For Quick Alerts
  ALLOW NOTIFICATIONS  
  For Daily Alerts

  ಸಂತೋಷ್ ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳ ಗದ್ದಲ-ಗಲಾಟೆ.!

  By Harshitha
  |

  ಚೂರು ಮಿಸ್ ಆಗಿದಿದ್ರೆ, ಒಬ್ಬರ ತಲೆ ಮೇಲೆ ಗಾಜಿನ ಬಾಟಲಿ ಬೀಳ್ತಿತ್ತು. ಪ್ರೊಜೆಕ್ಟರ್ ರೂಮ್ ಒಳಗೆ ಚಪ್ಪಲಿಗಳ ಸುರಿಮಳೆ ಆಗುತ್ತಿತ್ತು. ಎಚ್ಚರ ತಪ್ಪಿದ್ರೆ, ಸಂತೋಷ್ ಚಿತ್ರಮಂದಿರಕ್ಕೆ ಇವತ್ತು ಒಂದು ಗತಿ ಆಗ್ತಿತ್ತು.! ಯಾಕೆ ಅಂತ ಡೀಟೇಲ್ ಆಗಿ ಹೇಳ್ತೀವಿ ಓದಿ....

  ಆಗಷ್ಟೇ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರದ ಇಂಟರ್ ವೆಲ್ ಮುಗಿದಿತ್ತು. ಬ್ರೇಕ್ ನ ನಂತರ ಕಾಮಿಡಿ ಸೀನ್ ಪ್ರದರ್ಶನವಾಗ್ತಿತ್ತು. ಅಷ್ಟರಲ್ಲಿ, ಪ್ರೊಜೆಕ್ಟರ್ ಕೈ ಕೊಡ್ತು. ಬೆಳ್ಳಿಪರದೆ ಮಂಕಾಯ್ತು. ಸ್ಕ್ರೀನ್ ಡಲ್ ಆಯ್ತು ಎಂಬ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ರೊಚ್ಚಿಗೆದ್ರು.

  ಹೇಳಿ ಕೇಳಿ, 'ಜಗ್ಗುದಾದಾ' ಚಿತ್ರದ ಮೇನ್ ಥಿಯೇಟರ್ ಈ ಸಂತೋಷ್. ದರ್ಶನ್ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲು ಎಲ್ಲೆಲ್ಲಿಂದಲೋ ಬಂದಿದ್ದ ಅಭಿಮಾನಿಗಳಿಗೆ ಹೀಗೆ ತಾಂತ್ರಿಕ ಕಿರಿಕಿರಿ ಆದ್ರೆ, ಸುಮ್ನೆ ಬಿಡ್ತಾರಾ? ಖಂಡಿತ ಇಲ್ಲ. ದರ್ಶನ್ ಅಭಿಮಾನಿಗಳು ಕೂಗಾಡಲು ಆರಂಭಿಸಿದ್ರು. ಪ್ರೊಜೆಕ್ಟರ್ ಕಿಂಡಿಗೆ ಗಾಜಿನ ಬಾಟಲಿ ಎಸೆಯಲು ಶುರು ಮಾಡಿದರು. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

  ಅಭಿಮಾನಿಗಳ ಆಕ್ರೋಶ ಕಂಡು ಧಂಗಾದ ಸಂತೋಷ್ ಚಿತ್ರಮಂದಿರದ ತಂತ್ರಜ್ಞರು ಕೂಡಲೆ ಎಚ್ಚೆತ್ತರು. ಆದ ಅಡಚಣೆಯನ್ನ ಸರಿಪಡಿಸಿದರು. ನಂತರ ಕೂಲ್ ಆದ ದರ್ಶನ್ ಫ್ಯಾನ್ಸ್, ಆರಾಮಾಗಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ರು. ಘಟನೆಯ ವಿಡಿಯೋ ಇಲ್ಲಿದೆ ನೋಡಿ....

  English summary
  Kannada Actor Darshan starrer Kannada Movie 'Jaggu Dada' has hit the screens today (June 10th) with much fanfare. Since, Projector and Technical problem witnessed in Santhosh Theater, Bengaluru, Darshan fans created havoc.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X