»   » ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿ

ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿ

Posted By:
Subscribe to Filmibeat Kannada
ರಾಧಿಕಾ ಪಂಡಿತ್ ಬಳಿ ದರ್ಶನ್ ಫ್ಯಾನ್ಸ್ ಮಾಡಿದ ಮನವಿ ಏನು? | FIlmibeat Kannada

ಕನ್ನಡ ಸಿನಿಮಾರಂಗದಲ್ಲಿ ದಶಕಗಳನ್ನ ಯಶಸ್ವಿಯಾಗಿ ಪೂರೈಸಿ, ಅದ್ಬುತ ಕಲಾವಿದೆಯಾಗಿ ಗುರುತಿಸಿಕೊಂಡ ನಟಿ ರಾಧಿಕಾ ಪಂಡಿತ್. ಯಾವುದೇ ಪಾತ್ರವಾಗಲಿ ಅದಕ್ಕೆ ದಕ್ಕಬೇಕಾಗುವ ನ್ಯಾಯ ಸಲ್ಲಿಸುವಲ್ಲಿ ರಾಧಿಕಾ ಎಂದಿಗೂ ಮೋಸ ಮಾಡುವುದಿಲ್ಲ ಎನ್ನುವದನ್ನ ಇಡೀ ಕನ್ನಡ ಸಿನಿಮಾರಂಗದ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.

ಹತ್ತು ವರ್ಷದಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಸ್ಯಾಂಡಲ್ ವುಡ್ ನ ಸಿಂಡ್ರೆಲಾಗೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಪುಟ್ಟದೊಂದು ಮನವಿ ಹಾಗೂ ಸಲಹೆಯನ್ನು ನೀಡಿದ್ದಾರೆ. ಇತ್ತೀಚಿಗಷ್ಟೆ ನಟಿ ರಾಧಿಕಾ ಪಂಡಿತ್ ಸನ್ ಗ್ಲಾಸ್ ಹಾಕಿಕೊಂಡು ಫೋಟೋವನ್ನ ಅಪ್ಲೋಡ್ ಮಾಡಿದ್ದರು. ಅದನ್ನ ನೋಡಿ ಸಾಕಷ್ಟು ಅಭಿಮಾನಿಗಳು ಖುಷಿಯನ್ನು ವ್ಯಕ್ತ ಪಡಿಸಿದ್ದರು.

Darshan fans wants Radhika Pandit to share screen space with Darshan

ದರ್ಶನ್ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಸ್ಟಾರ್ ನಟಿ.!

ಅದೇ ಪೋಟೋ ಕಮೆಂಟ್ ನಲ್ಲಿ ದಚ್ಚು ಫ್ಯಾನ್ಸ್ ರಾಧಿಕಾ ಅವರಿಗೆ ಡಿ ಬಾಸ್ ಜೊತೆ ಸಿನಿಮಾ ಮಾಡಿ ಎಂದು ಮನವಿ ಮಾಡಿದ್ದಾರೆ. ನಾಯಕಿ ಆಗಿ ಆಗದಿದ್ದರೂ ತಂಗಿಯಾಗಿ ಅಭಿನಯಿಸಿ ನಿಮ್ಮಬ್ಬರದ್ದು ಒಳ್ಳೆ ಜೋಡಿ ಆಗುತ್ತದೆ ಎಂದು ತಿಳಿಸಿದ್ದಾರೆ.

ಅದಕ್ಕೆ ಮಿಕ್ಕ ಅಭಿಮಾನಿಗಳು ಹೌದು ಯಾಕೆ? ನೀವು ದರ್ಶನ್ ಅವರ ಜೊತೆ ಅಭಿನಯಿಸಬಾರದು ಎಂದು ಪ್ರಶ್ನೆ ಮಾಡಿದ್ದಾರೆ. ಹೌದು ರಾಧಿಕಾ ಪಂಡಿತ್ ಹಾಗೂ ದರ್ಶನ್ ಇಬ್ಬರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಕಲಾವಿದರು. ಇಲ್ಲಿಯ ವರೆಗೂ ಯಾವುದೇ ನಿರ್ದೇಶಕರು ಅವರಿಬ್ಬರನ್ನ ಒಂದೇ ಸಿನಿಮಾದಲ್ಲಿ ನೋಡುವಂತ ಅವಕಾಶ ಪ್ರೇಕ್ಷಕರಿಗೆ ಮಾಡಿಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಹೊಂದಿಕೆ ಆಗುವಂತ ಕಥೆ ಸಿಕ್ಕಲ್ಲಿ ಇಂಥದೊಂದು ಪ್ರಯತ್ನ ಆಗಲಿ ಎನ್ನುವುದು ಅಭಿಮಾನಿಗಳ ಆಶಯ.

ಯಶ್ ಮನೆಯಲ್ಲಿ ಜನವರಿ ತಿಂಗಳು ಸಂಭ್ರಮವೋ ಸಂಭ್ರಮ

English summary
Kannada actor Darshan fans have appealed Kannada Actress Radhika Pandit to act with Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X