For Quick Alerts
  ALLOW NOTIFICATIONS  
  For Daily Alerts

  ಜ್ಯೂನಿಯರ್ ಆರ್ಟಿಸ್ಟ್ ಮೇಲಿನ ಹಲ್ಲೆ ಆರೋಪಕ್ಕೆ ದರ್ಶನ್ ಕೊಟ್ಟ ಸ್ಪಷ್ಟನೆ ಏನು.?

  By Harshitha
  |
  ಹೊಸ ವಿವಾದದಲ್ಲಿ ದರ್ಶನ್..! | Filmibeta Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಜ್ಯೂನಿಯರ್ ಆರ್ಟಿಸ್ಟ್ ಮೇಲೆ ಹಲ್ಲೆ ಮಾಡಿರುವ ಆರೋಪ 'ದಾಸ' ದರ್ಶನ್ ವಿರುದ್ಧ ಕೇಳಿಬಂದಿದೆ. 'ಯಜಮಾನ' ಶೂಟಿಂಗ್ ಸೆಟ್ ನಲ್ಲಿ ದರ್ಶನ್ ಉಗ್ರ ರೂಪ ತಾಳಿರುವ ಬಗ್ಗೆ ಇಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

  ಅಸಲಿಗೆ, ಕಳೆದ ಎರಡ್ಮೂರು ದಿನಗಳಿಂದ ತಾವರೆಕೆರೆ ಬಳಿಯ ಸ್ಟುಡಿಯೋ ಒಂದರಲ್ಲಿ 'ಯಜಮಾನ' ಚಿತ್ರದ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ಹಾಡಿನ ಚಿತ್ರೀಕರಣದಲ್ಲಿ ನೂರಾರು ಸಹ ಕಲಾವಿದರು ಪಾಲ್ಗೊಂಡಿದ್ದರು. ಯಾರೋ ಒಬ್ಬರು ಸಾಂಗ್ ಶೂಟಿಂಗ್ ನ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರಂತೆ. ಇದನ್ನ ಗಮನಿಸಿದ ಚಿತ್ರತಂಡ ಆತನಿಗೆ ಎಚ್ಚರಿಕೆ ಕೊಟ್ಟಿದೆ.

  ಸಾಲದಕ್ಕೆ, ಸಹ ಕಲಾವಿದರನ್ನು ಶೂಟಿಂಗ್ ಗೆ ಕರ್ಕೊಂಡು ಬಂದಿದ್ದ ಶಿವಶಂಕರ್ ಎಂಬುವರನ್ನ ಕರೆದು ಕಪಾಳಕ್ಕೆ ಹೊಡೆದರಂತೆ ದರ್ಶನ್. ಜೊತೆಗೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದರು ಎಂದು ಶಿವಶಂಕರ್ ಆರೋಪಿಸಿದ್ದಾರೆ.

  ಈ ಆರೋಪದ ಬಗ್ಗೆ ನಟ ದರ್ಶನ್ ಮಾಧ್ಯಮಕ್ಕೆ ನೀಡಿದ ಸ್ಪಷ್ಟನೆ ಇದು... ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ನಿರ್ಮಾಪಕರಿಗೆ ನಷ್ಟ ಆಗಲ್ವಾ.?

  ನಿರ್ಮಾಪಕರಿಗೆ ನಷ್ಟ ಆಗಲ್ವಾ.?

  ''ಸಿನಿಮಾ ಮೇಲೆ ಒಬ್ಬ ನಿರ್ಮಾಪಕ ಮೂವತ್ತು ಕೋಟಿ ಬಂಡವಾಳ ಹಾಕುತ್ತಾರೆ. ಸಹ ಕಲಾವಿದರಿಗೆ ಪ್ರತಿ ದಿನ ಪೇಮೆಂಟ್ ಕೊಡ್ತಾರೆ. ಬೆಳಗ್ಗೆ, ಮಧ್ಯಾಹ್ನ ಊಟ ಕೊಡ್ತಾರೆ. ಅವರಿಗೆ ಪಿಕಪ್-ಡ್ರಾಪ್ ಕೂಡ ಇದೆ. ಹೀಗಿದ್ದರೂ, ಅವರು ಮೊಬೈಲ್ ನಲ್ಲಿ ಚಿತ್ರೀಕರಣವನ್ನ ಸೆರೆ ಹಿಡಿಯಬಹುದೇ.?'' ಎನ್ನುತ್ತಾರೆ ನಟ ದರ್ಶನ್

  ''ದರ್ಶನ್ ಕೈ ಮಾಡಿಲ್ಲ, ನಾನು ಎದುರಿಗೇ ಕೂತಿದ್ದೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.!''ದರ್ಶನ್ ಕೈ ಮಾಡಿಲ್ಲ, ನಾನು ಎದುರಿಗೇ ಕೂತಿದ್ದೆ'' ಅಂತಾರೆ ನಿರ್ಮಾಪಕಿ ಶೈಲಜಾ ನಾಗ್.!

  ಕೇಳುವುದೇ ತಪ್ಪಾ.?

  ಕೇಳುವುದೇ ತಪ್ಪಾ.?

  ''ಇದೇ ಶೂಟಿಂಗ್ ನ ನಾವು ಪಬ್ಲಿಕ್ ಪ್ಲೇಸ್ ನಲ್ಲಿ ಮಾಡಿದ್ದು, ಅದನ್ನ ಜನ ಶೂಟ್ ಮಾಡಿದ್ರೆ, ಅದನ್ನ ಕೇಳುವ ಅಧಿಕಾರ ನಮಗೆ ಇರ್ತಿರ್ಲಿಲ್ಲ. ಯಾಕಂದ್ರೆ, ನಾವು ಪಬ್ಲಿಕ್ ಪ್ಲೇಸ್ ನಲ್ಲಿದ್ದೇವೆ. ಆದ್ರೆ, ನಾವು ಸೆಟ್ ನಲ್ಲಿ ಶೂಟ್ ಮಾಡ್ತಿರೋದನ್ನ, ಅವರು ರೆಕಾರ್ಡ್ ಮಾಡಿ ಕೇವಲ ಲೈಕ್ಸ್-ಕಾಮೆಂಟ್ಸ್ ಗೋಸ್ಕರ ಫೇಸ್ ಬುಕ್ ನಲ್ಲಿ ಹಾಕೊಂಡ್ರೆ, ಸಿನಿಮಾ ಏನಾಗುತ್ತೆ.? ಇದನ್ನೆಲ್ಲ ಕೇಳುವುದೇ ತಪ್ಪಾ.?'' ಎಂದು ಪ್ರಶ್ನಿಸುತ್ತಾರೆ ನಟ ದರ್ಶನ್

  ''ದರ್ಶನ್ ನನ್ನ ಕಪಾಳಕ್ಕೆ ಹೊಡೆದ್ರು'' - ಸಹ ಕಲಾವಿದ ಶಿವಶಂಕರ್ ಆರೋಪ.!''ದರ್ಶನ್ ನನ್ನ ಕಪಾಳಕ್ಕೆ ಹೊಡೆದ್ರು'' - ಸಹ ಕಲಾವಿದ ಶಿವಶಂಕರ್ ಆರೋಪ.!

  ದರ್ಶನ್ ನನಗೆ ಹೊಡೆದ್ರು ಅಂತಾರೆ ಶಿವಶಂಕರ್

  ದರ್ಶನ್ ನನಗೆ ಹೊಡೆದ್ರು ಅಂತಾರೆ ಶಿವಶಂಕರ್

  ''ದರ್ಶನ್ ಸರ್ ಏಕಾಏಕಿ ನನಗೆ ಹೊಡೆದು, ನನ್ನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಫೋಟೋ ತೆಗೆದವರು ಯಾರು.? ಅವರನ್ನ ಹೊರಗೆ ಕಳುಹಿಸಿ ಅಂತ ದರ್ಶನ್ ಸರ್ ನನಗೆ ಹೇಳಬಹುದಿತ್ತು. ಆದ್ರೆ, ಏನ್ನನ್ನೂ ವಿಚಾರಿಸದೆ ನನ್ನ ಮೇಲೆ ಕೈ ಮಾಡಿದ್ದಾರೆ'' ಎಂದು ಆರೋಪಿಸುತ್ತಾರೆ ಶಿವಶಂಕರ್.

  ಸಹ ನಟನ ಮೇಲೆ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ.? ಬಿ ಸುರೇಶ್ ಏನಂದ್ರು.?ಸಹ ನಟನ ಮೇಲೆ ದರ್ಶನ್ ಹಲ್ಲೆ ಮಾಡಿದ್ದು ನಿಜಾನಾ.? ಬಿ ಸುರೇಶ್ ಏನಂದ್ರು.?

  ನಿರ್ಮಾಪಕಿ ಶೈಲಜಾ ನಾಗ್ ಹೇಳುವುದೇನು.?

  ನಿರ್ಮಾಪಕಿ ಶೈಲಜಾ ನಾಗ್ ಹೇಳುವುದೇನು.?

  ''ದರ್ಶನ್ ಹಾಗೆಲ್ಲ ಖಂಡಿತ ಮಾಡಿಲ್ಲ. ದರ್ಶನ್ ಹೊಡೆದಿಲ್ಲ. ''ಮೊಬೈಲ್ ನ ಇಳಿಸು.. ಎರಡು ಬಾರಿ ಈಗಾಗಲೇ ಹೇಳಿದ್ದೇವೆ'' ಅಂತ ಹೇಳಿದ್ರು ಅಷ್ಟೇ. ಅವರ ಮೇಲೆ ದರ್ಶನ್ ಕೈ ಮಾಡಿಲ್ಲ. ನಾನು ನಿರ್ಮಾಪಕಿ ಆಗಿ ಎದುರಿಗೇ ಕೂತಿದ್ದೆ'' ಅಂತ ಹೇಳ್ತಾರೆ 'ಯಜಮಾನ' ನಿರ್ಮಾಪಕಿ ಶೈಲಜಾ ನಾಗ್.

  English summary
  Challenging Star Darshan gives explanation on Yajamana Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X