For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದ 10 ವರ್ಷದ ಪಯಣ: ಇಬ್ಬರು ಸ್ಟಾರ್ ನಟರಿಗೆ ಧನ್ಯವಾದ ತಿಳಿಸಿದ ಡಾರ್ಲಿಂಗ್ ಕೃಷ್ಣ

  |

  ಸ್ಯಾಂಡಲ್ ವುಡ್ ನಟ ಸುನಿಲ್ ನಾಗಪ್ಪ ಹೀಗೆನ್ನುವುದಕ್ಕಿಂತ ಡಾರ್ಲಿಂಗ್ ಕೃಷ್ಣ ಎಂದರೆ ಥಟ್ ಅಂತ ಗೊತ್ತಾಗುತ್ತೆ, ಹೌದು ಕೃಷ್ಣ ಚಿತ್ರರಂಗಕ್ಕೆ ಎಂಟ್ರ ಕೊಟ್ಟು 10 ವರ್ಷಗಳಾಗಿವೆ. ಡಾರ್ಲಿಂಗ್ ಕೃಷ್ಣ ಅಂತಾನೆ ಖ್ಯಾತಿಗಳಿಸಿರುವ ಕೃಷ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದಾರೆ.

  ಇದೇ ವರ್ಷ ಡಾರ್ಲಿಂಗ್ ಲವ್ ಮೋಕ್ಟ್ರೈಲ್ ಜೋಡಿ ಮದುವೆ | Darling Krishna | Milana Nagraj

  ಬರೋಬ್ಬರಿ 10 ವರ್ಷಗಳಿಂದ ಯಶಸ್ಸಿಗಾಗಿ ಶ್ರಮಿಸುತ್ತಿದ್ದ ಕೃಷ್ಣಗೆ ಲವ್ ಮಾಕ್ ಟೇಲ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿದೆ. ಈಗ ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ಮತ್ತು ನಾಯಕನಾಗಿ ಗುರುತಿಸಿಕೊಂಡಿರುವ ಕೃಷ್ಣ, ಈ 10 ವರ್ಷದ ಜರ್ನಿಯಲ್ಲಿ ತನಗೆ ಬೆಂಬಲಕ್ಕೆ ನಿಂತು, ಸಹಾಯ ಮಾಡಿದ ಸ್ಯಾಂಡಲ್ ವುಡ್ ನ ಇಬ್ಬರು ಸ್ಟಾರ್ ನಟರಿಗೆ ಡಾರ್ಲಿಂಗ್ ಕೃಷ್ಣ ಧನ್ಯವಾದ ತಿಳಿಸಿದ್ದಾರೆ. ಮುಂದೆ ಓದಿ..

  'ಲವ್ ಮಾಕ್‌ಟೇಲ್' ಬಿಡುಗಡೆ ಹಿಂದಿನ ದಿನ ಹೇಗಿತ್ತು?: ಕೃಷ್ಣ ಹಂಚಿಕೊಂಡ ತಳಮಳದ ನೆನಪು'ಲವ್ ಮಾಕ್‌ಟೇಲ್' ಬಿಡುಗಡೆ ಹಿಂದಿನ ದಿನ ಹೇಗಿತ್ತು?: ಕೃಷ್ಣ ಹಂಚಿಕೊಂಡ ತಳಮಳದ ನೆನಪು

  ಸಹಾಯಕ ನಿರ್ದೇಶಕನಾಗಿ ಕೆಲಸ ಪ್ರಾರಂಭ

  ಸಹಾಯಕ ನಿರ್ದೇಶಕನಾಗಿ ಕೆಲಸ ಪ್ರಾರಂಭ

  ಡಾರ್ಲಿಂಗ್ ಕೃಷ್ಣ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಾರೆ. ದುನಿಯ ಸೂರಿ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾ ಮೂಲಕ ತೆರೆ ಹಿಂದೆ ಕೆಲಸ ಪ್ರಾರಂಭಿಸಿದ ಕೃಷ್ಣ ನಂತರ ತೆರೆ ಮೇಲೆ ಮಿಂಚಲು ಪ್ರಾರಂಭಿಸುತ್ತಾರೆ. ಪೋಷಕನಟನಾಗಿ, ಕಿರುತರೆಯ ಹೀರೋ ಆಗಿ ನಂತರ ನಾಯಕನಾಗಿ ಮಿಂಚಿ ಈಗ ಯಶಸ್ವಿ ನಿರ್ದೇಶಕನಾಗಿಯೂ ಹೊರಹೊಮ್ಮಿದ್ದಾರೆ.

  'ಹುಡುಗರು' ಸಿನಿಮಾದಲ್ಲಿ ಬಣ್ಣಹಚ್ಚಿದ ಕೃಷ್ಣ

  'ಹುಡುಗರು' ಸಿನಿಮಾದಲ್ಲಿ ಬಣ್ಣಹಚ್ಚಿದ ಕೃಷ್ಣ

  ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ 'ಹುಡುಗರು' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಚಿಕ್ಕ ಪಾತ್ರವೊಂದರಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಎರಡನೇ ಸಿನಿಮಾ ಸಹ ಪವರ್ ಸ್ಟಾರ್ ಜೊತೆಯೇ ಕಾಣಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರವಾದರು ಪ್ರೇಕ್ಷಕರ ಮನದಲ್ಲಿ ಕಾಡುವಂತ ಪಾತ್ರವಾಗಿತ್ತು. ಆ ನಂತರ ಸಿನಿಮಾರಂಗದಿಂದ ಕೊಂಚ ಬ್ರೇಕ್ ಪಡೆದ ಕೃಷ್ಣ ಧಾರಾವಾಹಿ ಕಡೆ ಮುಖ ಮಾಡುತ್ತಾರೆ.

  ಕೃಷ್ಣ-ರುಕ್ಮಿಣಿ ಧಾರಾವಾಹಿ ತಂದುಕೊಟ್ಟ ಖ್ಯಾತಿ

  ಕೃಷ್ಣ-ರುಕ್ಮಿಣಿ ಧಾರಾವಾಹಿ ತಂದುಕೊಟ್ಟ ಖ್ಯಾತಿ

  ಸಿನಿಮಾ ನಂತರ ಕೃಷ್ಣ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃಷ್ಣ-ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಖ್ಯಾತಿಗಳಿಸುತ್ತಾರೆ. ಧಾರಾವಾಹಿ ಎಷ್ಟರ ಮಟ್ಟಿಗೆ ಖ್ಯಾತಿ ತಂದುಕೊಟ್ಟಿತು ಅಂದರೆ ಪಾತ್ರದ ಹೆಸರೇ ನಿಜ ನಾಮವಾಗಿ ಬದಲಾಗಿದೆ. ಈಗನು ಕೃಷ್ಣ ಹೆಸರಿನ ಮೂಲಕವೇ ಕರ್ನಾಟಕದಲ್ಲಿ ಖ್ಯಾತಿಗಳಿಸಿದ್ದಾರೆ.

  'ಮದರಂಗಿ'ಯಲ್ಲಿ ನಾಯಕನಾಗಿ ಮಿಂಚಿದ ಕೃಷ್ಣ

  'ಮದರಂಗಿ'ಯಲ್ಲಿ ನಾಯಕನಾಗಿ ಮಿಂಚಿದ ಕೃಷ್ಣ

  ಕೃಷ್ಣ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ಮದರಂಗಿ ಸಿನಿಮಾದಲ್ಲಿ. ಸಿನಿಮಾ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲವಾದರು, ಹಾಡುಗಳು ಸೂಪರ್ ಹಿಟ್ ಆಯಿತು. ಡಾರ್ಲಿಂಗ್ ಡಾರ್ಲಿಂಗ್...ಹಾಡು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು. ಅಲ್ಲಿಂದ ಕೃಷ್ಣ ಹೆಸರಿನ ಮುಂದೆ ಡಾರ್ಲಿಂಗ್ ಎನ್ನುವುದು ಸಹ ಸೇರಿಕೊಂಡಿತು. ನಂತರ ಡಾರ್ಲಿಂಗ್ ಕೃಷ್ಣ ಆಗಿ ಸಿನಿಪ್ರಿಯರಲ್ಲಿ ಮನ ಗೆದ್ದಿದ್ದಾರೆ.

  ಸಾಲು ಸಾಲು ಸೋಲಿನ ನಂತರ ಗೆದ್ದ ಕೃಷ್ಣ

  ಸಾಲು ಸಾಲು ಸೋಲಿನ ನಂತರ ಗೆದ್ದ ಕೃಷ್ಣ

  ಮದರಂಗಿ ಸಿನಿಮಾ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಲು ಸಾಲು ಸೋಲು ಅನುಭವಿಸಿದ ಕೃಷ್ಣ ನಂತರ ತಾನೆ ನಿರ್ದೇಶಕ್ಕೆ ಇಳಿಯುತ್ತಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕೃಷ್ಣ, ಹೇಗಾದರು ಮಾಡಿ ಎದ್ದು ನಿಲ್ಲಲೇ ಬೇಕೆನ್ನುವ ಛಲ, ಹಠದಿಂದ ಮಾಡಿದ ಸಿನಿಮಾ ಲವ್ ಮಾಕ್ ಟೇಲ್. ನಿರ್ದೇಶನದ ಜೊತೆಗೆ, ನಿರ್ಮಾಣ ಮತ್ತು ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಕಠಿಣ ಶ್ರಮ ಮತ್ತು ಪ್ರೀತಿ ಲವ್ ಮಾಕ್ ಟೇಲ್ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿದೆ. ಸತತ ಪ್ರಯತ್ನ, ಪರಿಶ್ರಮ, ಛಲ ಇದ್ದರೆ ಗೆಲವು ಖಂಡಿತ ಸಾಧ್ಯವಾಗುತ್ತೆ ಎನ್ನುವುದನ್ನು ಕೃಷ್ಣ ನಿರೂಪಿಸಿದ್ದಾರೆ.

  ಪಯಣದಲ್ಲಿ ಸಾಥ್ ನೀಡಿದವರಿಗೆ ಧನ್ಯವಾದ

  ಪಯಣದಲ್ಲಿ ಸಾಥ್ ನೀಡಿದವರಿಗೆ ಧನ್ಯವಾದ

  ಡಾರ್ಲಿಂಗ್ ಕೃಷ್ಣ 10 ವರ್ಷ ಪೂರೈಸಿದ್ದಾರೆ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟರ್ ನೋಡಿ ಪ್ರತಿಕ್ರಿಯೆ ನೀಡಿರುವ ಕೃಷ್ಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  ಡಾರ್ಲಿಂಗ್ ಕೃಷ್ಣ ಹೇಳಿದ್ದೇನು?

  ಡಾರ್ಲಿಂಗ್ ಕೃಷ್ಣ ಹೇಳಿದ್ದೇನು?

  ಇದು ಫೋಟೋ ನನ್ನನ್ನು 10 ವರ್ಷದ ಅದ್ಭುತ ಪಯಣವನ್ನು ನೆನಪಿಸಿದೆ. ಕನಸು, ಕನಸು, ಕನಸು. ಹೌದು, ಕನಸುಗಳು ನನಸಾಗಿವೆ. ನಿಮ್ಮನ್ನು ನೀವು ಅನುಮಾನಿಬೇಡಿ" ಎಂದು ಹೇಳಿದ್ದಾರೆ. ಜೊತೆಗೆ ಈ ಅದ್ಭುತ ಪಯಣದಲ್ಲಿ ಬೆಂಬಲ ನೀಡಿ, ಸಹಾಯಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ

  English summary
  Kannada Actor Darling Krishna Completed 10 years in Film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X