Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಚಪ್ಪಲಿಯಲ್ಲಿ ಹೊಡೆಯೋ ಕೆಲಸ ಏನು ಮಾಡಿದ್ದೀನಿ? ಸಾಮ್ರಾಜ್ಯ ಕಟ್ಟೋಕೆ 25 ವರ್ಷ ಹಿಡೀತು"–ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿನಿಮಾ 'ಕ್ರಾಂತಿ' ಬಿಡುಗಡೆ ಬ್ಯುಸಿಯಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ 'ಕ್ರಾಂತಿ ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ.
ಈಗ ಸಂದರ್ಶನವೊಂದರಲ್ಲಿ ದರ್ಶನ್ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ 25 ವರ್ಷ ಜರ್ನಿ, ಫ್ಯಾನ್ಸ್ ವಾರ್ ಬಗ್ಗೆನೂ ಮಾತಾಡಿದ್ದಾರೆ. ದರ್ಶನ್ ಜೊತೆಗಿನ ಸಂದರ್ಶನದ ಪ್ರೋಮೊವನ್ನು ನಿರೂಪಕ ಆರ್‌ಜೆ ಮಯೂರ್ ರಿಲೀಸ್ ಮಾಡಿದ್ದಾರೆ. ಅದರ ಹೈಲೈಟ್ಸ್ ಇಲ್ಲಿದೆ.

ಮನಸ್ಸಿಗೂ ಹೃದಯಕ್ಕೂ ಕನೆಕ್ಷನ್ ಇಲ್ಲ
ಆರ್ ಮಯೂರ್ ಹಾಗೂ ದರ್ಶನ್ ನಡುವಿನ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿವೆ.ಈ ವಿಡಿಯೋದಲ್ಲಿ ಮನಸ್ಸು ಹಾಗೂ ಹೃದಯದ ಮಾತಿನ ಬಗ್ಗೆ ಮಾತಾಡಿದ್ದಾರೆ. "ನನಗೆ ಇಲ್ಲಿಗೂ(ಮನಸ್ಸಿಗೂ) ಇಲ್ಲಿಗೂ (ಹೃದಯ) ಕನೆಕ್ಷನ್ ಇಲ್ಲ. ಏನು ಕೇಳುತ್ತಿನೋ ಇಲ್ಲಿ (ಮನಸ್ಸು) ಏನು ಬರುತ್ತೋ, ಇಲ್ಲೂ (ಹೃದಯದಲ್ಲೂ) ಅದೇ ಬರುತ್ತೆ." ಎಂದಿದ್ದಾರೆ.

ಚಪ್ಪಲಿಯಲ್ಲಿ ಹೊಡೆಸಿಕೊಳ್ಳೊದು ಏನು ಮಾಡಿದ್ದೀನಿ?
ಹೊಸಪೇಟೆಯಲ್ಲಿ ತಮ್ಮ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಗ್ಗೆ ಸಂದರ್ಶನಗಳಲ್ಲಿ ಮಾತಾಡಿರಲಿಲ್ಲ. ಈಗ ಸಂದರ್ಶನದಲ್ಲಿ ಆ ಬಗ್ಗೆನೂ ಮಾತಾಡಿದ್ದಾರೆ. ಅದರ ಝಲಕ್ ಹೀಗಿದೆ."ಚಪ್ಪಲಿಯಲ್ಲಿ ಹೊಡೆಸಿಕೊಳ್ಳೊ ಕೆಲಸ ಏನು ಮಾಡಿದ್ದೀನಿ ಅಂತ ನನಗೆ ಅರ್ಥ ಆಗಿಲ್ಲ. ಹಾರ ಹಾಕಿಸಿಕೊಳ್ಳುವಾಗ ಎಷ್ಟು ಖುಷಿಯಲ್ಲಿ ಹಾಕಿಸಿಕೊಳ್ಳುತ್ತೀವಿ. ಇದನ್ನೂ ಅದೇ ಪ್ರೈಡ್‌ನಲ್ಲಿ ಎತ್ತಿಕೊಂಡೆ ಅಷ್ಟೇ." ಎಂದು ದರ್ಶನ್ ಹೇಳಿದ್ದಾರೆ.

ಫ್ಯಾನ್ಸ್ ವಾರ್ ಬಗ್ಗೆ ಹೇಳಿದ್ದೇನು?
ನಿರೂಪಕ ಆರ್ ಜೆ ಮಯೂರ್ ಫ್ಯಾನ್ಸ್ ವಾರ್ ಬಗ್ಗೆನೂ ಪ್ರಶ್ನೆ ಮಾಡಿದ್ದರು. ಈ ಬಗ್ಗೆನೂ ದರ್ಶನ್ ಮುಕ್ತವಾಗಿಯೇ ಮಾತಾಡಿದ್ದು, ಕೆಲವು ತುಣುಕುಗಳನ್ನು ಹೊರಬಿಟ್ಟಿದ್ದಾರೆ."ಚಿಟ್ಟಿಕೆ ಇದೂ ಚೆನ್ನಾಗಿದೆ. ಚಪ್ಪಾಳೆ ಇದೂ ಚೆನ್ನಾಗಿದೆ. ಎರಡು ಕೈಯಲ್ಲಿ ಹೊಡೆದರೆ ತಾನೇ ಚಪ್ಪಾಳೆ. ಕೇವಲ ಒಬ್ಬರು ಮಾತ್ರ ಆಟ ಆಡಲ್ಲ ಅಲ್ವ." ಎಂದಿದ್ದಾರೆ ದರ್ಶನ್.

ಈ ಸಾಮ್ರಾಜ್ಯ ಕಟ್ಟೋಕೆ ನಾನು 25 ವರ್ಷ'
"ಚಾಲೆಂಜಿಂಗ್ ಸ್ಟಾರ್ ಆಗಲಿ, ದರ್ಶನ್ ಆಗಲಿ. ಇದೂವರೆಗೂ ಯಾರಿಗೂ ಮೋಸ ಮಾಡಿಲ್ಲ.ಸ್ವಾಮಿ ಈ ಸಾಮ್ರಾಜ್ಯ ಕಟ್ಟೋಕೆ ನಾನು 25 ವರ್ಷ ತೆಗೆದುಕೊಂಡಿದ್ದೇನೆ. ನಿನ್ನೆ, ಮೊನ್ನೆ ಇವತ್ತು ಮಲಗಿ ಎದ್ದು ನಾನು ಸ್ಟಾರ್ ಆದವನಲ್ಲ. ಯಾರಿಗೆ ಯಾರೂ ಶಿಷ್ಯರೂ ಇಲ್ಲ. ಯಾರಿಗೆ ಯಾರೂ ಗುರುನೂ ಇಲ್ಲ. ನನ್ನ ಲೈಫ್ ಅದು." ಎಂದಿರುವ ವಿಡಿಯೋ ವೈರಲ್ ಆಗುತ್ತಿದೆ.