»   » ದರ್ಶನ್-ಪ್ರೇಮ್ ಮತ್ತೆ ಸಿನಿಮಾ ಮಾಡೋದು ಪಕ್ಕಾ, ರಕ್ಷಿತಾ ಬಿಚ್ಚಿಟ್ಟ ಕಥೆ.!

ದರ್ಶನ್-ಪ್ರೇಮ್ ಮತ್ತೆ ಸಿನಿಮಾ ಮಾಡೋದು ಪಕ್ಕಾ, ರಕ್ಷಿತಾ ಬಿಚ್ಚಿಟ್ಟ ಕಥೆ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಕಾಂಬಿನೇಷನ್ ನಲ್ಲಿ 'ಕರಿಯ' ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರ ಬಂದು ಸುಮಾರು 14 ವರ್ಷ ಕಳೆದಿದೆ.

ಇದೀಗ, 'ಕರಿಯ' ಅಂತಹ ಬ್ಲ್ಯಾಕ್ ಬಸ್ಟರ್ ಸಿನಿಮಾ ನೀಡಿದ್ದ ಪ್ರೇಮ್ ಮತ್ತು ದರ್ಶನ್ ಜೋಡಿಯಿಂದ ಮತ್ತೊಂದು ಸಿನಿಮಾ ಬರುತ್ತೆ ಎನ್ನಲಾಗುತ್ತಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದ್ರೆ, ಈ ಬಿಗ್ ಪ್ರಾಜೆಕ್ಟ್ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ಹೊರಬಿದ್ದಿದೆ.

ಈ ಎಕ್ಸ್ ಕ್ಲೂಸಿವ್ ಕೊಟ್ಟಿದ್ದು ಬೇರೆ ಯಾರು ಅಲ್ಲಾ, ನಿರ್ದೇಶಕ ಪ್ರೇಮ್ ಅವರ ಪತ್ನಿ ನಟಿ ರಕ್ಷಿತಾ ಪ್ರೇಮ್. ಹಾಗಿದ್ರೆ, ದರ್ಶನ್ ಮತ್ತು ಪ್ರೇಮ್ ಜೋಡಿಯ ಚಿತ್ರದ ಬಗ್ಗೆ ರಕ್ಷಿತಾ ಏನಂದ್ರು?

ದರ್ಶನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಪ್ರೇಮ್

'ದಿ ವಿಲನ್' ಚಿತ್ರದ ನಂತರ ನಿರ್ದೇಶಕ ಪ್ರೇಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

ಹಿಂದೆಂದೂ ಮಾಡದ ಪಾತ್ರದಲ್ಲಿ 'ಒಡೆಯರ್' ದರ್ಶನ್ ದರ್ಶನ

ರಕ್ಷಿತಾ ಕಡೆಯಿಂದ ಕನ್ ಫರ್ಮ್

ಇಷ್ಟು ದಿನ ಈ ಸುದ್ದಿ ಬರಿ ಅಂತೆ ಕಂತೆ ಆಗಿತ್ತು. ಆದ್ರೀಗ, ದರ್ಶನ್-ಪ್ರೇಮ್ ಸಿನಿಮಾ ಬರುವುದು ಖಚಿತವಾಗಿದೆ. ಈ ಸುದ್ದಿಯನ್ನ ಸ್ವತಃ ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಸ್ಪಷ್ಟಪಡಿಸಿದ್ದಾರೆ.

'ಒಡೆಯರ್'ಗಾಗಿ ದರ್ಶನ್ ಎದುರಿಸಬೇಕಾಗಿದೆ ಬಹುದೊಡ್ಡ 'ಚಾಲೆಂಜ್'

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಹೇಳಿಕೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿಯಾಗಿರುವ ರಕ್ಷಿತಾ, ಈ ವಾರ ದರ್ಶನ್-ಪ್ರೇಮ್ ಸಿನಿಮಾ ಬಗ್ಗೆ ಮಾತನಾಡಿದರು. ಸೂಪರ್ ಕಾಂಬಿನೇಷನ್ ಟಾಸ್ಕ್ ನಲ್ಲಿ ಜೋಡಿಯೊಂದು ದರ್ಶನ್ ಮತ್ತು ರಕ್ಷಿತಾ ಹಾಡಿಗೆ ಡ್ಯಾನ್ಸ್ ಮಾಡಿದರು. ಇದಾದ ಬಳಿಕ, ರಕ್ಷಿತಾ ದರ್ಶನ್ ಬಗ್ಗೆ ಮಾತನಾಡಿದರು.

ನಾನು ದರ್ಶನ್ ಒಳ್ಳೆಯ ಫ್ರೆಂಡ್

''ಪ್ರೇಮ್ ಮತ್ತು ದರ್ಶನ್ 'ದಿ ವಿಲನ್' ಆದ್ಮೇಲೆ ಒಂದು ಸಿನಿಮಾ ಮಾಡ್ತಿದ್ದಾರೆ''. ದರ್ಶನ್ ನನಗೆ ಹಳೆ ಫ್ರೆಂಡ್. ಈಗಲೂ ಫೋನ್ ಮಾಡಿದಾಗ ಅವನು ಬೈಯ್ತಾನೆ, ನಾನು ಬೈಯ್ತೀನಿ'' ಎಂದರು.

ತಾರಕ್ ನಂತರ 'ದಿಟ್ಟ ನಿರ್ಧಾರ' ಕೈಗೊಂಡ ದರ್ಶನ್

ಟೈಟಲ್ ಫಿಕ್ಸ್ ಆಗಿದೆಯಂತೆ!

ಮೂಲಗಳ ಪ್ರಕಾರ ದರ್ಶನ್ ಮತ್ತು ಪ್ರೇಮ್ ಕಾಂಬಿನೇಷನ್ ಸಿನಿಮಾಗೆ ಆಂಜನೇಯ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗಿದೆ.

'ಹೆಬ್ಬುಲಿ' ನಿರ್ಮಾಪಕ?

ಈ ನಿರೀಕ್ಷೆಯ ಚಿತ್ರಕ್ಕೆ 'ಹೆಬ್ಬುಲಿ' ಖ್ಯಾತಿಯ ಉಮಾಪತಿ ಅವರು ಬಂಡವಾಳ ಹೂಡಲಿದ್ದಾರಂತೆ.

ದರ್ಶನ್ ಮುಂದಿನ ವರ್ಷದ ಪ್ರಾಜೆಕ್ಟ್..

ಸದ್ಯ, ದರ್ಶನ್ ಅಭಿನಯದ 'ತಾರಕ್' ಸಿನಿಮಾ ಬಿಡುಗಡೆಯ ಸನಿಹದಲ್ಲಿದ್ದು, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದಾದ ನಂತರ ಪವನ್ ಒಡೆಯರ್ ನಿರ್ದೇಶನ ಒಡೆಯರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಬಳಿಕ ಮತ್ತಷ್ಟು ಪ್ರಾಜೆಕ್ಟ್ ಗಳು ಕೈಯಲ್ಲಿದ್ದು, ಯಾವ ಚಿತ್ರಕ್ಕೆ ಚಾಲನೆ ನೀಡ್ತಾರೆ ಎನ್ನುವುದು ಕುತೂಹಲ.

ಎಲ್ಲ ಗೊಂದಲಗಳಿಗೆ ಸ್ಪಷ್ಟ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್.!

English summary
Director Prem and Challenging Star Darshan to collaborate for a new movie says Actress Raksitha Prem
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada