For Quick Alerts
  ALLOW NOTIFICATIONS  
  For Daily Alerts

  'ಲವ್ ಮಾಕ್ಟೇಲ್-2' ಸಿನಿಮಾ ಡಿಸೆಂಬರ್ ಗೆ ರಿಲೀಸ್?

  |

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ ಲವ್ ಮಾಕ್ಟೇಲ್. ಪ್ರೇಮಕಥೆ ಒಳಗೊಂಡ ಈ ಸಿನಿಮಾ ಕನ್ನಡ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಈ ವರ್ಷಾರಂಭದಲ್ಲಿ ತೆರೆಗೆ ಬಂದ ಲವ್ ಮಾಕ್ಟೇಲ್ ಚಿತ್ರಪ್ರೇಕ್ಷರಿಗೆ ಭರ್ಜರಿ ಮನರಂಜನೆ ನೀಡಿತ್ತು.

  ಲವ್ ಮಾಕ್ಟೇಲ್ ಸೂಪರ್ ಹಿಟ್ ಆಗುತ್ತಿದ್ದಂತೆ ಪಾರ್ಟ್-2 ಮಾಡಲು ಸಿನಿಮಾತಂಡ ನಿರ್ಧರಿಸಿ ಈಗಾಗಲೇ ಬಹುತೇಕ ಚಿತ್ರೀಕರಣ ಸಹ ಮುಗಿಸಿದ್ದಾರೆ. ಹೌದು, ಲವ್ ಮಾಕ್ಟೇಲ್ ಪಾರ್ಟ್-2 ಶೇ 60ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಸಂಕಲನ ನಡೆಯುತ್ತಿದೆ ಎಂದು ನಿರ್ದೇಶಕ ಮತ್ತು ನಟ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  'ಲವ್ ಮಾಕ್ಟೈಲ್ 2' ಚಿತ್ರಕ್ಕೆ ನಾಯಕಿ ಸಿಕ್ಕಿದ್ಲು, ಯಾರು ಈ ರಾಚೆಲ್ ಡೇವಿಡ್?'ಲವ್ ಮಾಕ್ಟೈಲ್ 2' ಚಿತ್ರಕ್ಕೆ ನಾಯಕಿ ಸಿಕ್ಕಿದ್ಲು, ಯಾರು ಈ ರಾಚೆಲ್ ಡೇವಿಡ್?

  ಮೊದಲ ಭಾಗದಲ್ಲಿ ಆದಿ ಮತ್ತು ನಿಧಿಮಾ ಪಾತ್ರಗಳು ಪ್ರೇಕ್ಷಕರ ಮನಗೆದ್ದಿತ್ತು. ಆದಿ ಪಾತ್ರ ಪಾರ್ಟಿ-2ನಲ್ಲೂ ಇರಲಿದೆ. ಪ್ರೀತಿಗಾಗಿ ನಾಯಕನ ಪ್ರಯತ್ನ ಇಲ್ಲೂ ಮುಂದುವರೆಯಲಿದೆ ಎಂದು ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.

  ಈಗಾಗಲೇ ಚಿತ್ರತಂಡ ಬೆಂಗಳೂರು, ಮೈಸೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ. ಲಾಕ್ ಡೌನ್ ಬಳಿಕ ಸ್ಕ್ರಿಪ್ಟ್ ಕೆಲಸ ಮುಗಿಸಿ, ಶೂಟಿಂಗ್ ಶುರು ಮಾಡಿರುವ ಕೃಷ್ಣ ಮತ್ತು ತಂಡ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  ಅಂದ್ಹಾಗೆ ಪಾರ್ಟ್-2ನಲ್ಲಿ ಆದಿ ಗೆಳೆಯರೂ ಇರಲಿದ್ದಾರೆ. ಸಿನಿಮಾಗೆ ಹೊಸ ನಾಯಕಿಯ ಎಂಟ್ರಿ ಸಹ ಆಗಿದೆ. ಬೆಂಗಳೂರು ಮೂಲದ ಮಲಯಾಳಂ ನಟಿ ರೇಚಲ್ ಡೇವಿಡ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇನ್ನೂ ಸುಶ್ಮಿತಾ ಎನ್ನುವ ಮತ್ತೋರ್ವ ಯುವ ನಟಿ ಸಹ ಲವ್ ಮಾಕ್ಟೇಲ್-2ನಲ್ಲಿ ನಟಿಸುತ್ತಿದ್ದಾರೆ.

  Chiru ಮಗುವಿಗೆ ಹಾಲುಣಿಸಿದ Doctor | Filmibeat Kannada

  ರಘು ದೀಕ್ಷಿತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪಾರ್ಟ್-1ರಲ್ಲೂ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದರು. ಇನ್ನೂ ಈ ಸಿನಿಮಾ ರಿಲೀಸ್ ಬಳಿಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆಯಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Darling Krishna starrer love mocktail-2 likely to release on this december.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X