»   » ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್

ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಮೋಜಿ ಫಿಲಂ ಸಿಟಿಯಲ್ಲಿ ಕೆಲಸ ಮಾಡೋದು ಶಾಪ ಅಂದಿದ್ಯಾಕೆ ಗೊತ್ತಾ ?

ರಾಮೋಜಿ ಫಿಲ್ಮ್ ಸಿಟಿ....ಹೈದರಾಬಾದ್ ನಲ್ಲಿರುವ ಅತಿ ದೊಡ್ಡ ಸಿನಿಮಾನಗರಿ. ತೆಲುಗು, ತಮಿಳು, ಹಿಂದಿ, ಕನ್ನಡ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳು ಇಲ್ಲಿ ಚಿತ್ರೀಕರಣ ಮಾಡುತ್ತೆ. ಯಾಕಂದ್ರೆ, ಚಿತ್ರೀಕರಣಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳು ಇಲ್ಲಿವೆ. ಪೌರಾಣಿಕ, ಐತಿಹಾಸಿಕ, ಇತ್ತೀಚಿನ ಶೈಲಿಯ ಸಿನಿಮಾಗಳು ಮಾಡಲು ಸೂಕ್ತವಾದ ಜಾಗ ಇದು. ಸದ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ರಾಮೋಜಿ ಸ್ಟುಡಿಯೋದಲ್ಲಿ ನಡೆಯುತ್ತಿದೆ.

ಸತತ ಮೂರ್ನಾಲ್ಕು ತಿಂಗಳಿನಿಂದ ದರ್ಶನ್, ಅರ್ಜುನ್ ಸರ್ಜಾ, ಸೋನು ಸೂದ್, ಸ್ನೇಹಾ, ಸೇರಿದಂತೆ ಕುರುಕ್ಷೇತ್ರ ಚಿತ್ರತಂಡ ರಾಮೋಜಿಯಲ್ಲಿ ಬೀಡುಬಿಟ್ಟಿದೆ. ಈ ನಡುವೆ ದುರ್ಯೋಧನ ದರ್ಶನ್ ಬೇಸರಗೊಂಡಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುವುದು ನಮಗೊಂದು ಶಾಪವೆಂದಿದ್ದಾರೆ.

ಅರೇ....ಕುರುಕ್ಷೇತ್ರ ಚಿತ್ರೀಕರಣದಲ್ಲಿ ಏನಾದರೂ ಸಮಸ್ಯೆಯಾಯಿತೇ ಎಂದು ಊಹಿಸಕೊಳ್ಳಬೇಡಿ. ದರ್ಶನ್ ಗೆ ರಾಮೋಜಿ ಸ್ಟುಡಿಯೋ ಮೇಲೆ ಅಸಹ್ಯ ಬರಲು ಬೇರೆಯದ್ದೇ ಕಾರಣವಿದೆ. ಇದು ಕನ್ನಡ ಚಿತ್ರರಂಗ ಆಲಿಸಬೇಕಾದ ಮಾತು. ಮುಂದೆ ಓದಿ....

ರಾಮೋಜಿಯಲ್ಲಿ ಶೂಟಿಂಗ್ ಮಾಡುವುದು ಶಾಪ

''ರಾಮೋಜಿ ಫಿಲ್ಮ್ ಸಿಟಿಯಲ್ಲೇ ಬಂದು ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಬಂದಿದೆ. ನಿಜಕ್ಕೂ ಅದೊಂದು ಶಾಪವೇ ಸರಿ. ಯಾಕೆಂದರೆ, ನಮ್ಮಲ್ಲಿ ಅಂತಹ ಜಾಗವಿಲ್ಲ. ಹೇಳಿಕೊಳ್ಳೋಕೆ ಒಳ್ಳೆಯ ಸ್ಟುಡಿಯೋಗಳೂ ಇಲ್ಲ'' ಎಂದು ದಾಸ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ

ರಿಯಾಲಿಟಿ ಶೋಗಳ ಆಸ್ಥಾನ

''ಕಂಠೀರವ, ಅಬ್ಬಯ್ಯನಾಯ್ಡು, ರಾಕ್‌ಲೈನ್‌ ಸ್ಟುಡಿಯೋಗಳೆಲ್ಲವನ್ನೂ ಸೀರಿಯಲ್ಸ್, ರಿಯಾಲಿಟಿ ಶೋಗಳು ಆವರಿಸಿಕೊಂಡಿವೆ. ನಮ್ಮಲ್ಲಿ ಹೆಸರಘಟ್ಟ ಸಮೀಪ ದೊಡ್ಡ ಜಾಗ ಕೊಟ್ಟಿದ್ದರೂ, ಅದನ್ನು ಉಳಿಸಿಕೊಳ್ಳುವುದಕ್ಕೂ ಆಗಿಲ್ಲ'' ಎಂದು ಕನ್ನಡ ಚಿತ್ರರಂಗದ ಅಸಹಾಯಕತೆ ಬಗ್ಗೆ ಮಾತನಾಡಿದ್ದಾರೆ.

ನಮ್ಮಲ್ಲಿ ದೊಡ್ಡ ಫಿಲ್ಮ್ ಸಿಟಿ ಆಗಬೇಕಿದೆ

''ಇನ್ನೋವೇಟಿವ್ ಸ್ಟುಡಿಯೋ ಬಿಟ್ಟರೆ, ಬೇರೇ ದೊಡ್ಡ ಜಾಗ ಎಲ್ಲಿದೆ? ಜಾಗ ಕೊಡ್ತೀವಿ ಅಂತಾರೆ, ಎಲ್ಲಿ? ಯಾವಾಗ? ಕೊಟ್ಟ ಜಾಗವನ್ನೂ ವಾಪಸ್‌ ತೆಗೆದುಕೊಂಡ್ರು. ಕೊಟ್ಟಾಗ, ಅದನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ. ಆಗ ಹೆಸರಘಟ್ಟ ಕಾಡು ಇದ್ದಂಗಿತ್ತು. ಈಗ ಎಷ್ಟೊಂದು ಬೆಳೆದಿದೆ. ಅಲ್ಲಿಯೇ ಸ್ಟುಡಿಯೋ ಮಾಡಿದ್ದರೆ, ಎಷ್ಟೊಂದು ಚೆನ್ನಾಗಿರುತ್ತಿತ್ತು. ಅಲ್ಲಿ ಮಾಡಿದ್ದರೆ, ನಾವುಗಳು ಇಲ್ಲಿಗೆ ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ'' ಎಂದು ಚಾಲೆಂಜಿಂಗ್ ಸ್ಟಾರ್ ತಿಳಿಸಿದ್ದಾರೆ.

50ರ ನಂತರ ಬದಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂಡಸ್ಟ್ರಿಯನ್ನ ಬೆಳಸಬೇಕಿದೆ

''ಇವತ್ತು ಇಂಡಸ್ಟ್ರಿ ಬೆಳೆಸೋದು ಕಷ್ಟವಿದೆ. ಆಗೆಲ್ಲಾ ಐದು ಸಾವಿರಗೆ ಎಕರೆ ಪಡೆದು ಸ್ಟುಡಿಯೋ ಮಾಡುವ ಕಾಲವಿತ್ತು. ಈಗ ಸ್ಟಾರ್‌ ನಟರು ಕೋಟಿ ಕೊಟ್ಟು ಜಾಗ ಖರೀದಿಸಿದರೂ, ಸ್ಟುಡಿಯೋ ಮಾಡೋಕ್ಕಾಗುತ್ತಾ?'' ಎಂದು ದರ್ಶನ್ ಪ್ರಶ್ನಿಸಿದ್ದಾರೆ

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡ ಚಾನಲ್ ಇಲ್ಲ

''ಇನ್ನು ಶೂಟಿಂಗ್ ಮಾಡಿ ವಿಶ್ರಾಂತಿ ಪಡೆಯೋಕೆ ಅಂತ ಹೋಟೆಲ್ ಗೆ ಹೋದ್ರೆ, ಅಲ್ಲಿ ಕನ್ನಡ ಚಾನಲ್ ಗಳು ಬರಲ್ಲ. ಕರ್ನಾಟಕದಲ್ಲಿ ತಮಿಳು, ತೆಲುಗು, ಹಿಂದಿ ಎಲ್ಲ ಚಾನಲ್ ಗಳು ಬರುತ್ತೆ. ಆದ್ರೆ, ಇಲ್ಲಿ ಮಾತ್ರ ಕನ್ನಡ ಬರಲ್ಲ. ಕೇಳಿದ್ರೆ, ಇಲ್ಲಿ ಕನ್ನಡ ಬರಲ್ಲ ಅಂತಾರೆ'' ಎಂದು ವಾಸ್ತವದ ಅರಿವು ಮಾಡಿಕೊಟ್ಟರು.

ಕೊಚ್ಚಿಕೊಳ್ಳುವ ಪರಭಾಷಿಗರಿಗೆ ಚಾಲೆಂಜಿಂಗ್ ಸ್ಟಾರ್ ದಿಟ್ಟ ಉತ್ತರ

English summary
Kannada actor, challenging star darshan has bored on Ramoji Film City. Presently darshan has participated in kurukshetra shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X