For Quick Alerts
  ALLOW NOTIFICATIONS  
  For Daily Alerts

  ಲವ್ ಮಾಕ್ ಟೇಲ್-2: ನಿಧಿಮಾ ಇಲ್ಲದೆ ಉದ್ದ ಗಡ್ಡ ಬಿಟ್ಟು ಎಂಟ್ರಿ ಕೊಟ್ಟ ಆದಿ

  |

  ಡಾರ್ಲಿಂಗ್ ಕೃಷ್ಣ ಅಭಿನಯದ ಮತ್ತು ನಿರ್ದೇಶನದ 'ಲವ್ ಮಾಕ್ ಟೇಲ್' ಸಿನಿಮಾ ಸಕ್ಸಸ್ ನ ನಂತರ ಈಗ ಲವ್ ಮಾಕ್ ಟೇಲ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಲ್ಲಿ ಕಥೆ ಮಾಡಿ, ಸ್ಕ್ರಿಪ್ಟ್ ಪೂಜೆ ಕೂಡ ಮಾಡಿ ಮುಗಿಸಿದ್ದಾರೆ ಕೃಷ್ಣ ಮತ್ತು ಮಿಲನ ನಾಗರಾಜ್.

  Superstar : Upendra ಅವರಿಗೆ ಮೊದಲ ಬಾರಿಗೆ ಕಥೆ ಹೇಳಿದ ಅನುಭವ ಹೇಗಿತ್ತು | Filmibeat Kannada

  ಇದೀಗ ಲವ್ ಮಾಕ್ ಟೇಲ್-2 ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹೌದು, ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ಲವ್ ಮಾಕ್ ಟೇಲ್ ತಂಡ ಬಹುನಿರೀಕ್ಷೆಯ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಮುಂದೆ ಓದಿ..

  ಸಿನಿಮಾ ಮುಹೂರ್ತ: 'ಲವ್ ಮಾಕ್ ಟೇಲ್' ಬಳಿಕ ಹೊಸ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ

  ಲವ್ ಮಾಕ್ ಟೇಲ್-2 ಲುಕ್

  ಲವ್ ಮಾಕ್ ಟೇಲ್-2 ಲುಕ್

  ಲವ್ ಮಾಕ್ ಟೇಲ್-2 ನಲ್ಲಿ ಡಾರ್ಲಿಂಗ್ ಕೃಷ್ಣ ಉದ್ದ ಗಡ್ಡ ಮತ್ತು ಕೂದಲು ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳದಿ ಬಣ್ಣದ ಟೀ ಶರ್ಟ್ ಧರಿಸಿರುವ ಆದಿ ಯಾವುದೋ ಚಿಂತೆಯಲ್ಲಿ ಮುಳುಗಿದ್ದಾರೆ. ಈ ಪಾರ್ಟ್ ನಲ್ಲಿ ಆದಿ ಪಾತ್ರ ಹೇಗೆ ಮುಂದುವರೆಯಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.

  ಮೊದಲ ಭಾಗ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು

  ಮೊದಲ ಭಾಗ ದೊಡ್ಡ ಮಟ್ಟಕ್ಕೆ ಹಿಟ್ ಆಗಿತ್ತು

  ಲವ್ ಮಾಕ್ ಟೇಲ್ ರಿಲೀಸ್ ಆದ ಕೆಲವೇ ಸಿನಿಮಾಗಳಲ್ಲಿ ಲವ್ ಮಾಕ್ ಟೇಲ್ ಸಿನಿಮಾ ಕೂಡ ಒಂದು. ಸಿನಿಮಾ ನೋಡಿ ಚಿತ್ರ ಪ್ರೇಕ್ಷಕರು ಫಿದಾ ಆಗಿದ್ದರು. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ಆದಿ ಮತ್ತು ನಿಧಿಮಾ ಪಾತ್ರ ನೋಡುಗರನ್ನು ಕಾಡುವಂತೆ ಮಾಡಿದೆ. ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ ಲವ್ ಮಾಕ್ ಟೇಲ್-2 ಮಾಡಲು ನಿರ್ಧರಿಸಿ, ಇದೀಗ ಪೋಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  'ಲವ್ ಮಾಕ್ ಟೇಲ್-2' ಕಥೆ ಕೇಳಿ ಸಖತ್ ಥ್ರಿಲ್ ಆದ ರಘು ದೀಕ್ಷಿತ್

  ಕಥೆ ಕೇಳಿ ಥ್ರಿಲ್ ಆಗಿರುವ ರಘು ದೀಕ್ಷಿತ್

  ಕಥೆ ಕೇಳಿ ಥ್ರಿಲ್ ಆಗಿರುವ ರಘು ದೀಕ್ಷಿತ್

  ಸಿನಿಮಾದ ಕಥೆ ಕೇಳಿ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಖತ್ ಥ್ರಿಲ್ ಆಗಿದ್ದಾರೆ. ಇದೀಗ ಪೋಸ್ಟರ್ ನೋಡಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಸಿನಿಮಾ ತಂಡ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿದೆ.

  ಯಾರೆಲ್ಲ ಇರಲಿದ್ದಾರೆ

  ಯಾರೆಲ್ಲ ಇರಲಿದ್ದಾರೆ

  ಮೊದಲ ಭಾಗದಲ್ಲಿ ಅಭಿಮಾನಿಗಳನ್ನು ಕಾಡಿದ ನಿಧಿಮಾ ಪಾತ್ರ ಅಂತ್ಯವಾಗಿತ್ತು. ಪಾರ್ಟ್-2ನಲ್ಲಿಯೂ ಈ ಪಾತ್ರ ಮುಂದುವರೆಯುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ. ಇನ್ನೂ 'ಹೆಂಗೆ ನಾವು....' ನೋಡುಗರ ಹೃದಯ ಕದ್ದ ರಚನಾ ಪಾತ್ರ ಮುಂದುವರೆಯುತ್ತಾ ಎನ್ನುವುದು ಸಹ ಸದ್ಯದ ಕುತೂಹಲ. ಒಟ್ನಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಲವ್ ಮಾಕ್ ಟೋಲ್-2 ಬರ್ತಿದೆ. ಸದ್ಯ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.

  English summary
  Darling Krishna starrer most expected Love Mocktail-2 movie first look released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X