For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹೆಸರಿನಲ್ಲಿ ವಂಚನೆಗೆ ಯತ್ನ: 25 ಕೋಟಿ ಡೀಲ್ ಬಗ್ಗೆ ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟ ದಾಸ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚಿಸಲು ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಡಿ ಬಾಸ್ ಸುದ್ದಿಗೋಷ್ಠಿ ಮಾಡಿದರು. ''ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಏನು ಎನ್ನುವುದು ನನಗೆ ಗೊತ್ತಿಲ್ಲ. ಎಲ್ಲಾ ಕಡೆಯೂ ಜೊತೆಯಲ್ಲಿ ಇದ್ದೇವು. ಇಲ್ಲಿ ಯಾರು ಇದರ ಹಿಂದಿನ ರೂವಾರಿ ಎಂದು ತಿಳಿದಿಲ್ಲ. ಇದನ್ನು ಅರುಣಾ ಕುಮಾರಿಯೇ ಸ್ಪಷ್ಟಪಡಿಸಬೇಕು'' ಎಂದು ನಟ ದರ್ಶನ್ ಹೇಳಿದರು.

  ಈ ವೇಳೆ ಉಮಾಪತಿ ಜೊತೆ ಅರುಣಾ ಕುಮಾರಿ ವಾಟ್ಸಾಪ್ ಚಾಟ್ ಮಾಡಿರುವ ಮಾಹಿತಿ ಬಿಡುಗಡೆಗೊಳಿಸಿದರು. ಹರ್ಷಾ ಜೊತೆ ಅರುಣಾ ಕುಮಾರಿ ಮಾತನಾಡಿರುವ ಆಡಿಯೋ ಸಹ ರಿಲೀಸ್ ಮಾಡಿದರು.

  ದರ್ಶನ್ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು
  - ಉಮಾಪತಿ ಅವರು ಜೂನ್ 6 ರಂದು ನನಗೆ ಫೋನ್ ಮಾಡಿ 'ನೀವು ಯಾರಿಗಾದರೂ ಶ್ಯೂರಿಟಿ ಹಾಕುತ್ತಿದ್ದೀರಾ'' ಎಂದರು.
  - ಎಷ್ಟು ಹಣ ಎಂದು ಕೇಳಿದ್ದಕ್ಕೆ, 25 ಕೋಟಿ ಅಂತ ಹೇಳಿದರು. ಒಂದು ಕ್ಷಣ ಆಶ್ಚರ್ಯ ಆಯಿತು. ಆಗಲೇ ಅರುಣಾ ಕುಮಾರಿ ಎನ್ನುವ ಮಹಿಳೆಗೆ ಕಾನ್ಫೆರೆನ್ಸ್ ಹಾಕಿ ಮಾತನಾಡಿದರು.
  - ನನ್ನ ಸ್ನೇಹಿತರು 25 ಕೋಟಿ ಶ್ಯೂರಿಟಿ ಹಾಕಿ ಅರ್ಜಿ ಸಲ್ಲಿಸಿದ್ದಾರೆ ಎಂದು ಉಮಾಪತಿ ನನಗೆ ತಿಳಿಸಿದರು.
  - ಅದಕ್ಕೆ ಸಂಬಂಧಿಸಿದಂತೆ ಡಾಕ್ಯೂಮೆಂಟ್ಸ್ ತೆಗೆದುಕೊಂಡು ಬರುತ್ತೇನೆ ಎಂದರು.
  - ಡಾಕ್ಯೂಮೆಂಟ್ಸ್‌ನಲ್ಲಿ ದರ್ಶನ್ ಅಗ್ರಿಕಲ್ಚರಿಸ್ಟ್, ಫಾರ್ಮರ್ ಎಂದು ನನ್ನ ಅಡ್ರೆಸ್‌ ಬರೆದಿದೆ. ನನ್ನ ಆಧಾರ ಕಾರ್ಡ್‌ ಮಾತ್ರ ಇದೆ.

  ಅರುಣಾ ಕುಮಾರಿ ಎನ್ನುವ ಮಹಿಳೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹಾಗೂ ದರ್ಶನ್ ಸ್ನೇಹಿತರ ಹೆಸರನ್ನು ದುರ್ಬಳಕೆ ಮಾಡಿಕೊಂಡು 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನ ನಡೆಸಿದ್ದರು ಎನ್ನುವ ವಿಚಾರ ಹೊರಬಿದ್ದಿತ್ತು.

  ಈ ಸಂಬಂಧ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಭಾನುವಾರ ಮೈಸೂರಿನ ಎಸಿಪಿ ಕಚೇರಿಗೆ ಭೇಟಿ ನೀಡಿ ಪೊಲೀಸರ ವಿವರಣೆ ಮಾಡಿದ್ದರು.

  ಪೊಲೀಸರ ಕರೆಗೆ ಬೆಚ್ಚಿ ಬಿದ್ದ ದರ್ಶನ್! | Darshan | Filmibeat Kannada

  ದರ್ಶನ್ ಸುದ್ದಿಗೋಷ್ಠಿಯ ಸಂಪೂರ್ಣ ವಿವರಕ್ಕಾಗಿ ನಿರೀಕ್ಷಿಸಿ....

  English summary
  Darshan and Umapathy Srinivas held Press Meet on Rs 25 Crore Fraud Case Controversy today; A woman and two men have been booked for allegedly creating forged documents of actor Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X