For Quick Alerts
  ALLOW NOTIFICATIONS  
  For Daily Alerts

  ಸಾರಥಿ ದಾಖಲೆ ಮುರಿಯಲಿರುವ ಬುಲ್ ಬುಲ್

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ರಾಜ್ಯದಾದ್ಯಂತ 99 ಚಿತ್ರಮಂದಿರಗಳಲ್ಲಿ ಈ ಚಿತ್ರ ಅರ್ಧ ಸೆಂಚುರಿ ಪೂರೈಸಲು ಸಿದ್ಧವಾಗಿದೆ. ಈ ಮೂಲಕ ಬುಲ್ ಬುಲ್ ಹೊಸ ದಾಖಲೆ ಬರೆಯುತ್ತಿದೆ.

  ದರ್ಶನ್ ಅಭಿನಯದ ಸಾರಥಿ ಚಿತ್ರವು 94 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಪೂರೈಸಿತ್ತು. ಚಿತ್ರದ ಗಳಿಕೆ ಹೀಗೆ ಮುಂದುವರಿದರೆ ಜುಲೈ ವೇಳೆಗೆ ಬುಲ್ ಬುಲ್ ಚಿತ್ರ ಸಾರಥಿ ದಾಖಲೆಯನ್ನು ಮುರಿಯಲಿದೆ ಎನ್ನುತ್ತವೆ ಮೂಲಗಳು.

  ಜೂನ್ 28ಕ್ಕೆ ಬುಲ್ ಬುಲ್ ಚಿತ್ರ ಅರ್ಧ ಶತಕ ಪೂರೈಸಲಿದ್ದು ಬಿಕೆಟಿ ಕೇಂದ್ರಗಳಲ್ಲಿ 18, ಮೈಸೂರು ಮಂಡ್ಯ ಹಾಸನ ಕೊಡಗು ಕೇಂದ್ರಗಳಲ್ಲಿ 21 ಹಾಗೂ ಮುಂಬೈ ಕರ್ನಾಟಕದಲ್ಲಿ 24, ಚಿತ್ರದುರ್ಗ ದಾವಣಗೆರೆ ಕೇಂದ್ರಗಳಲ್ಲಿ 5, ಹೈದರಾಬಾದ್ ಕರ್ನಾಟಕದಲ್ಲಿ 4 ಕೇಂದ್ರಗಳಲ್ಲಿ ಬುಲ್ ಬುಲ್ ಪ್ರದರ್ಶನ ಕಾಣುತ್ತಿದೆ.

  ಮೇ.10ರಂದು ಬಿಡುಗಡೆಯಾದ ಬುಲ್ ಬುಲ್ ಚಿತ್ರ ಮೂರೇ ದಿನಗಳಲ್ಲಿ ರು.5 ಕೋಟಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಬುಲ್ ಬುಲ್ ಚಿತ್ರದ ಇನ್ನೊಂದು ವಿಶೇಷ. ಓಪನಿಂಗ್ ವೀಕ್ ಎಂಡ್ ನಲ್ಲಿ 'ಬುಲ್ ಬುಲ್' ಗಲ್ಲಾಪೆಟ್ಟಿಗೆ ಘಲ್ ಘಲ್ ಎನ್ನಿಸಿತ್ತು. (ಬುಲ್ ಬುಲ್ ಚಿತ್ರ ವಿಮರ್ಶೆ)

  ದರ್ಶನ್ ಚಿತ್ರಗಳು ರೀಮೇಕ್ ಆದರೂ ಸರಿ ಸ್ವಮೇಕ್ ಆದರೂ ಸರಿ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ಇನ್ನು ಇಂಡಸ್ಟ್ರಿಯಲ್ಲಿ ಚಿತ್ರ ದುಡ್ಡು ಮಾಡ್ತಾ ಇಲ್ವಾ ಎಂಬ ಎರಡೇ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ. ದುಡ್ಡು ಮಾಡಿದರೆ ಇನ್ನೊಂದು ರೀಮೇಕ್. ಇಲ್ಲದಿದ್ದರೆ ಹೊಸ ಪ್ರಯತ್ನ ಇದ್ದೇ ಇದೆ. (ಏಜೆನ್ಸೀಸ್)

  English summary
  Challenging Star Darshan's and Rebel Star Ambarish lead Kannada film 'Bulbul' film all set create new record. The film completing 50 days in 99 theatres. Bulbul will break the 'Sarathi' record in first week of July.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X