For Quick Alerts
  ALLOW NOTIFICATIONS  
  For Daily Alerts

  ಇಲ್ಲಿ ಯಾರೂ ಬಾಸ್ ಅಲ್ಲ ಎಂದ ಶಿವಣ್ಣ; 'ವಂಶ'ಕ್ಕೆ ಕೌಂಟರ್ ಕೊಟ್ಟ ದರ್ಶನ್ ಫ್ಯಾನ್ಸ್!

  By ಫಿಲ್ಮಿಬೀಟ್ ಡೆಸ್ಕ್
  |

  ಫ್ಯಾನ್ ವಾರ್ ಸದ್ಯ ಚಂದನವನದಲ್ಲಿ ತಾರಕಕ್ಕೇರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕ್ರಾಂತಿ ಚಿತ್ರತಂಡ ತಮ್ಮ ಚಿತ್ರದ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ ಘಳಿಗೆಯಿಂದ ಹೊತ್ತಿಕೊಂಡ ಫ್ಯಾನ್ ವಾರ್ ಕಿಡಿ ಈಗ ಬೆಂಕಿಯಾಗಿ ಉರಿಯುತ್ತಿದೆ. ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಸಾವಿರಾರು ದರ್ಶನ್ ಅಭಿಮಾನಿಗಳ ಮುಂದೆಯೇ ಕ್ರಾಂತಿ ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿ ದರ್ಶನ್ ಅಭಿಮಾನಿಗಳು 'ನಿಮ್ಮೂರಿಗೆ ಬರ್ತಾ ಇದ್ದೇವೆ ಏನ್ ಮಾಡ್ಕೊತಿರೋ ಮಾಡ್ಕೊಳಿ' ಎಂದು ನೀಡಿದ್ದ ಹೇಳಿಕೆಗೆ ಉತ್ತರ ಕೊಟ್ಟಿದ್ದರು.

  ಇನ್ನು ಇದೇ ದಿನ ಕಿಡಿಗೇಡಿಯೋರ್ವ ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ. ಈ ಕೃತ್ಯವನ್ನು ಯಾರು ಮಾಡಿದರು ಎಂಬುದು ತಿಳಿಯುವ ಮೊದಲೇ ಇದನ್ನು ಅಪ್ಪು ಅಭಿಮಾನಿಗಳೇ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿಕೊಂಡಿತ್ತು. ಈಗಲೂ ಸಹ ಇದು ಉತ್ತರ ಸಿಗದಿರುವ ಪ್ರಶ್ನೆಯೇ. ಈ ಘಟನೆ ಬಳಿಕ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಹೆಚ್ಚಾಗಿಬಿಟ್ಟಿದೆ.

  'ಕಾಕ್ಟೈಲ್' ವೇದಿಕೆಯಲ್ಲಿ ಅಪ್ಪು ಜಪ, ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್'ಕಾಕ್ಟೈಲ್' ವೇದಿಕೆಯಲ್ಲಿ ಅಪ್ಪು ಜಪ, ಟ್ರೈಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

  ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಅಭಿಮಾನಿಗಳ ನಡುವೆ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ನಟರು ಯಾವುದಾದರೂ ಹೇಳಿಕೆ ನೀಡಿದರೂ ಸಾಕು ಅದನ್ನು ನಮಗೇ ಹೇಳಿದ್ದು ಎಂದು ಫ್ಯಾನ್ಸ್ ಪ್ರತಿಕ್ರಿಯಿಸಿ ಕಿಡಿಕಾರುತ್ತಿದ್ದಾರೆ. ಅದೇ ರೀತಿ ನಟ ಶಿವ ರಾಜ್‌ಕುಮಾರ್ ನೀಡಿದ ಹೇಳಿಕೆಗೆ ಕೂಡ ದರ್ಶನ್ ಫ್ಯಾನ್ಸ್ ಕೆಂಡಾಮಂಡಲವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

  ಶಿವಣ್ಣನ ಬಾಸ್ ಹೇಳಿಕೆ

  ಶಿವಣ್ಣನ ಬಾಸ್ ಹೇಳಿಕೆ

  ವೇದ ಸೂಪರ್ ಸಕ್ಸಸ್ ಖುಷಿಯಲ್ಲಿರುವ ಸ್ಯಾಂಡಲ್‌ವುಡ್ ಕಿಂಗ್ ಶಿವಣ್ಣ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಯಾರೂ ಬಾಸ್ ಅಲ್ಲ, ಮೇಲಿದ್ದಾನಲ್ಲ ದೇವರು ಅವನೊಬ್ಬನೇ ಬಾಸ್ ಎಂದಿದ್ದಾರೆ. ಇನ್ನು ತಮ್ಮ ನಟನಿಗೆ ಡಿ ಬಾಸ್ ಎನ್ನುವ ದರ್ಶನ್ ಅಭಿಮಾನಿಗಳಿಗೆ ಈ ಹೇಳಿಕೆ ನಮಗೇ ಹೇಳಿದ್ದು ಎನಿಸಿಬಿಟ್ಟಿದೆ. ಶಿವ ರಾಜ್‌ಕುಮಾರ್ ಪರೋಕ್ಷವಾಗಿ ನಾವು ಡಿ ಬಾಸ್ ಎನ್ನುವ ಕಾರಣ ಇಂಥ ಹೇಳಿಕೆ ನೀಡಿದ್ದಾರೆ ಎಂದುಕೊಂಡು ಟ್ರೋಲ್ ಮಾಡಲು ಮುಂದಾಗಿದ್ದಾರೆ.

  ಇರೋದು ಒಂದೇ ವಂಶ

  ಇರೋದು ಒಂದೇ ವಂಶ

  ಶಿವ ರಾಜ್‌ಕುಮಾರ್ ಇರೋದು ಒಬ್ಬನೇ ಬಾಸ್ ಅದು ದೇವರು ಎಂದಿದ್ದನ್ನು ಸಹಿಸಲಾಗದ ದರ್ಶನ್ ಅಭಿಮಾನಿಗಳು 'ಇರೋದು ಒಂದೇ ರಾಜವಂಶ, ಅದು ಮೈಸೂರು ರಾಜವಂಶ' ಎಂದು ಟ್ರೋಲ್ ಮಾಡಿದ್ದಾರೆ. ಇದಕ್ಕೆ ಶಿವ ರಾಜ್‌ಕುಮಾರ್ ಅಭಿಮಾನಿಗಳು ಕಿಡಿಕಾರಿದ್ದು, ಅವರು ಮತ್ಯಾವ ರೀತಿಯ ಕೌಂಟರ್ ಕೊಡುತ್ತಾರೋ ಕಾದು ನೋಡಬೇಕಿದೆ..

  ದರ್ಶನ್ 'ಉರಿಸೋಣ' ಹೇಳಿಕೆಗೂ ಕೌಂಟರ್!

  ದರ್ಶನ್ 'ಉರಿಸೋಣ' ಹೇಳಿಕೆಗೂ ಕೌಂಟರ್!

  ಇನ್ನು ಹುಬ್ಬಳ್ಳಿಯಲ್ಲಿ ಕಳೆದ ಭಾನುವಾರ ಮಾತನಾಡಿದ್ದ ದರ್ಶನ್ ಹೊಸಪೇಟೆಯಲ್ಲಿ ತನ್ನ ಮೇಲೆ ಚಪ್ಪಲಿ ಎಸೆದದ್ದರ ಬಗ್ಗೆ ಪ್ರತಿಕ್ರಿಯಿಸಿ ಅವರು ಏನೋ ಮಾಡಿದ್ರೂ ನಾವು ಬೇಜಾರು ಮಾಡಿಕೊಳ್ಳಲ್ಲ, ಅವರು ಉರಿಸಿದ್ರೆ ನಾವು ಇನ್ನೂ ಜಾಸ್ತಿ ಉರಿಸೋಣ ಎಂದಿದ್ದರು. ಈ ಹೇಳಿಕೆಗೆ ಅಪ್ಪು ಬ್ರಿಗೇಡ್‌ನ ಮುರಳಿ ದರ್ಶನ್ ಶೈಲಿಯಲ್ಲೇ ಟಾಂಗ್ ನೀಡಿದ್ದು "ನೀವು ಎಷ್ಟೇ ನಮ್ಮ ಮೇಲೆ ಆಪಾಧನೆ ಮಾಡಿ. ನೀವು ಎಷ್ಟೇ ಸುಳ್ಳುಗಳನ್ನು ಹೇಳಿ ನಾವು ಬೇಜಾರು ಮಾಡಿಕೊಳ್ಳಲ್ಲ. ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಹೆದರಿಕೊಳ್ಳೋದೂ ಇಲ್ಲ. ತಲೆ ಎತ್ತಿಕೊಂಡು ಓಡಾಡುತ್ತೇವೆ. ಯಾಕೆ ಗೊತ್ತಾ? ಅಣ್ಣಾವ್ರು ಮತ್ತು ಅಪ್ಪು ಅವರು ಅಂತಹ ಕೆಲಸ ಮಾಡಿದ್ದಾರೆ. ಅದಕ್ಕೆ ತಲೆ ಎತ್ತಿಕೊಂಡು ಓಡಾಡುತ್ತೇವೆ. ಅಪ್ಪು ಅಭಿಮಾನಿಗಳಾಗಿ ತಲೆ ತಗ್ಗಿಸುವಂತೆ ಕೆಲಸವನ್ನು ಹಿಂದೆನೂ ಮಾಡಿಲ್ಲ. ಮುಂದೆನೂ ಮಾಡಲ್ಲ. ನಮ್ ಬಾಸು ಒಳ್ಳೆಯದು ಮಾಡು ಅಂತಾನೇ ಹೇಳಿ ಹೋಗಿರೋದು. ಅದನ್ನೇ ಮಾಡುತ್ತೇವೆ. ಉರಿಸಬೇಕು ಅಂತಿದ್ರೆ, ಒಳ್ಳೆ ಕೆಲಸ ಮಾಡಿ ಉರಿಸುತ್ತಲೇ ಇರುತ್ತೇವೆ." ಎಂದು ಕಿಡಿಕಾರಿದ್ದಾರೆ.

  English summary
  Darshan fans angry on Shiva Rajkumar for his latest statement about boss topic. Read on
  Friday, December 30, 2022, 10:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X