»   » ಯಾರು ಎಷ್ಟೇ ಬಾಯ್ಬಡ್ಕೊಂಡ್ರೂ 'ಐ ಡೋಂಟ್ ಕೇರ್' ಎಂದ ಸಂಜನಾ.!

ಯಾರು ಎಷ್ಟೇ ಬಾಯ್ಬಡ್ಕೊಂಡ್ರೂ 'ಐ ಡೋಂಟ್ ಕೇರ್' ಎಂದ ಸಂಜನಾ.!

Posted By:
Subscribe to Filmibeat Kannada

'ಬಿಗ್ ಬಾಸ್' ಸಂಜನಾ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ರಣಕಹಳೆ ಊದಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆದ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ದರ್ಶನ್ ಗೆ 'ಬಿಲ್ಡಪ್' ಎಂದು ಕರೆದ ಸಂಜನಾ ಸದ್ಯ ವಿವಾದದ ಕೇಂದ್ರಬಿಂದು.

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

''ಡಿ' ಬಾಸ್ ಬಗ್ಗೆ ಕೊಟ್ಟಿರುವ ಹೇಳಿಕೆಯನ್ನ ವಾಪಸ್ ತೆಗೆದುಕೊಂಡರೆ ಸರಿ. ಇಲ್ಲ ಅಂದ್ರೆ ಶನಿ ಯಾರು ಅಂತ ತೋರಿಸ್ತೀವಿ'' ಅಂತೆಲ್ಲ ದರ್ಶನ್ ಅಪ್ಪಟ ಅಭಿಮಾನಿಗಳು ಸಂಜನಾಗೆ ಎಚ್ಚರಿಕೆ ನೀಡುತ್ತಲೇ ಇದ್ದಾರೆ.

Darshan 'Buildup' controversy: Sanjana's reaction on Facebook

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

ಸಂಜನಾ ಕ್ಷಮೆ ಕೇಳುವವರೆಗೂ 'ಟ್ರೋಲ್ಸ್' ಕೂಡ ನಿರಂತರ ಎಂಬ ಸತ್ಯ ಸ್ವತಃ ಸಂಜನಾಗೂ ಗೊತ್ತು. ಹೀಗಿದ್ದರೂ, ಸಂಜನಾ ಯಾಕೋ 'ಕ್ಷಮೆ' ಕೇಳುವ ಹಾಗೆ ಕಾಣುತ್ತಿಲ್ಲ.

'ಹೀಲ್ಸ್ ಚಪ್ಪಲಿ ಹಾಕೊಂಡ್ರೂ, 'ಡಿ' ಬಾಸ್ ಹೈಯ್ಟ್ ಗೆ ಬರಲ್ಲ, ಬಿಲ್ಡಪ್ ಅಂತಿಯಾ?'

''ಅದು ನನ್ನ ವೈಯುಕ್ತಿಕ ಅಭಿಪ್ರಾಯ. ನಿಮಗೆ ಏನು ಅನ್ಸುತ್ತೆ, ನೀವು ಹೇಳಿ. ನನಗೆ ಏನು ಅನ್ಸುತ್ತೋ, ಅದನ್ನ ಹೇಳಿದ್ದೇನೆ. ದರ್ಶನ್ ಅವರ ಸಿನಿಮಾಗಳಲ್ಲಿ ತುಂಬಾ ಬಿಲ್ಡಪ್ ಇರುತ್ತೆ. ಅದಕ್ಕೆ ಹೇಳ್ದೆ. ಅದು ನನ್ನ ಅಭಿಪ್ರಾಯ. ಅದನ್ನ ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಮಾಡಿದ್ರೂ ಪ್ರಾಬ್ಲಂ ಇಲ್ಲ. ಐ ಡೋಂಟ್ ಕೇರ್'' ಅಂತ ಸಂಜನಾ ಚಿದಾನಂದ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

''ಅವರು ಕೇಳಿದ್ದಕ್ಕೆ, ನಾನು ಹೇಳಿದೆ. ಅದು ನನ್ನ ವೈಯುಕ್ತಿಕ ಅಭಿಪ್ರಾಯ. ನನ್ನ ಇಷ್ಟ. ನಾನು ಕೆಟ್ಟದಾಗಿ ಏನನ್ನೂ ಹೇಳಲಿಲ್ಲ. ನನಗೆ ಅನಿಸಿದ್ದನ್ನ ಹೇಳಿದೆ'' ಎಂದು ಸಂಜನಾ ಕಾಮೆಂಟ್ ಮಾಡಿರುವ ಸ್ಕ್ರೀನ್ ಶಾಟ್ ಗಳು ಫೇಸ್ ಬುಕ್ ತುಂಬಾ ಹರಿದಾಡುತ್ತಿದೆ.

ಆದರೆ, ಸದ್ಯ ಫೇಸ್ ಬುಕ್ ನಿಂದ ಸಂಜನಾ ಮಾಯ ಆಗಿದ್ದಾರೆ. ಸಂಜನಾ ರವರ ಅಫೀಶಿಯಲ್ ಅಕೌಂಟ್ ಡೀ-ಆಕ್ಟಿವೇಟ್ ಆಗಿದೆ. 'ಟ್ರೋಲ್' ಹುಡುಗರ ಕಾಟ ತಾಳಲಾರದೆ, ಫೇಸ್ ಬುಕ್ ಗೆ ಟಾಟಾ ಹೇಳಿದ್ರಾ ಸಂಜನಾ.?

English summary
'Bigg Boss' Sanjana has taken her Facebook account to react on her statement against Challenging Star Darshan in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada