For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ 'ಜಗ್ಗುದಾದಾ' ದರ್ಶನ್.!

  By Harshitha
  |

  'ಜಗ್ಗುದಾದಾ' ಸಿನಿಮಾ ಎಲ್ಲೆಡೆ ಚೆನ್ನಾಗಿ ಓಡುತ್ತಿದೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕ ಖುಷಿಯಲ್ಲಿ ನಿರ್ಮಾಪಕ ಕಮ್ ನಿರ್ದೇಶಕ ರಾಘವೇಂದ್ರ ಹೆಗಡೆ ನಿನ್ನೆ (ಜೂನ್ 29) ಸಂಜೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶೆರಟನ್ ಹೋಟೆಲ್ ನಲ್ಲಿ 'ಸಕ್ಸಸ್ ಪಾರ್ಟಿ' ಆಯೋಜಿಸಿದ್ದರು.

  'ಸಂತೋಷ ಕೂಟ' ಅಂದ್ಮೇಲೆ ಇಡೀ 'ಜಗ್ಗುದಾದಾ' ಚಿತ್ರತಂಡ ಅಲ್ಲಿ ಹಾಜರ್ ಆಗ್ಬೇಕಿತ್ತು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ/ನಿರ್ದೇಶಕ ರಾಘವೇಂದ್ರ ಹೆಗಡೆ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ಸಹಾಯಕ ನಿರ್ದೇಶಕರುಗಳು ಬಿಟ್ಟರೆ ಅಲ್ಲಿಗೆ ಬೇರೆ ಯಾವ ಕಲಾವಿದರು, ತಂತ್ರಜ್ಞರು ಬರ್ಲಿಲ್ಲ. ಕಾರಣ...ಅವರಿಗೆ, ಖುದ್ದಾಗಿ ರಾಘವೇಂದ್ರ ಹೆಗಡೆ ಆಹ್ವಾನಿಸಿರಲಿಲ್ಲ. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

  ಈ ಬಗ್ಗೆ ಮೈಕ್ ಸಿಕ್ಕ ತಕ್ಷಣ ಅಭಿಮಾನಿಗಳ ಪ್ರೀತಿಯ 'ದಾಸ' ದರ್ಶನ್ ಬಾಯ್ಬಿಟ್ಟರು. ಮಾತಲ್ಲೇ 'ಜಗ್ಗುದಾದಾ' ನಿರ್ಮಾಪಕ ಕಮ್ ನಿರ್ದೇಶಕರಾದ ರಾಘವೇಂದ್ರ ಹೆಗಡೆ ಅವರಿಗೆ ಬಿಸಿ ಮುಟ್ಟಿಸಿದರು.

  ಪ್ರೆಸ್ ಮೀಟ್ ನಲ್ಲಿ ರಾಘವೇಂದ್ರ ಹೆಗಡೆ ಬಗ್ಗೆ ದರ್ಶನ್ ಏನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

  ಮೊದಲು ಥ್ಯಾಂಕ್ಸ್ ಹೇಳಿದ ದರ್ಶನ್.!

  ಮೊದಲು ಥ್ಯಾಂಕ್ಸ್ ಹೇಳಿದ ದರ್ಶನ್.!

  ''ಮಾಧ್ಯಮದವರಿಗೆ ಹಾಗೂ ಕರ್ನಾಟಕದ ಜನತೆಗೆ ನಾನು ಥ್ಯಾಂಕ್ಸ್ ಹೇಳಲು ಇಷ್ಟಪಡುತ್ತೇನೆ. ಯಾಕಂದ್ರೆ, ಒಂದೊಳ್ಳೆ ಸಕ್ಸಸ್ ಕೊಟ್ಟಿದ್ದಾರೆ. ಒಂದೊಳ್ಳೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಕೊಟ್ಟೇ ಕೊಡುತ್ತಾರೆ ಅಂತ ನಮ್ಮ ಕರ್ನಾಟಕ ಜನತೆ ಮತ್ತೊಂದು ಬಾರಿ ಪ್ರೂವ್ ಮಾಡಿದ್ದಾರೆ'' ಅಂತ ಹೇಳುತ್ತಾ ಮಾತು ಶುರು ಮಾಡಿದ ದರ್ಶನ್ ನಂತರ ರಾಘವೇಂದ್ರ ಹೆಗಡೆ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಕಾಲಿನಲ್ಲೇ ನಡೆಯಿರಿ.!

  ಕಾಲಿನಲ್ಲೇ ನಡೆಯಿರಿ.!

  ''ಇವತ್ತು ಮಾತನಾಡಲು ಇಷ್ಟ ಪಡುತ್ತೇನೆ. ಎಲ್ಲಾ ಪ್ರೊಡ್ಯೂಸರ್ ಗಳದ್ದು ಒಂದು ಮಾತು ಇರುತ್ತೆ. ಪ್ರಚಾರಕ್ಕೆ ಯಾರೂ ಬರಲ್ಲ ಅಂತ. ಇವತ್ತು ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ ರಘು ಅವರಿಗೆ. ''ದಯವಿಟ್ಟು ಕಾಲಿನಲ್ಲೇ ನಡೆಯಿರಿ'' - ದರ್ಶನ್ [ದರ್ಶನ್ 'ಜಗ್ಗುದಾದಾ' ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!]

  ಎಲ್ಲರೂ ಬರ್ಬೇಕಿತ್ತು.!

  ಎಲ್ಲರೂ ಬರ್ಬೇಕಿತ್ತು.!

  ''ಇದೇ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಎಲ್ಲರೂ ಇದ್ದರೂ. ತುಂಬಾ ಜನ ಕಲಾವಿದರು ಬಂದಿದ್ದರು. ಇಡೀ ಸಿನಿಮಾ ಬಗ್ಗೆ ನಾನೊಬ್ಬನೇ ಮಾತನಾಡುವುದಕ್ಕೆ ಆಗಲ್ಲ. ಸುಮಾರು ಜನ ಸಾಥ್ ಕೊಟ್ಟಿದ್ದಾರೆ. ಅವರೆಲ್ಲರೂ ಬರಬೇಕು'' - ದರ್ಶನ್ ['ದಾಸ' ದರ್ಶನ್ 'ದಾದಾ'ಗಿರಿಗೆ ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ.!]

  ಅವತ್ತು ಆತುರ ಇತ್ತು!

  ಅವತ್ತು ಆತುರ ಇತ್ತು!

  ''ಆಡಿಯೋ ರಿಲೀಸ್ ದಿನ, ರಘು ಪಾಪ, ಎಲ್ಲರಿಗೂ ಫೋನ್ ಮಾಡಿದ್ದರು. ಅವತ್ತು ಹೊಸ ಸಿನಿಮಾ ಅಂತ ಆತುರದಲ್ಲಿ ಇದ್ದರು'' - ದರ್ಶನ್

  ಹಿಟ್ ಆದ ತಕ್ಷಣ, ಯಾಕ್ಹಿಂಗೆ..?

  ಹಿಟ್ ಆದ ತಕ್ಷಣ, ಯಾಕ್ಹಿಂಗೆ..?

  ''ಸಿನಿಮಾ ಹಿಟ್ ಆದ ತಕ್ಷಣ, ''ಏ ಬಿಡು, ನನ್ನಿಂದನೇ'' ಎಂಬ ಮನೋಭಾವದಲ್ಲಿ ಇರಬೇಡಿ'' - ದರ್ಶನ್

  ಎಲ್ಲರಿಗೂ ಸಮಾನ..!

  ಎಲ್ಲರಿಗೂ ಸಮಾನ..!

  ''ಸಿನಿಮಾ ಹಿಟ್, ಫ್ಲಾಪ್...ಎಲ್ಲರೂ ಶೇರ್ ಮಾಡಬೇಕು ಅದನ್ನ. ಒಂದು ಹಿಟ್ ಗೆ ಫ್ಲಾಪ್ ಗೆ ನಾವೆಲ್ಲಾ ಇದ್ದೀವಿ'' - ದರ್ಶನ್

  ಯಾರಿಗೂ ಫೋನ್ ಮಾಡಿಲ್ಲ!

  ಯಾರಿಗೂ ಫೋನ್ ಮಾಡಿಲ್ಲ!

  ''ರಘು ಯಾರಿಗೂ ಫೋನ್ ಮಾಡ್ಲಿಲ್ಲ. ಸೋ, ಇವತ್ತು ಯಾವ ಕಲಾವಿದರೂ ಇಲ್ಲ. ಅದಕ್ಕೆ ನಾನು ಒಬ್ಬನೇ ಕೂತಿದ್ದೇನೆ. ಬರಲೇಬೇಕು ಅದಕ್ಕೆ ನಾನು ಬಂದಿದ್ದೇನೆ'' - ದರ್ಶನ್

  ಅವರೊಬ್ಬರೇ ಸಕ್ಸಸ್ ಎಂಜಾಯ್ ಮಾಡ್ಲಿ!

  ಅವರೊಬ್ಬರೇ ಸಕ್ಸಸ್ ಎಂಜಾಯ್ ಮಾಡ್ಲಿ!

  ''ಹತ್ತು ದಿನಗಳ ಹಿಂದೆಯೇ ಕಾರ್ಯಕ್ರಮ ನಿಗದಿ ಆಗಿತ್ತು. ಎಲ್ಲರಿಗೂ ಪ್ರೀತಿಯಿಂದ ಫೋನ್ ಮಾಡಿ, 'ಬನ್ನಿ ಸಕ್ಸಸ್ ನ ಎಂಜಾಯ್ ಮಾಡೋಣ' ಅಂತ ಕರೆದಿದ್ರೆ ಖಂಡಿತ ಎಲ್ಲರೂ ಬರ್ತಿದ್ರು. ಬಟ್ ರಘು ಅವರು ಅದನ್ನ ಮಾಡ್ಲಿಲ್ಲ. ಪರ್ವಾಗಿಲ್ಲ, ಅವರೇ ಸಕ್ಸಸ್ ನ ಇಟ್ಟುಕೊಳ್ಳಲಿ. ಅವರೇ ಎಂಜಾಯ್ ಮಾಡ್ಲಿ. ಲೆಟ್ ಹಿಮ್ ಬೀ ಹ್ಯಾಪಿ. ಆಲ್ ದಿ ಬೆಸ್'' - ದರ್ಶನ್

  ಮುಂದೆ ಇದೆ!

  ಮುಂದೆ ಇದೆ!

  ''ಬಟ್ ಇನ್ನೂ ಸಿನಿಮಾಗಳು ಇವೆ. ಪ್ರೂವ್ ಮಾಡುವುದು ಬಹಳಷ್ಟು ಇದೆ. ಹೀಗಾಗಿ ಎಲ್ಡರ್ ಆಗಿ ಒಂದು ಮಾತು ಹೇಳುತ್ತಿದ್ದೇನೆ. ದಯವಿಟ್ಟು ಬೇಜಾರ್ ಮಾಡಿಕೊಳ್ಳಬೇಡಿ. ನಿರ್ಮಾಪಕರು, ''ಪ್ರಚಾರಕ್ಕೆ ಯಾರೂ ಬರಲ್ಲ'' ಅಂತ ಹೇಳ್ಬಾರ್ದು'' - ದರ್ಶನ್

  ಎಲ್ಲರಿಗೂ ಅವಕಾಶ ಬೇಕು!

  ಎಲ್ಲರಿಗೂ ಅವಕಾಶ ಬೇಕು!

  ''ಫೋನ್ ಮಾಡಿ ಹೇಗೆ ಕಾಲ್ ಶೀಟ್ ಕೇಳುತ್ತೀರೋ, ಹಾಗೇ 'ಸಂತೋಷ ಕೂಟಕ್ಕೂ ಬನ್ನಿ' ಅಂತ ಕರೆದಿದ್ರೆ..? ಇವತ್ತು ನೋಡಿ ಇಲ್ಲಿ ಬಿಕೋ ಎನ್ನುತ್ತಿದೆ. ಎಲ್ಲರಿಗೂ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇನೆ'' - ದರ್ಶನ್

  ಪ್ಲಸ್/ಮೈನಸ್?

  ಪ್ಲಸ್/ಮೈನಸ್?

  ''ದಯವಿಟ್ಟು ನನ್ನ ಮಾತಿಂದ ಬೇಜಾರ್ ಮಾಡಿಕೊಳ್ಳಬೇಡಿ. ಹೇಳಬೇಕು ಎನಿಸಿತು, ಹೇಳುತ್ತಾಯಿದ್ದೀನಿ. ಅದನ್ನ ಪ್ಲಸ್ ಆಗಾದ್ರೂ, ಮೈನಸ್ ಆಗಾದ್ರೂ ತೆಗೆದುಕೊಳ್ಳಬಹುದು'' - ದರ್ಶನ್

  English summary
  Annoyed with Director/Producer Raghavendra Hegde, Kannada Actor, Challenging Star Darshan adviced to not to get overwhelmed by the Success of the film, during the Success meet held in Hotel Sheraton, Bengaluru

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X