For Quick Alerts
  ALLOW NOTIFICATIONS  
  For Daily Alerts

  'ಬೇಬಿ ಡಾನ್ಸ್ ಫ್ಲೋರ್ ರೆಡಿ..' ಹಾಡಿಗಾಗಿ ದರ್ಶನ್ ತಯಾರಿ ಹೇಗಿತ್ತು ನೋಡಿ!

  |

  ದಕ್ಷಿಣ ಭಾರತದಲ್ಲಿ ಈಗ ಎಲ್ಲಿ ನೋಡಿದ್ರು ಡಿ ಬಾಸ್ ರಾಬರ್ಟ್ ಸಿನಿಮಾದ್ದೆ ಹವಾ. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಸ್ತೆಗಳಲ್ಲಿ ರಾಬರ್ಟ್ ಪೋಸ್ಟರ್, ಬ್ಯಾನರ್‌ಗಳೇ ರಾರಾಜಿಸುತ್ತಿವೆ. ದರ್ಶನ್ ಸಿನಿಮಾವೊಂದು ತೆಲುಗು ಮತ್ತು ಬೇರೆ ಬೇರೆ ಭಾಷೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು.

  ಬೇಬಿ ಡಾನ್ಸ್ ಫ್ಲೋರ್ ರೆಡಿ ಹಾಡಿಗಾಗಿ ದರ್ಶನ್ ತಯಾರಿ ಹೇಗಿತ್ತು | Baby Dance Floor Ready | Roberrt

  ಅಂದಹಾಗೆ ರಾಬರ್ಟ್ ದರ್ಶನಕ್ಕೆ ಇನ್ನೊಂದೇ ಒಂದು ದಿನ ಮಾತ್ರ ಬಾಕಿ ಇದೆ. ಈಗಾಗಲೇ ಹಾಡುಗಳು, ಟ್ರೈಲರ್ ಮತ್ತು ಮೇಕಿಂಗ್ ವಿಡಿಯೋಗಳ ಮೂಲಕ ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿರುವ ರಾಬರ್ಟ್, ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂದೆ ಓದಿ..

  ರಾಬರ್ಟ್ ಅಬ್ಬರ: ಮೊದಲ ದಿನವೇ ದಾಖಲೆ ಬರೆದ ದಾಸನ ಸಿನಿಮಾ

  ರಾಬರ್ಟ್ ನಲ್ಲಿ ದರ್ಶನ್ ಭರ್ಜರಿ ಡಾನ್ಸ್

  ರಾಬರ್ಟ್ ನಲ್ಲಿ ದರ್ಶನ್ ಭರ್ಜರಿ ಡಾನ್ಸ್

  ರಾಬರ್ಟ್ ಸಾಕಷ್ಟು ವಿಚಾರಗಳಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಪ್ರಮುಖವಾಗಿ ದರ್ಶನ್ ಡಾನ್ಸ್ ನೋಡಿ ಅಭಿಮಾನಿಗಳು ಸಹ ಕುಣಿದು ಕುಪ್ಪಳಿಸುತ್ತಿದ್ದಾರೆ. ಬೇಬಿ ಡಾನ್ಸ್ ಫ್ಲೋರ್ ರೆಡಿ.. ಹಾಡಿನಲ್ಲಿ ಡಿ ಬಾಸ್ ಸಖತ್ ಸ್ಟೆಪ್ ನೋಡಿ ಫ್ಯಾನ್ಸ್ ಅಚ್ಚರಿ ಪಟ್ಟಿದ್ದಾರೆ.

  ರಿಹರ್ಸಲ್ ಮೇಕಿಂಗ್ ವಿಡಿಯೋ

  ರಿಹರ್ಸಲ್ ಮೇಕಿಂಗ್ ವಿಡಿಯೋ

  ಹಾಡಿನ ಚಿತ್ರೀಕರಣಕ್ಕೂ ಮೊದಲು ದರ್ಶನ್ ಒಂದು ದಿನ ನೃತ್ಯ ತರಬೇತಿ ನಡೆಸಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ರಿಹರ್ಸಲ್ ನಡೆಸಿರುವ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ನೃತ್ಯ ನಿರ್ದೇಶಕ ಭೂಷಣ್ ಡಾನ್ಸ್ ಸ್ಟೆಪ್ ನೋಡಿ ಫಿದಾ ಆಗಿರುವ ದರ್ಶನ್, ಈ ಹಿಂದೆ ಯಾವುದೇ ಸಿನಿಮಾದಲ್ಲೂ ಮಾಡಿರದ ಕಷ್ಟದ ಸ್ಟೆಪ್‌ಗಳನ್ನು ಕಲಿತು ರಾಬರ್ಟ್ ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ.

  'ರಾಬರ್ಟ್' ಸಿನಿಮಾ ಚಿತ್ರೀಕರಣಕ್ಕೆ ಕಿಶನ್ ಮಾಡಿದ ಸಹಾಯವನ್ನು ಹೊಗಳಿದ ದರ್ಶನ್

  ತರುಣ್ ಸುಧೀರ್ ಸಂತಸ

  ತರುಣ್ ಸುಧೀರ್ ಸಂತಸ

  ಡಿ ಬಾಸ್ ಗೆ ನಾಯಕಿ ಆಶಾ ಭಟ್ ಕೂಡ ಸಾಥ್ ನೀಡಿದ್ದು, ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಈ ಬಗ್ಗೆ ಇಡೀ ಟೀಂ ಫುಲ್ ಖುಷ್ ಆಗಿದೆ. ಸದ್ಯ ರಿಲೀಸ್ ಆಗಿರುವ ಮೇಕಿಂಗ್ ವಿಡಿಯೋದಲ್ಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿರುವ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಸಂತಸ ವ್ಯಕ್ತಪಡಿಸಿದ್ದಾರೆ.

  ಕರ್ನಾಟಕದಲ್ಲಿ 656 ಚಿತ್ರಮಂದಿರಗಳಲ್ಲಿ ರಿಲೀಸ್

  ಕರ್ನಾಟಕದಲ್ಲಿ 656 ಚಿತ್ರಮಂದಿರಗಳಲ್ಲಿ ರಿಲೀಸ್

  ಕರ್ನಾಟಕ ರಾಜ್ಯಾದ್ಯಂತ ಸುಮಾರು 656 ಚಿತ್ರಮಂದಿರಗಳಲ್ಲಿ ರಾಬರ್ಟ್ ಸಿನಿಮಾ ತೆರೆಕಾಣುತ್ತಿದೆ. ಸದ್ಯದ ವರದಿ ಪ್ರಕಾರ, ಕನ್ನಡ ಸಿನಿಮಾವೊಂದು ನಮ್ಮ ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಬಿಡುಗಡೆ ಕಾಣುತ್ತಿರುವುದು ಇದೇ ಮೊದಲು. ಪೊಗರು ಹಾಗೂ ಹೀರೋ ಸಿನಿಮಾ ಪ್ರದರ್ಶನವಾಗುತ್ತಿದ್ದ ಹಲವು ಚಿತ್ರಮಂದಿರಗಳು ರಾಬರ್ಟ್ ಪಾಲಾಗಿದೆ ಎಂಬ ವಿಚಾರವೂ ವರದಿಯಾಗಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

  English summary
  Actor Darshan dance rehearsal in Roberrt making video viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X