For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್‌ ಜೊತೆ ಪೊಲೀಸರಿಗೆ ಸಿಕ್ಕಿಬಿದ್ದ ಮಂಗಳೂರಿನ ನಟ: ನಿರೂಪಕಿ ಜೊತೆ ನಂಟು?

  |

  ಮಾದಕ ವಸ್ತು ಹಾಗೂ ಚಿತ್ರರಂಗದ ಸಂಬಂಧ, ಅಗೆದಷ್ಟೂ ಆಳವಾಗಿದ್ದಂತೆ ತೋರುತ್ತಿದೆ. ಡ್ರಗ್ಸ್‌ ಜಾಲದೊಂದಿಗೆ ನಂಟು ಹೊಂದಿದ್ದಾರೆಂಬ ಆರೋಪದಲ್ಲಿ ಈಗಾಗಲೇ ಇಬ್ಬರು ಖ್ಯಾತ ನಟಿಯರನ್ನು ಬಂಧಿಸಲಾಗಿದೆ. ಈ ಮಧ್ಯೆ ಮಾದಕ ವಸ್ತುವಿನೊಂದಿಗೆ ನೇರವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ನಟನೊಬ್ಬ.

  ಹೌದು, ನೃತ್ಯಗಾರ ಹಾಗೂ ನಟನಾಗಿರುವ ಮಂಗಳೂರಿನ ಕಿಶೋರ್ ಅಮನ್ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಅಪಾಯಕಾರಿ ಹಾಗೂ ದುಬಾರಿಯಾದ ಸಿಂಥೆಟಿಕ್ ಡ್ರಗ್ಸ್‌ ಅನ್ನು ವಶಪಡಿಸಿಕೊಂಡಿದ್ದಾರೆ.

  ನಟ ಅಕುಲ್, ಸಂತೋಷ್‌ ಗೆ ಆರೋಪಿ ವೈಭವ್ ಜೊತೆಗಿರುವ ನಂಟು ಎಂಥಹುದು?ನಟ ಅಕುಲ್, ಸಂತೋಷ್‌ ಗೆ ಆರೋಪಿ ವೈಭವ್ ಜೊತೆಗಿರುವ ನಂಟು ಎಂಥಹುದು?

  ಕಿಶೋರ್ ಶೆಟ್ಟಿ ಜೊತೆಗೆ ಅಖಿಲ್ ನೌಶೀಲ್ ಎಂಬಾತನನ್ನೂ ಸಹ ಮಂಗಳೂರು ಪೊಲೀಸರು, ಇಬ್ಬರಿಂದಲೂ ಸಾಕಷ್ಟು ಪ್ರಮಾಣದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

  ನೃತ್ಯಗಾರ ಹಾಗೂ ನೃತ್ಯ ನಿರ್ದೇಶಕ ಕಿಶೋರ್

  ನೃತ್ಯಗಾರ ಹಾಗೂ ನೃತ್ಯ ನಿರ್ದೇಶಕ ಕಿಶೋರ್

  ಕಿಶೋರ್ ಶೆಟ್ಟಿ ನೃತ್ಯಗಾರನಾಗಿದ್ದು, ನೃತ್ಯ ನಿರ್ದೇಶಕ ಸಹ ಆಗಿದ್ದಾನೆ. ಹಿಂದಿಯ ಪ್ರಸಿದ್ಧ ಎಬಿಸಿಡಿ ಸಿನಿಮಾದಲ್ಲಿ ಸಹ ನಟಿಸಿದ್ದಾನೆ. ಆತ ತನ್ನ ಸಹಚರನೊಂದಿಗೆ ಸೇರಿ ಮಾದಕ ವಸ್ತು ವ್ಯಾಪಾರದಲ್ಲಿ ನಿರತನಾಗಿದ್ದ. ಜೊತೆಗೆ ಈತ ವ್ಯಸನಿಯೂ ಆಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  ಮುಂಬೈ ನಲ್ಲಿ ಡ್ರಗ್ಸ್ ಖರೀದಿಸಿ, ಇಲ್ಲಿ ಮಾರಾಟ

  ಮುಂಬೈ ನಲ್ಲಿ ಡ್ರಗ್ಸ್ ಖರೀದಿಸಿ, ಇಲ್ಲಿ ಮಾರಾಟ

  ವಿದೇಶದ ಕೆಲಸ ತೊರೆದು ಹಿಂದುರಿಗಿದ್ದ ಅಖಿಲ್ ನೌಶಿಲ್ ಜೊತೆ ಸೇರಿ ಕಿಶೋರ್ ಮಾದಕ ವಸ್ತು ವ್ಯಾಪಾರ ಮಾಡುತ್ತಿದ್ದು, ಇವರು ಮುಂಬೈ ಗೆ ಹೋಗಿ ಅಲ್ಲಿಂದ ಮಾದಕ ವಸ್ತುವನ್ನು ಖರೀದಿಸಿ, ಮಂಗಳೂರು ಹಾಗೂ ಬೆಂಗಳೂರುಗಳಲ್ಲಿ ಮಾರಾಟ ಮಾಡುತ್ತಿದ್ದರಂತೆ.

  ಬಾಲಿವುಡ್ ಸ್ಟಾರ್‌ಗಳ ಪಾರ್ಟಿ ವಿಡಿಯೋ ವೈರಲ್: ಕರಣ್ ಜೋಹರ್ ವಿರುದ್ಧ ದೂರುಬಾಲಿವುಡ್ ಸ್ಟಾರ್‌ಗಳ ಪಾರ್ಟಿ ವಿಡಿಯೋ ವೈರಲ್: ಕರಣ್ ಜೋಹರ್ ವಿರುದ್ಧ ದೂರು

  ಎಂಡಿಎಂಎ ಪೌಡರ್ ವಶಪಡಿಸಿಕೊಂಡ ಪೊಲೀಸರು

  ಎಂಡಿಎಂಎ ಪೌಡರ್ ವಶಪಡಿಸಿಕೊಂಡ ಪೊಲೀಸರು

  ಶನಿವಾರ ಬೆಳಿಗ್ಗೆ ಇಬ್ಬರನ್ನೂ ಸಹ ಪೊಲೀಸರು ಬಂಧಿಸಿದ್ದು, ಅವರಿಂದ ಎಂಡಿಎಂಎ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಎರಡು ಬೈಕ್, ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ನಿರೂಪಕಿಯೊಂದಿಗೆ ಆಪ್ತತೆ ಹೊಂದಿರುವ ಕಿಶೋರ್?

  ನಿರೂಪಕಿಯೊಂದಿಗೆ ಆಪ್ತತೆ ಹೊಂದಿರುವ ಕಿಶೋರ್?

  ಕಿಶೋರ್ ಶೆಟ್ಟಿಗೆ ಸಾಕಷ್ಟು ನಟಿಯರು ಪರಿಚಯವಿದ್ದರು ಎನ್ನಲಾಗಿದೆ. ಬೆಂಗಳೂರಿನ ಖ್ಯಾತ ನಿರೂಪಕಿ ಮತ್ತು ನಟಿಯೊಂದಿಗೆ ಆಪ್ತ ಸಂಪರ್ಕವಿದ್ದು, ಆಕೆಯೊಂದಿಗೆ ಹಲವು ಪಾರ್ಟಿಗಳನ್ನು ಕಿಶೋರ್ ಕಾಣಿಸಿಕೊಂಡಿದ್ದನಂತೆ. ಪ್ರಾಥಮಿಕ ತನಿಖೆಯಲ್ಲಿ ಕಿಶೋರ್ ಸಾಕಷ್ಟು ಹೆಸರು ಹೇಳಿದ್ದು, ಎಲ್ಲರಿಗೂ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ.

  English summary
  Dancer Kishore arrested by Mangaluru police red handed while having drugs. His friend also arrested.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X