊಂಡಿರುವ ಸ್ಟೇಟಸ್ ಲಿಂಕ್ ಇಲ್ಲಿದೆ)

ಯಾವುದು ಸತ್ಯ?

ಒಂದ್ಕಡೆ ಮಹೇಶ್ ಕಷ್ಟಕ್ಕೆ ದರ್ಶನ್ ಕ್ಯಾರೆ ಅನ್ನುತ್ತಿಲ್ಲ ಅಂತ ಎಲ್ಲೆಡೆ ಸುದ್ದಿಯಾಗುತ್ತಿದ್ದರೆ, ಇನ್ನೊಂದ್ಕಡೆ ಕಿಡಿಗೇಡಿಗಳ ಪಿತೂರಿ ಅಂತ ದರ್ಶನ್ ಅಭಿಮಾನಿಗಳ ಸಂಘ 'ಡಿ' ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿಲ್ಲ. ಯಾರನ್ನ ನಂಬಬೇಕು ಅಂತ ಹೇಳೋದು ಕಷ್ಟ. ಈ ಬಗ್ಗೆ ದರ್ಶನ್ ಕೂಡ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಎಲ್ಲವೂ ತಣ್ಣಗಾಗಬೇಕಂದ್ರೆ, ದರ್ಶನ್ ಬಾಯಿಬಿಟ್ಟು ಮಾತನಾಡಬೇಕು.

English summary
Kannada actor Darshan Toogudeepa in the news, again for wrong reasons. The actor didn`t support his farm worker with medical allowance who has suffered stroke. While, D Company, being The Official Fan Club of Darshan defends the Actor for rendering Financial Assistance to the Worker Mahesh. But the actor is mum over the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada