For Quick Alerts
  ALLOW NOTIFICATIONS  
  For Daily Alerts

  ಗುರುವಾರವೇ (ಆ.26) ದರ್ಶನ್ ಬೃಂದಾವನ ರಿಲೀಸ್

  By Rajendra
  |

  ಗುರುವಾರ ಎಂದರೆ ಗುರು ರಾಯರನ್ನು ನೆನೆಯುವ ದಿನ. ಕನ್ನಡ ಚಿತ್ರಗಳು ಗುರುವಾರ ತೆರೆಕಾಣುವುದು ಬಲು ಅಪರೂಪ. ಬಹುತೇಕ ಚಿತ್ರಗಳು ಶುಕ್ರವಾರ ತೆರೆಕಾಣುತ್ತವೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೃಂದಾವನ ಚಿತ್ರ ಗುರುವಾರವೇ (ಸೆ.26) ತೆರೆಗೆ ಅಪ್ಪಳಿಸುತ್ತಿದೆ.

  ಶ್ರೀ ಸೀತಾಭೈರವೇಶ್ವರ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಡಿ.ಸುರೇಶಗೌಡ, ಪಿ.ಎಸ್. ಶ್ರೀನಿವಾಸಮೂರ್ತಿ ನಿರ್ಮಿಸುತ್ತಿರುವ ಅದ್ದೂರಿ ವೆಚ್ಚದ ಅದ್ದೂರಿ ತಾರಾಗಣದ 'ಬೃಂದಾವನ' ಚಿತ್ರವನ್ನು ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

  ಚಿತ್ರದಲ್ಲಿನ ಭರ್ಜರಿ ಸಾಹಸ ಸನ್ನಿವೇಶಗಳು, ಕೌಟುಂಬಿಕ ಚೌಕಟ್ಟಿನಲ್ಲಿ ಸಾಗುವ ಕಥೆ, ರಮಣೀಯ ಪ್ರದೇಶಗಳಲ್ಲಿ ಚಿತ್ರೀಕರಿಸಿರುವ ಹಾಡುಗಳು. ಹೀಗೆ ಚಿತ್ರವು ಎಲ್ಲಾ ವರ್ಗದ ಜನರನ್ನು ರಂಜಿಸಲಿದೆ ಎಂದು ಚಿತ್ರದ ನಿರ್ಮಾಪಕ ಪಿ.ಎಸ್. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

  ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಈಗಾಗಲೆ ಚಿತ್ರದ ಹಾಡುಗಳು ಭಾರಿ ಸದ್ದು ಮಾಡುತ್ತಿವೆ. ಕೆ.ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಹಾಡಿನ ತುಣುಕೊಂದು ಈಗ ಯೂಟ್ಯೂಬ್ ನಲ್ಲೂ ಭಾರಿ ಸದ್ದು ಮಾಡುತ್ತಿರುವುದು ಗೊತ್ತೇ ಇದೆ.

  ದರ್ಶನ್ ಜೊತೆ ಈ ಬಾರಿ ಇಬ್ಬರು ನಾಯಕಿಯರು. ಕಾರ್ತಿಕಾ ನಾಯರ್ ಹಾಗೂ ಮಿಲನಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ['ಬೃಂದಾವನ' ಹಾಡು ಯೂಟ್ಯೂಬ್ ಗೆ ಲಗ್ಗೆ]

  ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಹರಿಕೃಷ್ಣ ಸಂಗೀತ, ಕವಿರಾಜ್, ನಾಗೇಂದ್ರ ಪ್ರಸಾದ್ ಸಾಹಿತ್ಯ, ರಮೇಶ್ ಬಾಬು ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಳನಿರಾಜ್ ಸಾಹಸ, ಗಣೇಶ್ (ಹೈದರಾಬಾದ್) ನೃತ್ಯ, ಲಿಂಗರಾಜು ನಿರ್ದೇಶನ ಸಹಕಾರ, ಸುಂದರರಾಜ್ ನಿರ್ಮಾಣ ಮೇಲ್ವಿಚಾರಣೆ, ಗಗನ್‍ಮೂರ್ತಿ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಕೆ. ಮಾದೇಶ್.

  ತಾರಾಗಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಾರ್ತಿಕಾ ನಾಯರ್, ಮಿಲನಾ, ಗೀತಾ, ಶರತ್ ಬಾಬು, ಸಾಯಿಕುಮಾರ್, ನಿರೋಷ, ಜೈಜಗದೀಶ್, ಸಂಗೀತಾ, ಸಾಧು ಕೋಕಿಲ, ಮೋಹನ್ ಜುನೇಜಾ, ದೊಡ್ಡಣ್ಣ, ಕಿಲ್ಲರ್ ವೆಂಕಟೇಶ್, ಶೋಭಾ, ಸಂಪತ್, ಅಜಯ್ (ಹೈದರಾಬಾದ್), ಪ್ರಕಾಶ್ ಹೆಗ್ಗೋಡು, ಕುರಿ ಪ್ರತಾಪ, ವೀಣಾ ಸುಂದರ್, ಕಿಲ್ಲರ್ ವೆಂಕಟೇಶ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Challenging Star Darshan big budget film 'Brindavana' releases on 26th Sept about 200 screens. Challenging Star Darshna lead Brindavana has been passed by the censors with a U/A certificate. The music has been composed by V. Harikrishna. The film also stars Karthika Nair and Milana Nagaraj as the female leads.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X