»   » 'ಡಾರ್ಲಿಂಗ್' ಡೈರೆಕ್ಟರ್ ಹೊಸ ಸಿನಿಮಾ ರಂಗ್ ಬಿರಂಗಿ

'ಡಾರ್ಲಿಂಗ್' ಡೈರೆಕ್ಟರ್ ಹೊಸ ಸಿನಿಮಾ ರಂಗ್ ಬಿರಂಗಿ

By: ಜೀವನರಸಿಕ
Subscribe to Filmibeat Kannada

2013ರ ಎವರ್ ಗ್ರೀನ್ ರೆಟ್ರೋ ಹಾಡು "ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್, ವಿ ಗೋ ಜಾಲಿರೈಡು..." ನಿಮಗೆ ನೆನಪಿರಬೇಕು. ಸಿನಿಮಾ ಹೆಸರು ಮರೆತು ಹೋದ್ರೂ ಹಾಡು ನಿಮಗೆ ಸಿನಿಮಾವನ್ನ ನೆನಪಿಸುತ್ತೆ.

ರೆಟ್ರೋ ಸ್ಟೈಲ್ ಡಾರ್ಲಿಂಗ್ ಡಾರ್ಲಿಂಗ್ ಹಾಡಿಗೆ ಕೃಷ್ಣ ಮತ್ತು ನಕ್ಷತ್ರಾ ಶೆಟ್ಟಿ ಜೋಡಿ ಸ್ಟೆಪ್ ಹಾಕಿ ಸೌಂಡ್ ಮಾಡಿದ್ರು. 'ಮದರಂಗಿ' ಸಿನಿಮಾ ಆವರೇಜ್ ಹಿಟ್ ಅನ್ನಿಸಿಕೊಳ್ತು. ಆ ಸಿನಿಮಾ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಈಗ ಹೊಸ ಸ್ಕ್ರಿಪ್ಟ್ ನೊಂದಿಗೆ ತಯಾರಾಗಿದ್ದಾರೆ.

Rang Birangi poster

ಅವರ ಹೊಸ ಸಿನಿಮಾ ಹೆಸರು 'ರಂಗ್ ಬಿರಂಗಿ'. "ಹುಚ್ಚು ಕುದುರೆ ಬೆನ್ನೇರಿ" ಎಂಬುದು ಚಿತ್ರದ ಅಡಿಬರಹ. ಟೈಟಲ್ ನೋಡ್ತಿದ್ರೆ ಮತ್ತೊಂದು ಕಲರ್ ಫುಲ್ ಲವ್ ಸ್ಟೋರಿ ಇದ್ದಂಗಿದೆ. ಹಾಡುಗಳಿಗೆ ತುಂಬಾನೇ ಇಂಪಾರ್ಟೆನ್ಸ್ ಕೊಡ್ತಿರೋ ಮಲ್ಲಿಕಾರ್ಜುನ್ ಈಗಾಗ್ಲೇ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯವರಿಂದ ಹಾಡುಗಳನ್ನ ಕಂಪೋಸ್ ಮಾಡಿಸ್ತಿದ್ದಾರೆ.

ಒಂದು ಹಾಡು ಡಾರ್ಲಿಂಗ್ ಡಾರ್ಲಿಂಗ್ ತರಹ ಮೋಡಿ ಮಾಡಿದ್ರೆ ಸಿನಿಮಾ ಈಸಿಯಾಗುತ್ತೆ ಅನ್ನೋ ಯೋಚನೆ ನಿರ್ದೇಶಕರದ್ದು ಅನ್ನಿಸ್ತಿದೆ. ಹೀರೋ ಹೀರೋಯಿನ್ ಮಾಹಿತಿಯೆಲ್ಲಾ ಸದ್ಯದಲ್ಲೇ ಹೊರಬರುತ್ತೆ.

ಬಹಳ ಹಿಂದೆ ಹಿಂದಿಯಲ್ಲಿ 'ರಂಗ್ ಬಿರಂಗಿ' (1983) ಎಂಬ ಸಿನಿಮಾ ಬಂದಿದೆ. ರಿಷಿಕೇಶ್ ಮುಖರ್ಜಿ ಆಕ್ಷನ್ ಕಟ್ ಹೇಳಿದ ಚಿತ್ರ ಅದಾಗಿದ್ದು, ಪರ್ವೀನ್ ಬಾಬಿ, ಅಮೋಲ್ ಪಾಲೇಕರ್, ಉತ್ಪಲ್ ದತ್ ಮುಂತಾದವರು ಅಭಿನಯಿಸಿದ್ದರು. ಅದೇ ರೀತಿಯ ಕ್ಲಾಸಿಕ್ ಚಿತ್ರ ಇದೂ ಆಗುತ್ತಾ?

English summary
Kannada movie 'Darling' fame Mallikarjuna Muttalageri's upcoming movie titled as 'Rang Birangi'. Sources says, it has also a retro song like "Darling Darlink come come darling we go jolly ride..." in the movie. It's an another colourful musical love story.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada