For Quick Alerts
  ALLOW NOTIFICATIONS  
  For Daily Alerts

  ಹೊಸ ಮನೆ ಗೃಹಪ್ರವೇಶ ಮಾಡಿದ ಮಿಲನ - ಕೃಷ್ಣ; ನೂತನ ನಿವಾಸಕ್ಕೆ ಇಟ್ಟ ಹೆಸರೇನು?

  |

  ಚಂದನವನದ ಲವ್ ಬರ್ಡ್ಸ್ ಕಮ್ ದಂಪತಿಗಳಾಗಿರುವ ನಟ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಈ ವಿಷಯವನ್ನು ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ನಟಿ ಮಿಲನ ನಾಗರಾಜ್ ಪೋಸ್ಟ್ ಮಾಡಿಕೊಂಡಿದ್ದು ಗೃಹ ಪ್ರವೇಶದ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ನಟಿ ಮಿಲನಾ ನಾಗರಾಜ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ತಮ್ಮ ನೂತನ ಮನೆಗೆ 'ಕ್ರಿಸ್ಮಿ ನೆಸ್ಟ್' ಎಂದು ಹೆಸರಿಟ್ಟಿದ್ದಾರೆ. ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಹೆಸರುಗಳ ಮೊದಲೆರಡು ಅಕ್ಷರಗಳನ್ನು ತೆಗೆದುಕೊಂಡು ಈ ಹೆಸರನ್ನು ಇಡಲಾಗಿದ್ದು, 'ಕೃಷ್ಣ ಹಾಗೂ ಮಿಲನ ಗೂಡು' ಎಂಬರ್ಥವನ್ನು ಈ ಹೆಸರು ನೀಡಲಿದೆ.

  ದಸರಾ ಸಂಭ್ರಮದಲ್ಲಿ ಪೃಥ್ವಿ-ಮಿಲನಾ ಸಿನಿಮಾ 'F0R REGN'ಗೆ ಬಂಪರ್ ಗಿಫ್ಟ್ ದಸರಾ ಸಂಭ್ರಮದಲ್ಲಿ ಪೃಥ್ವಿ-ಮಿಲನಾ ಸಿನಿಮಾ 'F0R REGN'ಗೆ ಬಂಪರ್ ಗಿಫ್ಟ್

  ಹೀಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ತಮ್ಮ ಗೃಹ ಪ್ರವೇಶದ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು ಬೆಳವಣಿಗೆ ಎಂದರೆ ಹೀಗಿರಬೇಕಪ್ಪಾ, ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗ ಪ್ರವೇಶಿಸಿ ಸಣ್ಣ ಪುಟ್ಟ ಪಾತ್ರ ಮಾಡಿ ನಂತರ ನಾಯಕ ನಟನಾಗಿ ಬಡ್ತಿ ಪಡೆದು ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಬೆಳೆದು ಸದ್ಯ ಸುಂದರ ಸಂಸಾರ ನಡೆಸುತ್ತಾ ಭವ್ಯ ಮನೆ ಕಟ್ಟುವ ಮಟ್ಟಕ್ಕೆ ಡಾರ್ಲಿಂಗ್ ಕೃಷ್ಣ ಬೆಳೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಅತ್ತ ಮಿಲನ ನಾಗರಾಜ್ ಕುರಿತಾಗಿಯೂ ಇದೇ ರೀತಿಯ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

  ಲವ್ ಮಾಕ್ ಟೇಲ್ ಹಾಗೂ ಮಾಕ್ ಟೇಲ್ 2 ಚಿತ್ರಗಳಲ್ಲಿ ನಾಯಕ ಹಾಗೂ ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಸದ್ಯ ಚಂದನವನದ ಯಶಸ್ವಿ ಜೋಡಿಗಳಲ್ಲೊಂದಾಗಿದೆ. ಇನ್ನು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಫಿಲ್ಮ್ ಫೇರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಲವ್ ಮಾಕ್ ಟೇಲ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

  English summary
  Darling Krishna and Milana Nagaraj entered to their new house 'Krissmi Nest'. Read on
  Tuesday, November 8, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X