»   » 'ದುರ್ಯೋಧನ' ಮತ್ತು 'ಭೀಮ' ಒಟ್ಟಿಗೆ ಬಂದ್ರೆ ಹೇಗಿರುತ್ತೆ ನೋಡಿ

'ದುರ್ಯೋಧನ' ಮತ್ತು 'ಭೀಮ' ಒಟ್ಟಿಗೆ ಬಂದ್ರೆ ಹೇಗಿರುತ್ತೆ ನೋಡಿ

Posted By:
Subscribe to Filmibeat Kannada

'ಕುರುಕ್ಷೇತ್ರ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ದುರ್ಯೋಧನ' ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ದುರ್ಯೋಧನ ಪಾತ್ರವೆಂದ ಮೇಲೆ ಅದಕ್ಕೆ ತಕ್ಕ ತಯಾರಿ ಮಾಡಲೇಬೇಕು. ಹಾಗಾಗಿ, ತಮ್ಮ ತೂಕವನ್ನ ಹೆಚ್ಚಿಕೊಂಡಿರುವ ದರ್ಶನ್, ತಮ್ಮ ದೇಹವನ್ನ ಕಟ್ಟುಮಸ್ತಾಗಿ ಕಾಪಾಡಿಕೊಂಡಿದ್ದಾರೆ.

Darshan Full Dedication For His 50th movie Kurukshetra

ದುರ್ಯೋಧನನ ರೀತಿಯಲ್ಲೇ ಭೀಮನ ಪಾತ್ರಧಾರಿ ಕೂಡ ಕಟ್ಟುಕಸ್ತಾದ ದೇಹವನ್ನ ಹೊಂದಿರಬೇಕು. ಬಾಲಿವುಡ್ ಕಿರುತೆರೆ ನಡ ಡ್ಯಾನೀಶ್ ಅಖ್ತರ್ ಸೈಫ್ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದುರ್ಯೋಧನ ಮತ್ತು ಭೀಮನ ಮುಖಾಮುಖಿ ಆಗುವ ದೃಶ್ಯಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇವರಿಬ್ಬರು ಒಟ್ಟಿಗೆ ಬಂದ್ರೆ ಹೇಗಿರುತ್ತೆ ಎಂಬ ನಿರೀಕ್ಷೆ ಅಭಿಮಾನಿಗಳನ್ನ ಕಾಡುತ್ತಿದೆ. ಹೀಗಿರುವಾಗ, ದರ್ಶನ್ ಮತ್ತು ಡ್ಯಾನಿಶ್ ಒಟ್ಟಿಗೆ ಇರುವ ಫೋಟೋವೊಂದು ವೈರಲ್ ಆಗಿದೆ.

darshan and danish akthar saif work out photo

ಹೌದು, ಜಿಮ್ ನಲ್ಲಿ ಇಬ್ಬರು ವರ್ಕೌಟ್ ಮಾಡುವಾಗ ಒಟ್ಟಿಗೆ ಕಾಣಸಿಕೊಂಡಿರುವ ಫೋಟೋ ಈಗ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಸುದ್ದಿ ಮಾಡ್ತಿದೆ. ವಿಶೇಷ ಅಂದ್ರೆ, ಭೀಮನ ಪಾತ್ರಕ್ಕಾಗಿ ಡ್ಯಾನಿಶ್ ಅವರನ್ನ ಸೂಚಿಸಿದ್ದೇ ನಟ ದರ್ಶನ್.


ಸದ್ಯ, ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕುರುಕ್ಷೇತ್ರ ಚಿತ್ರದ ಚಿತ್ರೀಕರಣಭ ನಡೆಯುತ್ತಿದೆ. ಶಾಸಕ ಮುನಿರತ್ನ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ.


ಉಳಿದಂತೆ, ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಸೋನು ಸೂದ್ 'ಅರ್ಜುನ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ 'ಅಭಿಮನ್ಯು', ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

English summary
challenging star darshan playing duryodhana role in kurukshetra and danish akthar saif playing bheema in the same movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada