For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ವಿರುದ್ಧ ಪ್ರಚಾರ, ಪ್ರಜ್ವಲ್ ಜೊತೆ ಸ್ನೇಹ: ಏನಿದು ದರ್ಶನ್-ರೇವಣ್ಣ ಪುತ್ರನ ಕಥೆ?

  |

  ಮಂಡ್ಯ ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ನಟ ದರ್ಶನ್ ಪ್ರಚಾರ ಮಾಡಿದ್ದರು. ಈಗ ನಿಖಿಲ್ ಕುಮಾರ್ ಅವರ ಸಹೋದರ ಪ್ರಜ್ವಲ್ ರೇವಣ್ಣ ಜೊತೆ ದರ್ಶನ್ ವೇದಿಕೆ ಹಂಚಿಕೊಂಡಿದ್ದಾರೆ. ಇದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಉದ್ದೇಶದಿಂದ ದರ್ಶನ್ ಅವರನ್ನು ಪ್ರಜ್ವಲ್ ಬಳಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಉಂಟು ಮಾಡಿದೆ.

  ಈ ಬಗ್ಗೆ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದ ಪ್ರಜ್ವಲ್ ರೇವಣ್ಣ, ''ರಾಜಕೀಯವೇ ಬೇರೆ, ಸ್ನೇಹವೇ ಬೇರೆ. ನಾನು ಮತ್ತು ದರ್ಶನ್ ಅವರು ಬಹಳ ವರ್ಷ ಗೆಳೆಯರು. ಇದರಲ್ಲಿ ರಾಜಕೀಯ ಇಲ್ಲ, ನಾನು ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ'' ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ದರ್ಶನ್ ಸಹ ಪ್ರಜ್ವಲ್ ಜೊತೆಗಿನ ಸ್ನೇಹದ ನೆನಪು ಮಾಡಿಕೊಂಡಿದ್ದಾರೆ. ಮುಂದೆ ಓದಿ...

  ವಿಶ್ವಮಹಿಳಾ ದಿನಾಚರಣೆಯಲ್ಲಿ ದರ್ಶನ್-ಪ್ರಜ್ವಲ್

  ವಿಶ್ವಮಹಿಳಾ ದಿನಾಚರಣೆಯಲ್ಲಿ ದರ್ಶನ್-ಪ್ರಜ್ವಲ್

  ಹಾಸನದಲ್ಲಿ ನಡೆದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಪ್ರಜ್ವಲ್ ರೇವಣ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದಕ್ಕೂ ಮುಂಚೆ ಮತ್ತೊಂದು ಖಾಸಗಿ ಕಾರ್ಯಕ್ರಮಕ್ಕೂ ಇಬ್ಬರು ಹೋಗಿದ್ದರು. ಅಲ್ಲಿಂದ ನೇರವಾಗಿ ಪ್ರಜ್ವಲ್ ರೇವಣ್ಣ ಮನೆಗೆ ಹೋಗಿ, ಸಂಜೆ ವೇಳೆಗೆ ಸಂತೆಪೇಟೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

  ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ದರ್ಶನ್ ರೆಡಿ.!

  ಪ್ರಜ್ವಲ್ ಸರಳತೆ ಬಗ್ಗೆ ದರ್ಶನ್ ಮೆಚ್ಚುಗೆ

  ಪ್ರಜ್ವಲ್ ಸರಳತೆ ಬಗ್ಗೆ ದರ್ಶನ್ ಮೆಚ್ಚುಗೆ

  ''ಪ್ರಜ್ವಲ್ ನಾನು 8 ವರ್ಷದ ಸ್ನೇಹಿತರು. ಕೇರಳಕ್ಕೆ ಬೈಕ್ ಸವಾರಿ ಹೋದಾಗ ಪ್ರಜ್ವಲ್ ನಮ್ಮ ಜೊತೆ ಬಂದಿದ್ದರು. ಕೇರಳಕ್ಕೆ ಹೋಗಿ ಬೆಂಗಳೂರಿಗೆ ಬರುವವರೆಗೂ ಪ್ರಜ್ವಲ್ ಬೈಕ್ ಓಡಿಸಿದ್ರು. ಇದು ಅವರ ತಾಯಿಗೂ ಗೊತ್ತಿಲ್ಲ. ಅಲ್ಲಿ ಸಣ್ಣದೊಂದು ಜಾಗದಲ್ಲಿ ಮಲಗಿದರು. ಪ್ರಧಾನಿ ಮೊಮ್ಮಗ, ಮಿನಿಸ್ಟರ್ ಮಗ ಎಂಬ ಅಹಂ ಇರಲಿಲ್ಲ. ಹಾಸನದಲ್ಲಿ ಯಂಗ್ ಎಮ್ ಪಿ ಆರಿಸಿದ್ದೀರಿ, ನಿಜಕ್ಕೂ ಅವ್ರು ಇನ್ನಷ್ಟು ಎತ್ತರಕ್ಕೆ ಬೆಳಸಿ'' ಎಂದು ವಿಶ್ ಮಾಡಿದರು.

  ಇದಕ್ಕೆ ರಾಜಕೀಯ ಬಣ್ಣ ಬೇಡ

  ಇದಕ್ಕೆ ರಾಜಕೀಯ ಬಣ್ಣ ಬೇಡ

  ''ಕೆಲವರು ರಾಜಕೀಯ ಬಣ್ಣ ಕಟ್ಟುವ ಮಾತ್ನಾಡಿದ್ದು ನಮಗೆ ಗೊತ್ತಾಗಿದೆ. ಇದಕ್ಕೆ ರಾಜಕೀಯ ಬಣ್ಣ ಬೇಡ. ಸ್ನೇಹವೇ ಬೇರೆ ರಾಜಕೀಯವೇ ಬೇರೆ. ಅದಕ್ಕೂ ಮೀರಿದ್ದು ನಮ್ಮ ದರ್ಶನ್ ಸರ್ ಸ್ನೇಹ. ನಾನು ಯಾವುದೇ ರಾಜಕೀಯ ಲಾಭಕ್ಕೆ ದರ್ಶನ್ ಅವರನ್ನ ಈ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲ್ಲ'' ಎಂದು ಪ್ರಜ್ವಲ್ ಹೇಳಿದರು.

  ಡಿ ಬಾಸ್ ಅಂದ್ರೆ ನಿರ್ಮಾಪಕರಿಗೆ ಹಬ್ಬದೂಟ ಅಂತ ಪ್ರೂವ್ ಮಾಡಿದ ರಾಬರ್ಟ್ | Filmibeat Kannada
  ಪ್ರಜ್ವಲ್ ಕರೆದರು ಪ್ರಚಾರ ಮಾಡ್ತೀನಿ

  ಪ್ರಜ್ವಲ್ ಕರೆದರು ಪ್ರಚಾರ ಮಾಡ್ತೀನಿ

  ಮಂಡ್ಯ ಲೋಕಸಭೆ ಚುನಾವಣೆ ವೇಳೆ ನಿಖಿಲ್ ವಿರುದ್ಧ ಪ್ರಚಾರ ಮಾಡಿದ್ದ ದರ್ಶನ್ ''ನಾನು ಸುಮಲತಾ ಅವರ ಪರವಾಗಿ ಮಾತ್ರ ಮತ ಕೇಳುತ್ತಿದ್ದೇನೆ, ಯಾರ ವಿರುದ್ಧವೂ ಅಲ್ಲ. ನನಗೆ ವ್ಯಕ್ತಿ ಮುಖ್ಯ'' ಅಂದಿದ್ದರು. ''ಒಂದು ವೇಳೆ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಪ್ರಚಾರಕ್ಕೆ ಕರೆದರೆ ನಾನು ಹೋಗ್ತೀನಿ, ನಾನು ಪ್ರಜ್ವಲ್ ಉತ್ತಮ ಸ್ನೇಹಿತರು'' ಎಂದು ಆಗ ಹೇಳಿದ್ದರು. ಈಗ ಆ ಮಾತು ನೆನಪಾಗುತ್ತಿದೆ.

  English summary
  Kannada actor Darshan attends Women Day Program in Hassan withMP Prajwal Revanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X