twitter
    For Quick Alerts
    ALLOW NOTIFICATIONS  
    For Daily Alerts

    'ಕೆಸಿಸಿ'ಗೆ ಬರದಿದ್ದರೂ ಸ್ಟೇಡಿಯಂ ತುಂಬ 'ಡಿ ಬಾಸ್' ಜೈಕಾರ

    By Pavithra
    |

    'ಕೆಸಿಸಿ' ಸೀಸನ್2 ಗೆ ನಿನ್ನೆ ಅದ್ದೂರಿ ತೆರೆ ಎಳೆಯಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ತಂಡ ಫೈನಲ್ ಹಂತ ತಲುಪಿ 'ಕೆಸಿಸಿ' ಸೀಸನ್2 ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 'ಕೆಸಿಸಿ' ಪಂದ್ಯದಲ್ಲಿ ಇನ್ನು ಸಾಕಷ್ಟು ಕನ್ನಡ ಸಿನಿಮಾ ಕಲಾವಿದರು ಭಾಗಿ ಆಗಿಲ್ಲ ಎಂದು ಸುದ್ದಿ ಆಗಿತ್ತು.

    ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ಯಾಕೆ ಬಂದಿಲ್ಲ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವಾಗಿ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದು "ನಾವು ಎಲ್ಲರನ್ನೂ ಆಹ್ವಾನ ಮಾಡಿದ್ದೇವೆ. ಯಾರಿಗೂ ಇಲ್ಲಿ ಗೇಟ್ ಹಾಕಿಲ್ಲ. ನೀವು ಅವರನ್ನೇ ಕೇಳಬೇಕು ಎಂದಿದ್ದರು.

    ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್

    ದರ್ಶನ್ ಬಂದಿಲ್ಲ ಅಂತ ಡಿ ಬಾಸ್ ಅಭಿಮಾನಿಗಳು ಕನ್ನಡ ಸಿನಿಮಾರಂಗ ಹಾಗೂ ಕಲಾವಿದರನ್ನು ಬೆಂಬಲಿಸೋದನ್ನು ಬಿಟ್ಟಿಲ್ಲ. ನಿನ್ನೆ ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಸ್ಟೇಡಿಯಂ ಗೆ ಬಂದು ಒಂದೊಳ್ಳೆ ಕೆಲಸಕ್ಕಾಗಿ ಆಡುತ್ತಿರುವ ಆಟಕ್ಕೆ ಬೆಂಬಲ ನೀಡಿದ್ರು. ಅದಷ್ಟೇ ಅಲ್ಲದೆ ಕೆಲ ಸಮಯ ಸ್ಟೇಡಿಯಂ ತುಂಬೆಲ್ಲಾ ಡಿ ಬಾಸ್ ಜಪ ಮಾಡಿದ್ರು. ಮುಂದೆ ಓದಿ

    ಸ್ಟೇಡಿಯಂ ತುಂಬ ಡಿ ಬಾಸ್ ಜಪ

    ಸ್ಟೇಡಿಯಂ ತುಂಬ ಡಿ ಬಾಸ್ ಜಪ

    ಎರಡು ದಿನಗಳು ನಡೆದ 'ಕೆಸಿಸಿ' ಸೀಸನ್ 2 ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿ ಆಗದೇ ಇದ್ದರೂ ಕೂಡ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

    ದರ್ಶನ್ ಫೋಟೋ ಹಿಡಿದು ಜೈಕಾರ

    ದರ್ಶನ್ ಫೋಟೋ ಹಿಡಿದು ಜೈಕಾರ

    ಚಾಲೆಂಜಿಂಗ್ ಸ್ಟಾರ್ ಆಟ ಆಡುತ್ತಿಲ್ಲ ಎಂದು ತಿಳಿದಿದ್ದರೂ ಕೂಡ ಅಭಿಮಾನಿಗಳು ತನ್ನ ನೆಚ್ಚಿನ ನಟನ ಫೋಟೋ ಮತ್ತು ನೇಮ್ ಪ್ಲೇಟ್ ಗಳನ್ನು ಹಿಡಿದು ಜೈಕಾರ ಹಾಕಿದ್ರು. ಬಣ್ಣಗಳ ಮೂಲಕ ಡಿ ಬಾಸ್ ಹೆಸರುಗಳನ್ನು ಬರೆಸಿಕೊಂಡು ಪ್ರಚಾರ ಮಾಡಿದ್ರು.

    ದಾಸನಿಗಾಗಿ ಕಾದಿದ್ದ ಅಭಿಮಾನಿಗಳು

    ದಾಸನಿಗಾಗಿ ಕಾದಿದ್ದ ಅಭಿಮಾನಿಗಳು

    'ಕೆಸಿಸಿ' ಪ್ರೆಸ್ ಮೀಟ್ ನಲ್ಲಿ ಡಿ ಬಾಸ್ ಕಾಣಿಸಿಕೊಳ್ಳದಿದ್ದರೂ, ಪಂದ್ಯದ ನಡೆಯುವ ಸಮಯದಲ್ಲಾದರೂ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ಳಬಹುದೆಂದು ಅಭಿಮಾನಿಗಳು ಕಾತುರರಾಗಿದ್ದರು. ಅದರ ಜೊತೆಯಲ್ಲಿ ಸ್ಟಾರ್ ಗಳು ಪ್ರವೇಶಿಸುವ ದಾರಿಯಲ್ಲಿ ಸಾಕಷ್ಟು ಅಭಿಮಾನಿಗಳು ಕಾದು ಕುಳಿತಿದ್ದರು.

    ಮುಂದಿನ ಸೀಸನ್ ನಲ್ಲಿ ಬರ್ತಾರಾ ಡಿ ಬಾಸ್?

    ಮುಂದಿನ ಸೀಸನ್ ನಲ್ಲಿ ಬರ್ತಾರಾ ಡಿ ಬಾಸ್?

    'ಕೆಸಿಸಿ' ಅಂತ ತಂಡ ಕಟ್ಟಿಕೊಂಡು ಕ್ರಿಕೆಟ್ ಆಡುತ್ತಿರುವ ಉದ್ದೇಶ ಕನ್ನಡ ಸಿನಿಮಾರಂಗದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎನ್ನುವುದು. ಹಾಗಾಗಿ ಮುಂದಿನ ಸೀಸನ್ ನಲ್ಲಾದರೂ ದರ್ಶನ್, ದುನಿಯಾ ವಿಜಯ್ ಸೇರಿದಂತೆ ಇನ್ನು ಉಳಿದುಕೊಂಡಿರುವ ಅನೇಕ ಸ್ಟಾರ್ ಗಳು ಸೇರಿಕೊಳ್ಳಲಿ ಎನ್ನುವುದು ನಮ್ಮ ಹಾಗೂ ಅಭಿಮಾನಿಗಳ ಆಶಯ.

    English summary
    Kannada actor Darshan fans yesterday came to see the KCC match in large numbers. fans took Darshan photos and surrendered at the stadium.
    Monday, September 10, 2018, 12:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X