For Quick Alerts
  ALLOW NOTIFICATIONS  
  For Daily Alerts

  ಮದುವೆಗೆ ಸಿದ್ಧತೆ, ಕಾಂಚೀಪುರದಲ್ಲಿ 'ಲವ್‌ ಮಾಕ್ಟೈಲ್' ಜೋಡಿಯಿಂದ ಶಾಪಿಂಗ್

  |

  'ಲವ್ ಮಾಕ್ಟೈಲ್' ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮದುವೆಗೆ ತಯಾರಿ ಆರಂಭಿಸಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಬಹಿರಂಗಪಡಿಸಿದ್ದ ಲವ್ ಬರ್ಡ್ಸ್ ಸದ್ಯದಲ್ಲೇ ಮದುವೆಯಾಗುವುದಾಗಿ ಹೇಳಿದ್ದರು.

  ಕಂಚಿಗೆ ತೆರಳಿದ ಲವ್ ಬರ್ಡ್ಸ್ | Darling krishna & Milana Nagaraj | Filmibeat Kannada

  ಮದುವೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕೃಷ್ಣ ಮತ್ತು ಮಿಲನ ಜೋಡಿ ಶಾಪಿಂಗ್ ಶುರು ಮಾಡಿದೆ. ತಮಿಳುನಾಡಿನ ಕಾಂಚೀಪುರಂಗೆ ತೆರಳಿರುವ ಕೃಷ್ಣ ಮತ್ತು ಮಿಲನ, ತಮ್ಮ ಮದುವೆಗೆ ಶಾಪಿಂಗ್ ಮಾಡ್ತಿದ್ದಾರೆ.

  ಫೆಬ್ರವರಿ 14ಕ್ಕೆ ಮದುವೆ ಆಗುತ್ತಿರುವುದೇಕೆ, ವಿವಾಹ ಬಳಿಕ ಸಿನಿಮಾ ಮಾಡ್ತಾರಾ? ಮಿಲನಾ ಉತ್ತರ ಇಲ್ಲಿದೆ

  ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಮಿಲನ ನಾಗರಾಜ್ ''ಕಾಂಚೀಪುರಂನಲ್ಲಿ ನಮ್ಮ ವಿಶೇಷ ದಿನಕ್ಕೆ ಶಾಪಿಂಗ್ ಮಾಡುತ್ತಿರುವ ವೇಳೆ'' ಎಂದು ಕ್ಯಾಪ್ಷನ್ ನೀಡಿದ್ದಾರೆ.

  ಅಂದ್ಹಾಗೆ, ಕೃಷ್ಣ ಮತ್ತು ಮಿಲನ ಅವರ ಮದುವೆ 2021ರ ಫೆಬ್ರವರಿ 14 ರಂದು ನಿಶ್ಚಯವಾಗಿದೆ. ಪ್ರೇಮಿಗಳ ದಿನದ ವಿಶೇಷವಾಗಿ ಲವ್ ಮಾಕ್ಟೈಲ್ ಜೋಡಿ ಹೊಸ ಜೀವನ ಆರಂಭಿಸಲಿದೆ.

  ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಮದುವೆ ನಡೆಸಲು ಹಿರಿಯ ನಿರ್ಧರಿಸಿದ್ದಾರೆ. ಆದ್ರೆ, ಎಲ್ಲಿ ಎಂಬ ಸ್ಥಳ ನಿಗದಿ ಮಾಡಿಲ್ಲ.

  ಮದುವೆ ದಿನಾಂಕ ಬಹಿರಂಗ ಪಡಿಸಿದ ಕೃಷ್ಣ-ಮಿಲನಾ ಜೋಡಿ- ವಿಶೇಷ ದಿನದಂದು ಮದುವೆ

  ಲವ್ ಮಾಕ್ಟೈಲ್ ಸಿನಿಮಾದ ಯಶಸ್ಸಿನ ಬಳಿಕ ಲವ್ ಮಾಕ್ಟೈಲ್ 2 ಚಿತ್ರವನ್ನು ಕೈಗೆತ್ತಿಕೊಂಡಿರುವ ಕೃಷ್ಣ-ಮಿಲನ ಶೂಟಿಂಗ್ ಸಹ ಆರಂಭಿಸಿದ್ದರು. ತಮ್ಮ ಮದುವೆಯೊಳಗೆ ಈ ಚಿತ್ರವನ್ನು ಮುಗಿಸುವ ಪ್ಲಾನ್‌ನಲ್ಲಿದ್ದಾರೆ.

  English summary
  Darling Krishna and Milana Nagaraj did Shopping in Kanchipuram for their Wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X