For Quick Alerts
  ALLOW NOTIFICATIONS  
  For Daily Alerts

  ನಂಬರ್ 1 ನಟನೆಂಬ ಅಹಂ ಬಿಡಿ ಎಂದ ರಮ್ಯಾ: ರಶ್ಮಿಕಾನೇ ಮೇಲು ಎಂದ ಡಿ ಬಾಸ್ ಫ್ಯಾನ್ಸ್!

  By ಫಿಲ್ಮಿಬೀಟ್ ಡೆಸ್ಕ್
  |

  ದರ್ಶನ್ ಅಭಿಮಾನಿಗಳ ಆಕ್ರೋಶ ಇನ್ನೂ ನಿಂತಿಲ್ಲ. ತಮ್ಮ ನೆಚ್ಚಿನ ನಟನ ಮೇಲೆ ಚಪ್ಪಲಿ ಎಸೆದವರನ್ನು ಬಂಧಿಸಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಪರ ಭರ್ಜರಿಯಾಗಿಯೇ ಬ್ಯಾಟ್ ಬೀಸುತ್ತಿದ್ದಾರೆ.

  ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಸ್ಯಾಂಡಲ್‌ವುಡ್ ತಾರೆಯರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವೇಳೆ ಮೋಹಕತಾರೆ ರಮ್ಯಾ ಒಂದು ಸುದೀರ್ಘ ಪತ್ರವನ್ನು ಬರೆದಿದ್ದರು. ಈ ಪತ್ರ ಓದಿದ ಬಳಿಕ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ತಿರುಗಿಬಿದ್ದಾರೆ.

  ಹೊಸಪೇಟೆ ಈವೆಂಟ್ ವಿಡಿಯೋ ಶೇರ್ ಮಾಡಿ ಹೊಸಪೇಟೆ ಈವೆಂಟ್ ವಿಡಿಯೋ ಶೇರ್ ಮಾಡಿ "ಥ್ಯಾಂಕ್ಯೂ" ಎಂದ ಚಾಲೆಂಜಿಂಗ್ ಸ್ಟಾರ್

  ಫ್ಯಾನ್ಸ್ ವಾರ್ ಶುರುವಾಗಿದ್ದ ಬೆನ್ನಲ್ಲೇ ರಮ್ಯಾ ನಿನ್ನೆ (ಡಿಸೆಂಬರ್ 20) ಸುದೀರ್ಘ ಪತ್ರವನ್ನು ಬರೆದಿದ್ದರು. ಸೂಪರ್‌ಸ್ಟಾರ್‌ಗಳು ಅಭಿಮಾನಿಗಳನ್ನು ಕಂಟ್ರೋಲ್ ಮಾಡಬೇಕು ಎಂದು ಹೇಳಿದ್ದರು. ಇದಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬಳಸುವ ಅವಾಚ್ಯ ಪದಗಳ ಬಗ್ಗೆ ಟ್ವಿಟರ್‌ಗೆ ರಿಪೋರ್ಟ್ ಮಾಡಿದ್ದರು. ಅಲ್ಲಿಂದ ರಮ್ಯಾ ವಿರುದ್ಧ ಡಿ ಬಾಸ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

  ರಮ್ಯಾ ಲೆಟರ್‌ನಲ್ಲಿ ಏನಿದೆ?

  ರಮ್ಯಾ ಲೆಟರ್‌ನಲ್ಲಿ ಏನಿದೆ?

  ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ. ಕೆಲವರು ಬಾಯಿಗೆ ಬಂದಂತೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದರ ವಿರುದ್ಧವಾಗಿ ರಮ್ಯಾ ಪತ್ರ ಬರೆದಿದ್ದರು. ಸೂಪರ್‌ಸ್ಟಾರ್‌ಗಳೇ ತಮ್ಮ ಅಭಿಮಾನಿಗಳನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಬೇಕು ಎಂದಿದ್ದರು. ''ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡುವ ಹಂಬಲ ಇರುವಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ 1 ಮತ್ತು ಈ ಸ್ಥಾನ ನನಗೆ ಮಾತ್ರ ಧಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು." ಎಂದು ಸೂಪರ್‌ಸ್ಟಾರ್‌ಗಳಿಗೆ ಪರೋಕ್ಷವಾಗಿ ಕರೆ ನೀಡಿದ್ದರು.

  'ಅಭಿಮಾನಿ ಬಳಗಗಳು ನಡವಳಿಕೆ ಬಹಳ ಚಿಂತಾಜನಕ'

  'ಅಭಿಮಾನಿ ಬಳಗಗಳು ನಡವಳಿಕೆ ಬಹಳ ಚಿಂತಾಜನಕ'

  ಇಷ್ಟೇ ಅಲ್ಲ ಅಭಿಮಾನಿಗಳು ಟ್ವೀಟ್ ಮಾಡುವ ಭರದಲ್ಲಿ ಅವಾಚ್ಯ ಪದಗಳನ್ನು ಬಳಸುತ್ತಾರೆ. ತಾಯಿ, ಹೆಂಡತಿ, ಮಗಳು ಎನ್ನುವ ಸಂಬಂಧಕ್ಕೆ ಮಸಿ ಬಳಿಯುತ್ತಾರೆ ಎಂದು ರಮ್ಯಾ ಪತ್ರದಲ್ಲಿ ಬರೆದಿದ್ದರು. "ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗ್ತಿದೆ'' ರಮ್ಯಾ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ರಮ್ಯಾ ಕೆಲವು ಟ್ವೀಟ್‌ಗಳ ಸ್ಕ್ರೀನ್ ಶಾಟ್‌ ಅನ್ನು ಶೇರ್ ಮಾಡಿ, ಟ್ವಿಟರ್‌ಗೆ ಟ್ಯಾಗ್ ಮಾಡಿದ್ದರು. ಅದರಲ್ಲಿ ದರ್ಶನ್ ಅಭಿಮಾನಿಗಳ ಪೋಸ್ಟ್ ಹೆಚ್ಚಿತ್ತು. ಇಲ್ಲಿಂದ ರಮ್ಯಾ ವಿರುದ್ಧ ಇರುಗಿಬಿದ್ದಿದ್ದಾರೆ.

  'ರಮ್ಯಾ ವಿರುದ್ಧ ಡಿ ಬಾಸ್ ಫ್ಯಾನ್ಸ್ ಕಿಡಿ'

  'ರಮ್ಯಾ ವಿರುದ್ಧ ಡಿ ಬಾಸ್ ಫ್ಯಾನ್ಸ್ ಕಿಡಿ'

  ರಮ್ಯಾ ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್‌ಗೆ ಟ್ಯಾಗ್ ಮಾಡುತ್ತಿದ್ದಂತೆ ಇತ್ತ ಡಿ ಬಾಸ್ ಫ್ಯಾನ್ಸ್ ಕಿಡಿಕಾರಲು ಆರಂಭಿಸಿದ್ದಾರೆ. ರಮ್ಯಾ ವಿರುದ್ಧ ತಮ್ಮ ಅಸಮಧಾನವನ್ನು ಹೊರಹಾಕುತ್ತಿದ್ದಾರೆ. ರಮ್ಯಾ ಬರೆದ ಪತ್ರದ ವಿರುದ್ಧ ತಿರುಗಿಬಿದ್ದಿದ್ದಾರೆ. ಇಲ್ಲಿವರೆಗೂ ಅಪ್ಪು ಫ್ಯಾನ್ಸ್ ವಿರುದ್ಧ ಕಿಡಿಕಾರುತ್ತಿದ್ದ ದರ್ಶನ್ ಅಭಿಮಾನಿಗಳು ಈಗ ರಮ್ಯಾ ವಿರುದ್ಧವೂ ಆಕ್ರೋಶ ಹೊರಹಾಕುತ್ತಿದ್ದಾರೆ.

  ರಮ್ಯಾಗಿಂತ ರಶ್ಮಿಕಾನೇ ಮೇಲು

  ರಮ್ಯಾಗಿಂತ ರಶ್ಮಿಕಾನೇ ಮೇಲು

  ರಮ್ಯಾ ವಿರುದ್ಧ ತಿರುಗಿಬಿದ್ದಿದ್ದಷ್ಟೇ ಅಲ್ಲ. ರಶ್ಮಿಕಾ ಮಂದಣ್ಣರನ್ನು ಎಳೆದು ತಂದಿದ್ದಾರೆ. "ಒಬ್ಬರನ್ನ ಮೀಡಿಯಾದವರು ಬ್ಯಾನ್ ಮಾಡ್ತೀವಿ ಅಂದ್ರು. ಇನ್ನೊಬ್ಬರನ್ನು ಕರ್ನಾಟಕದಿಂದಲೇ ಬ್ಯಾನ್ ಮಾಡುತ್ತೀವಿ ಅಂದ್ರು. ಯಾರ ಬೇಳೆನೂ ಬೇಯಲಿಲ್ಲ. ಇಬ್ಬರೂ ಬೆಳೆಯುತ್ತಲೇ ಇದ್ದಾರೆ. ರಮ್ಯಾಗಿಂತ ರಶ್ಮಿಕಾನೇ ಮೇಲು" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

  English summary
  Darshan Fans Angry Towards Ramya After Her No 1 star Comment, Know More.
  Wednesday, December 21, 2022, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X