»   » ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ

ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ

Posted By:
Subscribe to Filmibeat Kannada

ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡದ ಹಲವು ತಾರೆಯರು ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ರಾತ್ರಿ-ಹಗಲು ಚಿತ್ರಕ್ಕಾಗಿ ಕಷ್ಟಪಡುತ್ತಿದ್ದಾರೆ.

ಬೆಳಿಗ್ಗೆಯಲ್ಲ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುವ 'ಕುರುಕ್ಷೇತ್ರ' ಚಿತ್ರದ ಕಲಾವಿದರು, ಸಂಜೆಯಾಗುತ್ತಿದ್ದಂತೆ ಸ್ಥಳೀಯ ಸ್ಟಾರ್ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರಂತೆ. ಈ ಮಧ್ಯೆ ಹೈದರಾಬಾದ್ ಸ್ಟಾರ್ ಹೋಟೆಲ್ ಗಳ ಮೇಲೆ ಡಿ ಬಾಸ್ ಮುನಿಸಿಕೊಂಡಿದ್ದಾರೆ.

ಕೊಚ್ಚಿಕೊಳ್ಳುವ ಪರಭಾಷಿಗರಿಗೆ ಚಾಲೆಂಜಿಂಗ್ ಸ್ಟಾರ್ ದಿಟ್ಟ ಉತ್ತರ

ಹೈದರಾಬಾದಿನ ಸ್ಟಾರ್ ಹೋಟೆಲ್ ನ ಸಿಬ್ಬಂದಿಯವರ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಗಳ ಕೂಡ ಮಾಡಿದ್ದಾರೆ. ಈ ವಿಷ್ಯವನ್ನ ಬೇರೆ ಯಾರೂ ಹೇಳಿಲ್ಲ, ಖುದ್ದು ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ದರ್ಶನ್ ಅವರು ಹೋಟೆಲ್ ಅವರ ಜೊತೆ ಜಗಳ ಮಾಡಿರುವುದು ಯಾಕೆ ಎಂದು ಗೊತ್ತಾದ್ರೆ, ನೀವೆಲ್ಲಾ ಹೆಮ್ಮೆ ಪಡ್ತೀರಾ? ಮುಂದೆ ಓದಿ....

ರಾಮೋಜಿ ಫಿಲ್ಮ್ಸಿಟಿ ಜೈಲು ಇದ್ದಂಗೆ

ರಾಮೋಜಿ ಫಿಲ್ಮ್ಸಿಟಿ ನಂಗೆ ಒಂಥರಾ ಜೈಲು ಇದ್ದಂಗೆ. ಜೈಲ್ ಬಟ್ಟೆ ಒಂದಿಲ್ಲ ಅಷ್ಟೇ. ಎಷ್ಟೋ ಸಲ ಜಗಳ ಆಡಿದ್ದು ಉಂಟು. ಏಕೆಂದರೆ, ವರ್ಕೌಟ್ ಮಾಡು, ಶೂಟಿಂಗ್ ಮಾಡು, ರೂಮ್‌ಗೆ ಹೋಗು ... ಇದಿಷ್ಟೇ ಕೆಲಸ ಆಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

50ರ ನಂತರ ಬದಲಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಹೋಟೆಲ್‌ ನಲ್ಲಿ ಕನ್ನಡ ಇಲ್ಲ

ಸ್ಟಾರ್‌ ಹೋಟೆಲ್‌ ರೂಮ್‌ಗೆ ಹೋದರೆ ಅಲ್ಲಿ ಕನ್ನಡದ ಯಾವ ಚಾನೆಲ್‌ಗ‌ಳೂ ಬರುತ್ತಿರಲಿಲ್ಲ. ಬರೀ ತೆಲುಗು, ತಮಿಳು, ಹಿಂದಿ ಇತರೆ ಭಾಷೆ ಬರುತ್ತಿತ್ತು. ಕನ್ನಡ ಚಾನೆಲ್‌ ಬೇಕು ಅಂತ ಜಗಳ ಮಾಡಿದೆ. ಕನ್ನಡ ಚಾನೆಲ್‌ ಬರಲ್ಲ, ಅಂತ ಹೇಳುವ ಮೂಲಕ ತಾಳ್ಮೆ ಕೆಡಿಸಿದರು. ನಮ್ಮೂರಿಗೆ ಬನ್ನಿ, ನಿಮಗೆ ಯಾವ ಭಾಷೆಯ ಚಾನೆಲ್‌ ಬೇಕು ಸಿಗುತ್ತೆ, ಇಲ್ಲೇಕೆ ಕನ್ನಡ ಚಾನೆಲ್‌ ಸಿಗೋದಿಲ್ಲ ಅಂತ ಗಲಾಟೆ ಮಾಡಿ, ಹಠ ಮಾಡಿದ್ದರಿಂದ, ಕೊನೆಗೆ ಅವರೇ ಕನ್ನಡ ಚಾನೆಲ್‌ ಹಾಕಿಸಿಕೊಟ್ಟರು ಎಂದು ದರ್ಶನ್ ಹೇಳಿದ್ದಾರೆ

ದರ್ಶನ್ ಕನ್ನಡ ಪ್ರೇಮ

ನಾಡಿನಿಂದ ಹೊರಗೆ ಹೋಗಿ ಶೂಟಿಂಗ್ ಮಾಡುತ್ತಿದ್ದರು, ಅಲ್ಲಿ ಕನ್ನಡ ಚಾನಲ್ ಗಾಗಿ ಜಗಳ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇದನ್ನ ಕರ್ನಾಟಕ ಅಭಿಮಾನಿಗಳು ಸ್ವಾಗತಿಸುತ್ತಾರೆ. ದರ್ಶನ್ ಅವರ ಈ ನಡೆಯನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಅಪರೂಪದ ಅಭಿಮಾನಿಯನ್ನ ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್

ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆ

ಕರ್ನಾಟಕದಲ್ಲಿ ಪರಭಾಷೆ ಚಿತ್ರಗಳ ಅಬ್ಬರ, ಪ್ರಚಾರ ಜೋರಾಗಿದೆ. ಇದಕ್ಕೆ ದರ್ಶನ್ ತಮ್ಮದೇ ಆದ ಸ್ಟೈಲ್ ನಲ್ಲಿ ಉತ್ತರಿಸಿದ್ದರು. ಅವರಿಗೆ ಅವರ ಇಂಡಸ್ಟ್ರಿ ಹೇಗೋ, ನಮಗೂ ಇಮ್ಮ ಇಂಡಸ್ಟ್ರಿ ಹಾಗೆ. ನಮ್ಮ ಚಿತ್ರಗಳು ನಮಗೆ ದೊಡ್ಡದು. ನಾವ್ಯಾಕೆ ಅವರಿಗೆ ಹೋಲಿಸಿಕೊಳ್ಳಬೇಕು. ನಮ್ಮಲ್ಲಿ ಎಲ್ಲ ರೀತಿಯ ಸಿನಿಮಾಗಳನ್ನ ಮಾಡ್ತೇವೆ ಎಂದು ದಾಸ ಸಂದರ್ಶನದಲ್ಲಿ ಹೇಳಿದ್ದರು.

English summary
Challenging star Darshan has fights with Hyderabad star hotel Because of Kannada channels were not coming up at the hotel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X