»   » ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ'

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡುತ್ತಿದೆ. ಏಪ್ರಿಲ್ 14 ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿರುವ 'ಚಕ್ರವರ್ತಿ' ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

ವಿಶೇಷ ಅಂದ್ರೆ, ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ವೈಷ್ಣವಿ ಚಿತ್ರಮಂದಿರದಲ್ಲಿ ದಿನದ 24 ಗಂಟೆಯೂ 'ಚಕ್ರವರ್ತಿ' ಸಿನಿಮಾ ಪ್ರದರ್ಶನವಾಗಲಿದೆಯಂತೆ.['ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!]

Darshan 'Chakravarthy' Creat A New Record

ಮಧ್ಯರಾತ್ರಿ 12 ಗಂಟೆಗೆ ಮೊದಲ ಶೋ ಆರಂಬಿಸಿ, ಮತ್ತೆ ಮಧ್ಯರಾತ್ರಿಯವರೆಗೂ 'ಚಕ್ರವರ್ತಿ' ಪ್ರದರ್ಶನವನ್ನ ಮುಂದುವರೆಸಲು ನಿರ್ಧರಿಸಿದೆಯಂತೆ. ಈ ಮೂಲಕ ವೈಷ್ಣವಿ ಚಿತ್ರಮಂದಿರದಲ್ಲಿ ಏಪ್ರಿಲ್ 14 ರಂದು ಸತತವಾಗಿ 8 ಶೋಗಳು ನಡೆಯಲಿವೆ.[ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್ ]

ಅಂದ್ಹಾಗೆ, 'ಚಕ್ರವರ್ತಿ' ಚಿತ್ರವನ್ನ ಚಿಂತನ್ ನಿರ್ದೇಶನ ಮಾಡಿದ್ದು, ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.['ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?]

English summary
Challenging Star Darshan Starrer 'Chakravarthy' Movie is Releasing on April 14th. Vaishnavi Theater (Uttarahalli) has come up with 8 shows for 'Chakravarthy' On Releasing Day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada