For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನನ್ನನ್ನು ಹೊಡೆದಿಲ್ಲ, ಬೈದರು ಅಷ್ಟೆ: ಸಂತ್ರಸ್ತ ಗಂಗಾಧರ್

  |

  ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ನಟ ದರ್ಶನ್ ಹೋಟೆಲ್ ದಲಿತ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಆ ನೌಕರನ ಕಣ್ಣಿಗೆ ಹಾನಿ ಆಗಿದೆ. ಆತನ ಪತ್ನಿ ಪೊರಕೆ ತೆಗೆದುಕೊಂಡು ಹೋಟೆಲ್ ಬಳಿ ಹೋಗಿ ಜಗಳ ಮಾಡಿದ್ದರು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು.

  ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ತನಿಖೆ ಆರಂಭಿಸಿದ್ದು, ದರ್ಶನ್‌ನಿಂದ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಗಂಗಾಧರ್ ಅನ್ನು ವಿಚಾರಣೆ ನಡೆಸಿದರು. ಜೊತೆಗೆ ಘಟನೆ ನಡೆದಾಗ ಹಾಜರಿದ್ದ ಇನ್ನೂ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ಪೊಲೀಸರ ವಿಚಾರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗಂಗಾಧರ್, ''ದರ್ಶನ್ ನನ್ನನ್ನು ಹೊಡೆದಿಲ್ಲ. ಅಂದು ಸರ್ವೀಸ್ ಸ್ವಲ್ಪ ಲೇಟ್ ಆಯ್ತು ಅದಕ್ಕೆ ಜೋರಾಗಿ ಬೈದರು ಅಷ್ಟೆ'' ಎಂದಿದ್ದಾರೆ.

  ಇಂದ್ರಜಿತ್ ಹೇಳಿರುವಂತೆ ನಾನು ದಲಿತ ಅಲ್ಲ ಬದಲಿಗೆ ಬ್ರಾಹ್ಮಣ, ಹಾಗೂ ಅವರು ಹೇಳಿರುವಂತೆ ನನ್ನ ಪತ್ನಿ ಪೊರಕೆ ಹಿಡಿದುಕೊಂಡು ಬಂದು ಹೋಟೆಲ್‌ ಮುಂದೆ ಜಗಳವಾಡಲು ಸಾಧ್ಯವಿಲ್ಲ. ನನಗೆ ಮದುವೆಯೇ ಆಗಿಲ್ಲ. ನಾನು ನನ್ನ ತಾಯಿಯೊಟ್ಟಿಗೆ ವಾಸವಿದ್ದೇನೆ'' ಎಂದರು ಗಂಗಾಧರ್.

  ''ನನಗೆ ದರ್ಶನ್ ಹೊಡೆದಿದ್ದಾರೆ ಎಂಬುದು ಸುಳ್ಳು. ನನ್ನ ಕಣ್ಣಿಗೆ ಏಟಾಗಿದೆ ಎಂದು ಹೇಳಿದ್ದು ಸಹ ಸುಳ್ಳು. ಬೇಕಿದ್ದರೆ ನೀವೇ ನೋಡಿಕೊಳ್ಳಿ'' ಎಂದು ಮಾಸ್ಕ್ ತೆಗೆದು ತೋರಿಸಿದರು ನಟ ದರ್ಶನ್. ಘಟನೆ ನಡೆದಾಗ ಹಾಜರಿದ್ದ ಮಹಾರಾಷ್ಟ್ರದ ಟ್ರೈನಿ ಒಬ್ಬನನ್ನು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ಗಂಗಾಧರ್ ಹೇಳಿಕೆ ಮೂಲಕ, ಇಂದ್ರಜಿತ್ ಹೇಳಿದ್ದ ಬಹುತೇಕ ಆರೋಪಗಳು ಬಲ ಕಳೆದುಕೊಂಡಿವೆ. ಆದರೆ ನಿನ್ನೆಯೇ ಇಂದ್ರಜಿತ್ ಹೇಳಿದ್ದರು, ಒಂದೊಮ್ಮೆ ಅವರು ಸುಳ್ಳು ಹೇಳಿದರೆ, ನಾನು ದಾಖಲೆ ಬಿಡುಗಡೆ ಮಾಡುತ್ತೀನಿ ಎಂದು. ಈಗ ಗಂಗಾಧರ್ 'ದರ್ಶನ್ ನನಗೆ ಹೊಡೆದಿಲ್ಲ' ಎಂದಿದ್ದಾರೆ. ಈಗ ಇಂದ್ರಜಿತ್ ವಿಡಿಯೋ ಬಿಡುಗಡೆ ಮಾಡುತ್ತಾರಾ ಕಾದು ನೋಡಬೇಕಿದೆ.

  English summary
  Sandesh Prince hotel employee Gangadhar said Darshan did not hit me. He said he scoled me because I served him late.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X