»   » ಚುನಾವಣೆ ಬಳಿಕ ಬುಲ್ ಬುಲ್ ಮಾತಾಡಾಕಿಲ್ವಾ ರಿಲೀಸ್

ಚುನಾವಣೆ ಬಳಿಕ ಬುಲ್ ಬುಲ್ ಮಾತಾಡಾಕಿಲ್ವಾ ರಿಲೀಸ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿರುವ ಕಾರಣ ಚಿತ್ರದ ಬಿಡುಗಡೆಗೆ ಚುನಾವಣಾ ಆಯೋಗ ಅವಕಾಶ ನೀಡಿರಲಿಲ್ಲ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ ಅವರು, ಬುಲ್ ಬುಲ್ ಚಿತ್ರ ಮೇ.10ಕ್ಕೆ ನಿಮ್ಮ ಮುಂದೆ ಬರುತ್ತಿದೆ. ಚಿತ್ರ ನಿಮ್ಮೆಲ್ಲರ ಮನಗೆಲ್ಲಲಿದೆ ಎಂದಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ವಿಶೇಷಣಕ್ಕೆ ಬುಲ್ ಬುಲ್ ಚಿತ್ರ ಪಾತ್ರವಾಗುತ್ತಿದೆ.

ಎಂ.ಡಿ.ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಕಿರುತೆರೆಯಲ್ಲಿ ಹೆಸರು ಮಾಡಿದ್ದ ರಚಿತಾ ರಾಮ್ ಚಿತ್ರದ ನಾಯಕಿ. ದರ್ಶನ್ ಅವರ ಹೋಂ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಿರ್ಮಾಣದ ಚಿತ್ರ ಇದಾಗಿದೆ.

ವಿ ಹರಿಕೃಷ್ಣ, ಗೀತಸಾಹಿತಿ ಕವಿರಾಜ್ ಹಾಗೂ ಕೆಲವು ತಂತ್ರಜ್ಞರು ಚಿತ್ರದ ನಿರ್ಮಾಣದ ಪಾಲುದಾರರು. ಬುಲ್ ಬುಲ್ ಚಿತ್ರ ತೆಲುಗಿನ 'ಡಾರ್ಲಿಂಗ್' ರೀಮೇಕ್. ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ಮಾಪಕರು.

ದರ್ಶನ್ ಚಿತ್ರಗಳು ರೀಮೇಕ್ ಆದರೂ ಸರಿ ಸ್ವಮೇಕ್ ಆದರೂ ಸರಿ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ಇನ್ನು ಇಂಡಸ್ಟ್ರಿಯಲ್ಲಿ ಚಿತ್ರ ದುಡ್ಡು ಮಾಡ್ತಾ ಇಲ್ವಾ ಎಂಬ ಎರಡೇ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ. ದುಡ್ಡು ಮಾಡಿದರೆ ಇನ್ನೊಂದು ರೀಮೇಕ್. ಇಲ್ಲದಿದ್ದರೆ ಹೊಸ ಪ್ರಯತ್ನ. (ಏಜೆನ್ಸೀಸ್)

English summary
Challenging star Darshan's upcoming film BulBul is all set to release on 10th May. The film directed by MD Sridhar has Darshan, Ambareesh and newbie Rachita Ram in lead roles.
Please Wait while comments are loading...