For Quick Alerts
  ALLOW NOTIFICATIONS  
  For Daily Alerts

  ಶ್ರೀಗಳ ಅಂತಿಮ ದರ್ಶನ ಪಡೆದ ನಟ ದರ್ಶನ್

  |

  ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಅಂತಿಮ ದರ್ಶನವನ್ನು ನಟ ದರ್ಶನ್ ಪಡೆದಿದ್ದಾರೆ. ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ ದರ್ಶನ್ ಶ್ರೀಗಳ ದರ್ಶನ ಪಡೆದರು.

  ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ

  ಶ್ರೀಗಳ ಅಂತಿಮ ದರ್ಶನ ಪಡೆದು ಅಲ್ಲಿದ್ದ ಹಿರಿಯ ಸ್ವಾಮಿಜಿಗಳ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡರು. ಕಿರಿಯ ಸ್ವಾಮಿಗಳ ಜೊತೆ ಕೆಲ ಕಾಲ ದರ್ಶನ್ ಮಾತನಾಡಿದರು. ನಿನ್ನೆ ಶ್ರೀಗಳ ಸುದ್ದಿ ತಿಳಿದ ತಕ್ಷಣ ಟ್ವಿಟ್ಟರ್ ಖಾತೆಯ ಮೂಲಕ ಸಂತಾಪ ಸೂಚಿಸಿದ್ದರು.

  ''ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿ ಇಹಲೋಕ ತ್ಯಜಿಸಿರುವುದು ಬಹಳ ನೋವಿನ ಸಂಗತಿ. ಇಷ್ಟು ದಿನ ಭಕ್ತರ ದರ್ಶನಕ್ಕೆ ಅವರಿದ್ದರು, ಈಗ ದೈಹಿಕವಾಗಿ ನಮ್ಮನ್ನು ಅಗಲಿದರೂ ಎಲ್ಲರ ಮನೆ ಮನಗಳಲ್ಲಿ ಅವರು ಭದ್ರವಾಗಿ ನೆಲೆಸಿದ್ದಾರೆ.'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

  ಸಿದ್ದಗಂಗಾ LIVE: ವಾರಣಾಸಿಯಲ್ಲಿ ಶ್ರೀಗಳನ್ನು ನೆನೆದ ಮೋದಿ

  ಅಂದಹಾಗೆ, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಿರ್ದೇಶಕ ಸಾಯಿ ಪ್ರಕಾಶ್, ನಟಿ ಲೀಲಾವತಿ, ವಿನೋದ್ ರಾಜ್ ಸೇರಿದಂತೆ ಚಿತ್ರರಂಗ ಅನೇಕ ಗಣ್ಯರು ಸಿದ್ದಗಂಗಾ ಮಠಕ್ಕೆ ಹೋಗಿ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.

  English summary
  Kannada actor Darshan expressed condolence to shivakumara swamiji death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X