For Quick Alerts
  ALLOW NOTIFICATIONS  
  For Daily Alerts

  ಮುನಿರತ್ನ ಬೆನ್ನಿಗೆ ಬಿದ್ದ ಡಿ-ಬಾಸ್ ಫ್ಯಾನ್ಸ್: ಹೋದಲ್ಲಿ ಬಂದಲ್ಲಿ ಒಂದೇ ಪ್ರಶ್ನೆ.!

  |
  ಕುರುಕ್ಷೇತ್ರ ಸಿನಿಮಾ ರಿಲೀಸ್ ಯಾವಾಗ ಅಂತಿದ್ದಾರೆ ಮುನಿರತ್ನಗೆ ಒತ್ತಾಯಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್

  ನಿರ್ಮಾಪಕ ಮತ್ತು ರಾಜಕಾರಣಿ ಮುನಿರತ್ನ ಅವರಿಗೀಗ ದೊಡ್ಡ ತಲೆನೋವು ಎದುರಾಗಿದೆ. ಯಾಕೆಂದರೆ ಮುನಿರತ್ನ ಹೋದಲ್ಲಿ ಬಂದಲ್ಲೆಲ್ಲ ಡಿ ಬಾಸ್ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೆ ಬರುತ್ತಿದೆ. ಕಾರಣ ಬಹು ನಿರೀಕ್ಷೆಯ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಮಾಡದೆ ಮುನಿರತ್ನ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರಕ್ಕಾಗಿ ಅಭಿಮಾನಿಗಳು ವರ್ಷಗಳಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಇಂದು ರಿಲೀಸ್ ಆಗುತ್ತೆ ನಾಳೆ ರಿಲೀಸ್ ಆಗುತ್ತೆ ಅಂತ ಹೇಳುತ್ತಲೆ ಡಿ ಫ್ಯಾನ್ಸ್ ತಾಳ್ಮೆ ಪರೀಕ್ಷೆ ಮಾಡುತ್ತಿರುವ ಮುನಿರತ್ನ ಅವರ ಬೆನ್ನು ಬಿದ್ದಿದ್ದಾರೆ ಅಭಿಮಾನಿಗಳು.

  ರೈತರ ಸಾಲ ಬಗ್ಗೆ ಡಿ-ಬಾಸ್ ಮಾತು: ಇದು ಸಿಎಂಗೆ ಟಾಂಗ್?

  ಮುನಿರತ್ನ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಚುನಾವಣೆ ಮುಗಿದ ನಂತರ ಸಿನಿಮಾ ಪ್ರಚಾರ ಶುರುವಾಗಬಹುದು ಎಂದು ಅಭಿಮಾನಿಗಳ ಆಸೆಯಾಗಿತ್ತು. ಆದ್ರೀಗ ಆದ್ಯಾವ ಸೂಚನೆಗಳು ಕೂಡ ಕಾಣುತ್ತಿಲ್ಲ. ಕುರುಕ್ಷೇತ್ರ ಚಿತ್ರದ ಬಗ್ಗೆ ಮುನಿರತ್ನ ಎಲ್ಲಾ ಮಾತನಾಡುತ್ತಲೆ ಇಲ್ಲ. ಬೇಕು ಅಂತಾನೆ ಮುನಿರತ್ನ ಸಿನಿಮಾ ರಿಲೀಸ್ ಡೇಟನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಆರೋಪ ಕೂಡ ಆಗಿದೆ. ಸಿಟ್ಟಿಗೆದ್ದಿರುವ ಅಭಿಮಾನಿಗಳೀಗ ಮುನಿರತ್ನ ಹೋದಲ್ಲಿ ಬಂದಲ್ಲಿ ಕಾಡುತ್ತಿದ್ದಾರೆ. ಮುಂದೆ ಓದಿ..

  ಮುನಿರತ್ನ ಫೇಸ್ ಬುಕ್ ಪೇಜ್ ನಲ್ಲಿ 'ಕುರುಕ್ಷೇತ್ರ'

  ಮುನಿರತ್ನ ಫೇಸ್ ಬುಕ್ ಪೇಜ್ ನಲ್ಲಿ 'ಕುರುಕ್ಷೇತ್ರ'

  ಮುನಿರತ್ನ ಸದ್ಯ ರಾಜಕೀಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಭೆ, ಪ್ರಚಾರ ಅಂತ ಓಡಾಡುತ್ತಿರುವ ಮುನಿರತ್ನ ರಾಜಕೀಯ ವಿಚಾರವಾಗಿ ಫೇಸ್ ಬುಕ್ ನಲ್ಲಿ ಯಾವುದೆ ಪೋಸ್ಟ್ ಗಳನ್ನು ಹಾಕಿದ್ರು ಅದಕ್ಕೆ ಅಭಿಮಾನಿಗಳು 'ಮೊದಲು 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಮಾಡಿ ಸಾರ್' ಎನ್ನುವ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಡಿ ಬಾಸ್ ಸಿನಿಮಾ ಮೊದಲು ತೋರಿಸಿ ಆಮೇಲೆ ನಿಮ್ಮ ಕೆಲಸಗಳನ್ನು ಮಾಡಿ ಎಂದು ರೊಚ್ಚಿಗೆದ್ದಿದ್ದಾರೆ.

  ಚುನಾವಣೆ ಮುಗಿದರು ಕಾಣುತ್ತಿಲ್ಲ ರಿಲೀಸ್ ಸೂಚನೆ

  ಚುನಾವಣೆ ಮುಗಿದರು ಕಾಣುತ್ತಿಲ್ಲ ರಿಲೀಸ್ ಸೂಚನೆ

  ಈ ಮೊದಲು 'ಕುರುಕ್ಷೇತ್ರ' ರಿಲೀಸ್ ಯಾವಾಗ ಅಂದ್ರೆ ಚುನಾವಣೆ ಎಂಬ ನೆಪ ಎದುರಾಗಿತ್ತು. ರಾಜಕೀಯದಲ್ಲಿ ಬ್ಯುಸಿ ಇದ್ದ ಮುನಿರತ್ನ ಅವರಿಗೆ ಸಿನಿಮಾ ಕಡೆ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ ನಿಖಿಲ್ ಕೂಡ ಬಣ್ಣ ಹಚ್ಚಿರುವ ಕಾರಣ ನೀತಿ ಸಂಹಿತೆ ಎದುರಾಗಿದೆ. ಹಾಗಾಗಿ ಸಿನಿಮಾ ಬಿಡುಗೆಡೆಯ ಬಗ್ಗೆ ಚುನಾವಣೆಯ ನಂತರ ಹೇಳುತ್ತಾರೆ ಎಂದು ಅಭಿಮಾನಿಗಳ ಆಸೆಯಾಗಿತ್ತು. ಆದ್ರೀಗ ಚುವಾವಣೆ ಮುಗಿದು ದಿನಗಳೆ ಕಳೆದರು 'ಕುರುಕ್ಷೇತ್ರ' ರಿಲೀಸ್ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

  ಐದು ಭಾಷೆಯಲ್ಲಿ ದರ್ಶನ್ 'ಕುರುಕ್ಷೇತ್ರ': ನಾಲ್ಕು ಭಾಷೆಯ ಚಿತ್ರದ ಪೋಸ್ಟರ್ ಬಿಡುಗಡೆ

  ಸಿ ಎಂ v/s ದರ್ಶನ್ ಎಫೆಕ್ಟ್ ಆಗಬಹುದಾ

  ಸಿ ಎಂ v/s ದರ್ಶನ್ ಎಫೆಕ್ಟ್ ಆಗಬಹುದಾ

  ಕುರುಕ್ಷೇತ್ರ ಸಿನಿಮಾದಲ್ಲಿ ಸಿ ಎಂ ಕುಮಾರ ಸ್ವಾಮಿ ಮಗ ನಿಖಿಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಕುರುಕ್ಷೇತ್ರ ದರ್ಶನ್ ಅವರ 50ನೇ ಸಿನಿಮಾ. ಸದ್ಯದ ಪರಿಸ್ಥಿತಿಯಲ್ಲಿ ದರ್ಶನ್ ಮತ್ತು ಸಿ ಎಂ ನಡುವೆ ಯಾವುದು ಸರಿ ಇಲ್ಲ. ಮಂಡ್ಯ ಪ್ರಚಾರದ ಅಖಾಡದಿಂದ ಶುರುವಾದ ಮಾತಿನ ವಾರ್ ಇಂದಿಗೂ ಮುಂದುವರೆದಿದೆ. ಇದರ ನಡುವೆ ಮುನಿರತ್ನ ಸಿಎಂ ಕುಮಾರಸ್ವಾಮಿಗೆ ತೀರ ಆಪ್ತರು. ಈ ಎಲ್ಲಾ ಕಾರಣಗಳು ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲು ತಡವಾಗುತ್ತಿದೆಯ ಎನ್ನು ಅನುಮಾನಗಳು ಕಾಡುತ್ತಿದೆ.

  ದರ್ಶನ್ ಮನೆಗೆ ಮತ್ತೊಂದು ಕಾಸ್ಟ್ಲಿ ಕಾರ್: ಇನ್ನೊಬ್ಬ ನಟನ ಬಳಿಯೂ ಇದೆ ಈ ಕಾರು.!

  ನಾಲ್ಕು ಭಾಷೆಯ ಪೋಸ್ಟರ್ಸ್ ರಿಲೀಸ್

  ನಾಲ್ಕು ಭಾಷೆಯ ಪೋಸ್ಟರ್ಸ್ ರಿಲೀಸ್

  ಇತ್ತೀಚಿಗಷ್ಟೆ ನಾಲ್ಕು ಭಾಷೆಯ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾ ಸಿನಿಮಾ ಕೆಲಸಗಳು ನಡೆಯುತ್ತಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು. 2ಡಿ ಮತ್ತು 3ಡಿ ಎರಡರಲ್ಲು ಸಿನಿಮಾ ತಯಾರಾಗಿದೆ. ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಚಿತ್ರ ತೆರೆಗೆ ಬರುತ್ತಿದೆ. ಎಲ್ಲಾ ಕೆಲಸಗಳನ್ನು ಮುಗಿಸಿರುವ ಕುರುಕ್ಷೇತ್ರ ಯಾವಾಗ ತೆರೆಗೆ ಬರುತ್ತೆ ಎನ್ನುವುದೇ ದೊಡ್ಡ ಪ್ರಶ್ನೆ ಆಗಿದೆ.

  English summary
  Kannada actor Darshan starrer most expected 'Kurukshetra' movie release is delayed. Darshan fans are asking to Munirathna about 'Kurukshetra' release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X