ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ

ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಈಗಾಗಲೇ ಮದುವೆ ಆಮಂತ್ರಣ ನೀಡುತ್ತಿರುವ ಈ ಜೋಡಿ ಸ್ಯಾಂಡಲ್ ವುಡ್ ಅನೇಕ ಕಲಾವಿದರಿಗೆ ಮದುವೆಯ ಮಮತೆಯ ಕರೆಯೋಲೆ ಮಾಡಿದ್ದಾರೆ.

Recommended Video

ಅದ್ದೂರಿಯಾಗಿ ನಡೆಯಿತು ರಮೇಶ್ ಅರವಿಂದ್ ಮಗಳ ಆರತಕ್ಷತೆ | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಅನೇಕರಿಗೆ ಮದುವೆ ಆಮಂತ್ರಣ ಹೋಗಿದೆ. ಇದೀಗ ಕೃಷ್ಣ ಮತ್ತು ಮಿಲನಾ ಮದುವೆಯ ಆಮಂತ್ರಣ ರಾಕಿಂಗ್ ಯಶ್ ಕೈ ಸೇರಿದೆ. ಹೌದು, ನಿನ್ನೆ ಜನವರಿ 18ರಂದು ಕೃಷ್ಣ ಮತ್ತು ಮಿಲನಾ ಜೋಡಿ ಯಶ್ ಮನೆಗೆ ತೆರಳಿ ಮದುವೆಯ ಕರೆಯೋಲೆ ಮಾಡಿದ್ದಾರೆ.

ವಿವಾಹ ಆಮಂತ್ರಣ ನೀಡಿ, ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಶೇರ್ ಮಾಡಿರುವ ಕೃಷ್ಣ, ವಿಭಿನ್ನವಾಗಿ ಬರೆದುಕೊಂಡಿದ್ದಾರೆ. ಸಿದ್ಧಾರ್ಥ ಲೇಔಟ್ ಪಡುವಾರಳ್ಳಿಯನ್ನು ಭೇಟಿ ಮಾಡಿದೆ. ನಾವು ಮೈಸೂರು ಹುಡುಗರು' ಎಂದು ಬರೆದುಕೊಂಡು ಗಮನ ಸೆಳೆದಿದ್ದಾರೆ.

Darling Krishna and Milana Nagaraj invite Yash for their wedding

ಇತ್ತೀಚಿಗಷ್ಟೆ ಕೃಷ್ಣ ಮತ್ತು ಮಿಲನಾ ಜೋಡಿ ಇಬ್ಬರು ಟಾಲಿವುಡ್ ಸ್ಟಾರ್ ನಟಿ ತಮನ್ನಾ ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ. ಸೂಪರ್ ಹಿಟ್ ಲವ್ ಮಾಕ್ಟೇಲ್ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಚಿತ್ರೀಕರಣದಲ್ಲಿದ್ದರು. ಚಿತ್ರಕ್ಕೆ ಕನ್ನಡದ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರೀಕರಣ ಸೆಟ್ ಗೆ ಭೇಟಿ ನೀಡಿದ್ದ ಕೃಷ್ಣ ಮತ್ತು ಮಿಲನಾ ತಮನ್ನಾ ಭೇಟಿಯಾಗಿ ಮದುವೆ ಆಮಂತ್ರಣ ನೀಡಿದ್ದಾರೆ.

ಅಂದಹಾಗೆ ಕೃಷ್ಣ ಮತ್ತು ಮಿಲನಾ ಜೋಡಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ ದಿನ ಹಸಮಣೆ ಏರುತ್ತಿದ್ದಾರೆ. ಈಗಾಗಲೇ ಮದುವೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಈ ಜೋಡಿ ಸದ್ಯ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಲವ್ ಮಾಕ್ ಟೇಲ್-2 ಸಿನಿಮಾದ ಚಿತ್ರೀಕರಣ ಸಹ ನಡೆಯತ್ತಿದೆ. ಸಿನಿಮಾ ಕೆಲಸಗಳ ನಡುವೆಯೂ ವಿವಾಹ ಆಮಂತ್ರಣ ನೀಡುತ್ತಿದ್ದಾರೆ. ಚಂದನವನದ ಈ ಸುಂದರ ಜೋಡಿಯ ಮದುವೆ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Actor Darling Krishna and Milana Nagaraj invite Yash for their wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X