Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಮುಂದೆ ಫ್ಯಾಮಿಲಿ ಬಂದು ನನ್ನ ಸಿನಿಮಾ ನೋಡಬೇಕು. ಅದರ ಕಡೆಗೆ ಹೆಚ್ಚು ಗಮನ" ಡಾಲಿ ಧನಂಜಯ್!
ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ, ತೆಲುಗು ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಅವರೇ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ನಟನೆ, ನಿರ್ಮಾಣ ಎರಡೂ ಕಡೆ ಬ್ಯುಸಿಯಾಗಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ವರ್ಷದ ಕೊನೆಯಲ್ಲಿ ಡಾಲಿ ಧನಂಜಯ್ ಅಭಿನಯದ 'ಜಮಾಲಿಗುಡ್ಡ' ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನೊಂದು ವಾರದಲ್ಲಿ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಹೀಗಾಗಿ 'ಜಮಾಲಿಗುಡ್ಡ' ಚಿತ್ರತಂಡ ಗ್ರ್ಯಾಂಡ್ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.
ಕಿಕ್
ಕೊಡುತ್ತಿದೆ
'once
upon
a
time
in
ಜಮಾಲಿಗುಡ್ಡ'
ಈ ಕಾರ್ಯಕ್ರಮದಲ್ಲಿ ಧನಂಜಯ್ ಮುಂದಿನ ದಿನಗಳಲ್ಲಿ ಫ್ಯಾಮಿಲಿ ಇಷ್ಟ ಪಡುವ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಕುಟುಂಬಗಳು ತನ್ನ ಸಿನಿಮಾವನ್ನು ನೋಡುವಂತೆ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಧನಂಜಯ್ ಹಾಗೂ ಅದಿತಿ ಪ್ರಭುದೇವ ಈ ಕಾರ್ಯಕ್ರಮದಲ್ಲಿ ಏನು ಹೇಳಿದ್ದಾರೆ ಅನ್ನೋದರ ಡಿಟೈಲ್ಸ್ ಇಲ್ಲಿದೆ.

'ಎಲ್ಲಾ ಕಲಾವಿದರ ಹೆಸರನ್ನೂ ಕೂಗಿ'
"ಇನ್ನೂ ಜೋರಾಗಿ ಕೂಗಿ. ಎಲ್ಲಾ ಕಲಾವಿದರ ಹೆಸರನ್ನೂ ಕೂಗಿ. ನಾವು ಯಾರನ್ನೆಲ್ಲಾ ನೋಡಿ ಬೆಳೆದಿದ್ದೀವಿ. ಯಾರನ್ನೆಲ್ಲಾ ನೋಡಿ ಕಲಿತಿದ್ದೀವಿ. ಎಲ್ಲಾ ಕಲಾವಿದರ ಹೆಸರು ಜೋರಾಗಿ ಬರಲಿ. ಎಲ್ಲರನ್ನೂ ಪ್ರೀತಿಸಿ. ಎಲ್ಲರೂ ಚೆನ್ನಾಗಿರೋಣ. ಕನ್ನಡ ಚಿತ್ರರಂಗ ಒಂದು. ಅದ್ಬುತವಾದ ಕುಟುಂಬವಾಗಿ ಬೆಳಗಲಿ." ಎಂದು ಜಮಾಲಿಗುಡ್ಡ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಪ್ರೇಕ್ಷಕರಿಗೆ ಕರೆಕೊಟ್ಟಿದ್ದಾರೆ.

ಹಗಲು ಜಮಾಲಿಗುಡ್ಡ ಶೂಟಿಂಗ್.. ರಾತ್ರಿ 'ಪುಷ್ಪ'
"ನನ್ನ ಪಾತ್ರದ ಕ್ರೆಡಿಟ್ ನಿರ್ದೇಶಕರಿಗೆ ಹೋಗಬೇಕು. ಬೆಳಗ್ಗೆ ಇಲ್ಲಿ ಶೂಟಿಂಗ್ ಮಾಡುತ್ತಿದ್ದರೆ. ರಾತ್ರಿ ಇನ್ನೊಂದು ಕಡೆ ಶೂಟಿಂಗ್ ಮಾಡುತ್ತಿದೆ. ಬೆಳಗ್ಗೆ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದರೆ, ರಾತ್ರಿ ಪುಷ್ಪ ಶೂಟಿಂಗ್ ಹೋಗುತ್ತಿದ್ದೆ ಆವಾಗ. ಹೀಗಾಗಿ ಒಂದರಿಂದ ಒಂದಕ್ಕೆ ಲುಕ್‌ಗಳನ್ನು ಬದಲಾಯಿಸಬೇಕಿತ್ತು. ಹಿರೋಶಿಮಾ ಅನ್ನೋ ಪಾತ್ರಕ್ಕೆ ಬೇರೆ ತರಹದ್ದೇ ಒಂದು ಲುಕ್ ಕೊಡೋಣ ಅಂತ ಒಂದು ಲುಕ್ ಫಿಕ್ಸ್ ಆಗಿತ್ತು" ಎಂದು ಡಾಲಿ ಹೇಳಿದ್ದಾರೆ.

"ಮುಂದೆ ಫ್ಯಾಮಿಲಿ ಬಂದು ನನ್ನ ಸಿನಿಮಾ ನೋಡಬೇಕು"
"ಡಾಲಿ ಅಂದಾಗ ನಮ್ಮ ಹುಡುಗರೆಲ್ಲಾ ತುಂಬಾನೇ ಇಷ್ಟ ಪಡೋರು. ಕುಟುಂಬ ಅಂತ ಬಂದಾಗ ಇವನ್ಯಾರೋ ಸೈಕ್ ಇರಬೇಕು ಅಂತ ಅಂದುಕೊಳ್ಳೋರು. ಆದರೆ, ರತ್ನಾಕರ ಹಾಗೂ ಬಡವ ರಾಸ್ಕಲ್ ಕುಟುಂಬಗಳಿಗೆ ನನ್ನನ್ನು ರೀಚ್ ಮಾಡಿಸಿದೆ. ಅದೊಂದು ತುಂಬಾ ದೊಡ್ಡ ಜವಾಬ್ದಾರಿ. ಮುಂದೆ ಫ್ಯಾಮಿಲಿ ಬಂದು ನನ್ನ ಸಿನಿಮಾ ನೋಡಬೇಕು. ಅದರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ." ಎಂದು ಡಾಲಿ ಧನಂಜಯ್ ಹೇಳಿಕೆ ನೀಡಿದ್ದಾರೆ.

ಅದಿತಿ ಪ್ರಭುದೇವ ಹೇಳಿದ್ದೇನು?
"ಯಜಮಾನ್ರು ಮನೆಲಿದ್ದಾರೆ. ಅವರನ್ನು ಕರ್ಕೊಂಡು ಬಂದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ. ಅವರ ಕೆಲಸವನ್ನು ಅವರು ಮಾಡುತ್ತಾರೆ. 100 ಪರ್ಸೆಂಟ್ ಈ ಸಿನಿಮಾವನ್ನು ಕಂಡಿತವಾಗಿಯೂ ಅವರಿಗೆ ತೋರಿಸುತ್ತೇನೆ. ನಿಮಗೋಸ್ಕರ ಸಿಗರೇಟು ಸೇದಿದ್ದೀನಿ ಕಂಡ್ರೋ ಸಿನಿಮಾ ನೋಡ್ರೋ. ಒಂದೇ ಸೆಕೆಂಡ್ ಬರೋದು ಜಾಸ್ತಿ ಎಕ್ಸ್‌ಪೆಕ್ಟೇಷನ್ ಇಟ್ಟುಕೊಳ್ಳಬೇಡಿ." ಎಂದು ಅದಿತಿ ಪ್ರಭುದೇವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.