»   » ದರ್ಶನ್ ಬುಲ್ ಬುಲ್ ಬಾಕ್ಸ್ ಆಫೀಸ್ ರಿಪೋರ್ಟ್

ದರ್ಶನ್ ಬುಲ್ ಬುಲ್ ಬಾಕ್ಸ್ ಆಫೀಸ್ ರಿಪೋರ್ಟ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಕ್ಸ್ ಆಫೀಸ್ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅವರ ಅಭಿನಯದ 'ಬುಲ್ ಬುಲ್' ಚಿತ್ರ ಬಾಕ್ಸ್ ಆಫೀಸಲ್ಲಿ ಕೇವಲ ಮೂರು ದಿನಗಳಲ್ಲಿ ರು.5 ಕೋಟಿ ಬಾಚಿ ನಿರ್ಮಾಪಕರ ಕೈಗೆ ಕೊಟ್ಟಿದೆ.

ಮೇ.10ರಂದು ಬಿಡುಗಡೆಯಾದ ಈ ಚಿತ್ರ ಮೂರೇ ದಿನಗಳಲ್ಲಿ ರು.5 ಕೋಟಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಬುಲ್ ಬುಲ್ ಚಿತ್ರದ ಇನ್ನೊಂದು ವಿಶೇಷ. ಓಪನಿಂಗ್ ವೀಕ್ ಎಂಡ್ ನಲ್ಲಿ 'ಬುಲ್ ಬುಲ್' ಗಲ್ಲಾಪೆಟ್ಟಿಗೆ ಘಲ್ ಘಲ್ ಎನ್ನಿಸಿದೆ.


ಸರಿಸುಮಾರು 160 ದಾಖಲೆ ಚಿತ್ರಮಂದಿರಗಳಲ್ಲಿ ತೆರೆಕಂಡ 'ಬುಲ್ ಬುಲ್' ಚಿತ್ರಕ್ಕೆ ಮಂಡ್ಯ, ಮೈಸೂರು, ಹಾಸನ ಕೇಂದ್ರಗಳಲ್ಲಿ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು ಅಲ್ಲೂ ಹೌಸ್ ಫುಲ್. ಇನ್ನು ದಾವಣಗೆರೆ ಅಭಿಮಾನಿಗಳಿಗೆ ಬುಲ್ ಬುಲ್ ಬೆಣ್ಣೆದೋಸೆಯಾದರೆ ಶಿವಮೊಗ್ಗದವರಿಗೆ ಬೆಣ್ಣೆಕಡುಬು, ಚಿಕ್ಕಮಗಳೂರಿನವರಿಗೆ ಮೆಂತ್ಯೆಬಾತ್ ನಂತೆ ಸವಿದಿದ್ದಾರೆ.

ಉಳಿದಂತೆ ಉತ್ತರ ಕರ್ನಾಟದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಮಂಗಳೂರಿನಲ್ಲಿ ಮಾತ್ರ ಯಾಕೋ ಏನೋ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಆದರೂ ಒಂದೇ ವಾರದಲ್ಲಿ ರು.10 ಕೋಟಿ ಗಳಿಸುವ ಸಾಧ್ಯತೆಗಳಿದೆ ಎಂದು ನಿರೀಕ್ಷಿಸಲಾಗಿದೆ. (ಬುಲ್ ಬುಲ್ ಚಿತ್ರವಿಮರ್ಶೆ)

ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರೀಕರಣಗೊಂಡಿರುವ ಬುಲ್ ಬುಲ್ ಚಿತ್ರವನ್ನು ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ಮಾಪಕರು.

ದರ್ಶನ್ ಚಿತ್ರಗಳು ರೀಮೇಕ್ ಆದರೂ ಸರಿ ಸ್ವಮೇಕ್ ಆದರೂ ಸರಿ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ಇನ್ನು ಇಂಡಸ್ಟ್ರಿಯಲ್ಲಿ ಚಿತ್ರ ದುಡ್ಡು ಮಾಡ್ತಾ ಇಲ್ವಾ ಎಂಬ ಎರಡೇ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ. ದುಡ್ಡು ಮಾಡಿದರೆ ಇನ್ನೊಂದು ರೀಮೇಕ್. ಇಲ್ಲದಿದ್ದರೆ ಹೊಸ ಪ್ರಯತ್ನ ಇದ್ದೇ ಇದೆ. (ಏಜೆನ್ಸೀಸ್)

English summary
Challenging Star Darshan starer 'Bulbul' box office report. The films first three days opening weekend collection are Rs 5 crore. The film released in 160 centres across Karnataka and almost all centres are showing houseful. 
Please Wait while comments are loading...