For Quick Alerts
  ALLOW NOTIFICATIONS  
  For Daily Alerts

  "ಡಿ ಬಾಸ್ ಇನ್ನೊಮ್ಮೆ ಈ ತಂಡದ ಜತೆ ಚಿತ್ರ ಮಾಡಬೇಡಿ"; ಕ್ರಾಂತಿ ತಂಡದ ವಿರುದ್ಧ ಅಭಿಮಾನಿಗಳ ಬೇಸರ

  By ಫಿಲ್ಮಿಬೀಟ್ ಡೆಸ್ಕ್
  |

  ಸದ್ಯ ಕ್ರಾಂತಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹೊಂದಿರುವ ಕ್ರೇಜ್ ಅನ್ನು ಬೇರೆ ಯಾವ ಚಿತ್ರಗಳೂ ಸಹ ಹೊಂದಿಲ್ಲ. ಸ್ವತಃ ದರ್ಶನ್ ಅಭಿಮಾನಿಗಳೇ ಚಿತ್ರದ ಪ್ರಚಾರವನ್ನು ಅದ್ಧೂರಿಯಾಗಿ ಮಾಡುತ್ತಿದ್ದು, ಇದೇ ತಿಂಗಳ 26ರ ಗಣ ರಾಜ್ಯೋತ್ಸವದಂದು ಕ್ರಾಂತಿ ಚಿತ್ರ ತೆರೆ ಕಾಣಲಿದೆ.

  ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಕೆಟ್ಟ ಅಭಿಪ್ರಾಯ ವ್ಯಕ್ತವಾದರೂ, ಚಿತ್ರದ ಬಗ್ಗೆ ಯಾರೇ ಕೆಳಮಟ್ಟದಲ್ಲಿ ಮಾತನಾಡಿದರೂ ಅವರ ವಿರುದ್ಧ ಕಿಡಿಕಾರುತ್ತಾ ಚಿತ್ರದ ಪರ ಬ್ಯಾಟ್ ಬೀಸುತ್ತಾರೆ ದರ್ಶನ್ ಅಭಿಮಾನಿಗಳು. ಇನ್ನು ಕ್ರಾಂತಿ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರತಿ ಹಾಡನ್ನೂ ಸಹ ದರ್ಶನ್ ಫ್ಯಾನ್ಸ್ ಮೆಚ್ಚಿಕೊಂಡಿದ್ದರು.

  ಇಷ್ಟೆಲ್ಲಾ ಬೆಂಬಲವನ್ನು ದರ್ಶನ್ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಹಿಂದಿನಿಂದಲೂ ಕೆಲ ದರ್ಶನ್ ಅಭಿಮಾನಿಗಳೇ ಕ್ರಾಂತಿ ಚಿತ್ರತಂಡದ ಒಂದು ಕೆಲಸದ ಬಗ್ಗೆ ಕಿಡಿಕಾರುತ್ತಲೇ ಬಂದಿದ್ದಾರೆ ಹಾಗೂ ಆ ವಿಷಯದ ಬಗ್ಗೆ ಮಾತನಾಡಿ ಬೇಸತ್ತು ಹೋಗಿದ್ದಾರೆ. ಹೌದು, ಕ್ರಾಂತಿ ಚಿತ್ರದ ಪೋಸ್ಟರ್ ಕೆಟ್ಟದಾಗಿದೆ, ಈಗಿನ ಕಾಲದಲ್ಲೂ ಇಷ್ಟು ಕಳಪೆ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೀರ ಎಂದು ಆಕ್ರೋಶ ಹೊರಹಾಕಿದ್ರು ಹಾಗೂ ಪೋಸ್ಟರ್ ವಿನ್ಯಾಸಕನನ್ನು ಬದಲಿಸಿ ಎಂದು ಕಿಡಿಕಾರಿದ್ರು‌. ಇದೀಗ ಮತ್ತೆ ಇದೇ ವಿಷಯದ ಕುರಿತು ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

  ಹೊಸ ವರ್ಷದ ಪೋಸ್ಟರ್ ಬಗ್ಗೆ ಅಸಮಾಧಾನ

  ಹೊಸ ವರ್ಷದ ಪೋಸ್ಟರ್ ಬಗ್ಗೆ ಅಸಮಾಧಾನ

  ಕ್ರಾಂತಿ ಚಿತ್ರತಂಡ ಹೊಸ ವರ್ಷದ ಪ್ರಯುಕ್ತ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿದೆ. ಈ ಪೋಸ್ಟರ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಈ ಪೋಸ್ಟರ್‌ನ ಗುಣಮಟ್ಟ ಕಳಪೆ, ಅಪ್‌ಡೇಡೆಟ್ ಯುಗದಲ್ಲೂ ಈ ರೀತಿಯ ಹಳೆಯ ಪೋಸ್ಟರ್ ಬಿಟ್ಟು ಚಿತ್ರದ ಮೇಲಿನ ನಿರೀಕ್ಷೆ ಕುಂದುವಂತೆ ಮಾಡುತ್ತಿದ್ದೀರ ಎಂದು ದರ್ಶನ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕ್ರಾಂತಿ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ.

  ಕ್ರಾಂತಿ ತಂಡದ ಜೊತೆ ಮತ್ತೆ ಚಿತ್ರ ಬೇಡ

  ಕ್ರಾಂತಿ ತಂಡದ ಜೊತೆ ಮತ್ತೆ ಚಿತ್ರ ಬೇಡ

  ಸಿನಿ ರಸಿಕನೋರ್ವ ಕ್ರಾಂತಿ ಚಿತ್ರದ ಈ ಪೋಸ್ಟರ್ ಬಗ್ಗೆ ಬೇಸರ ಹೊರಹಾಕಿದ್ದು, ಈ ತಂಡದ ಬಗ್ಗೆ ದರ್ಶನ್ ಮತ್ತೆ ಚಿತ್ರ್ ಮಾಡಬಾರದು ಎಂಬುದು ಓರ್ವ ಕನ್ನಡ ಚಿತ್ರ ಪ್ರೇಮಿಯಾಗಿ ನನ್ನ ಅಭಿಪ್ರಾಯ ಎಂದಿದ್ದಾರೆ. ಚಿತ್ರದ ಪೋಸ್ಟರ್‌ನ ಗುಣಮಟ್ಟ ಚಿತ್ರ ಹೇಗಿದೆ ಎಂಬುದನ್ನು ತೋರಿಸುತ್ತಿದೆ. ಅಭಿಮಾನಿಗಳು ಇಂತಹ ಪೋಸ್ಟರ್ ಅನ್ನು ಹೇಗೆ ಒಪ್ಪಿಕೊಳ್ಳುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಅಭಿಮಾನಿಗಳು ಪೋಸ್ಟರ್ ವಿನ್ಯಾಸಗಳು ಸರಿ ಇಲ್ಲ ಎಂಬ ವಿಷಯದ ಬಗ್ಗೆ ಟ್ವಿಟರ್ ಟ್ರೆಂಡ್ ನಡೆಸಿದರೂ ಸಹ ಯಾವುದೇ ಬದಲಾವಣೆ ಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

  ಎಷ್ಟು ಹೇಳಿದ್ರೂ ಅಷ್ಟೇ ನಿಮಗೆ!

  ಎಷ್ಟು ಹೇಳಿದ್ರೂ ಅಷ್ಟೇ ನಿಮಗೆ!

  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಬಹುತೇಕ ದರ್ಶನ್ ಅಭಿಮಾನಿಗಳು ನಿಮಗೆ ಎಷ್ಟು ಹೇಳಿದ್ರೂ ಅಷ್ಟೇ ಎಂದು ಬೇಸರ ಹೊರಹಾಕಿದ್ದಾರೆ. ಕೆಲವರು ದುಡ್ಡಿನ ಕಾರಣದಿಂದ ಪೋಸ್ಟರ್ ಡಿಸೈನರ್ ಅನ್ನು ಸರಿಪಡಿಸುತ್ತಿಲ್ವಾ ಎಂದು ಪ್ರಶ್ನೆ ಹಾಕಿದ್ದಾರೆ. ಇನ್ನೂ ಕೆಲವರು ನಿಮ್ಮ ಅಧಿಕೃತ ಪೋಸ್ಟರ್‌ಗಳಿಗಿಂತ ಅಭಿಮಾನಿಗಳು ಮಾಡುವ ಫ್ಯಾನ್ ಮೇಡ್ ಪೋಸ್ಟರ್‌ಗಳೇ ಎಷ್ಟೋ ಪರವಾಗಿಲ್ಲ ಎಂದು ಟ್ವೀಟ್ ಮಾಡಿ ಚಿತ್ರದ ಹೊಸ ಪೋಸ್ಟರ್ ವಿರುದ್ಧ ಗೇಲಿ ಮಾಡಿದ್ದಾರೆ.

  English summary
  Darshan fans are angry on Kranti team for the poor quality posters
  Sunday, January 1, 2023, 22:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X