»   » ದರ್ಶನ್ ಕಾಲಿಗೆ ಪೆಟ್ಟು: ತುಂಬ ಹೊತ್ತು ನಿಲ್ಲಲು 'ದಾಸ'ನಿಗೆ ಕಷ್ಟ

ದರ್ಶನ್ ಕಾಲಿಗೆ ಪೆಟ್ಟು: ತುಂಬ ಹೊತ್ತು ನಿಲ್ಲಲು 'ದಾಸ'ನಿಗೆ ಕಷ್ಟ

Posted By:
Subscribe to Filmibeat Kannada

2016ನೇ ಸಾಲಿನಲ್ಲಿ ನಮ್ಮ ಓದುಗರೇ ಆಯ್ಕೆ ಮಾಡಿದ 'ಫಿಲ್ಮಿಬೀಟ್ ಕನ್ನಡ' 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಕೊಡಲು ನಿಮ್ಮ 'ಫಿಲ್ಮಿಬೀಟ್ ಕನ್ನಡ' ತಂಡ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಆಕಾಶ್ ಸ್ಟುಡಿಯೋಗೆ ನಿನ್ನೆ (ಬುಧವಾರ) ಭೇಟಿ ನೀಡಿತ್ತು.

'ತಾರಕ್' ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ಬಿಜಿ ಇದ್ದ ದರ್ಶನ್, ನಮಗೆ ದರ್ಶನ ಕೊಟ್ಟಿದ್ದು ಕೆಲ ಕಾಲ ಕಳೆದ ಬಳಿಕ.

'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.!

ಡಬ್ಬಿಂಗ್ ಸ್ಟುಡಿಯೋದಿಂದ ಹೊರಗೆ ಬಂದ ದರ್ಶನ್ ಸ್ವಲ್ಪ ಕುಂಟುತ್ತಿದ್ದರು. ನಡೆಯಲು ತುಸು ಕಷ್ಟ ಪಡುತ್ತಿದ್ದ ದರ್ಶನ್, ಹೊರಗೆ ಬರುತ್ತಿದ್ದಂತೆಯೇ ಟೈಮ್ ವೇಸ್ಟ್ ಮಾಡದೆ, 'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದರು. ಅದಾದ ಬಳಿಕವೇ ನಮಗೆ ಗೊತ್ತಾಗಿದ್ದು, ದರ್ಶನ್ ರವರ ಕಾಲಿಗೆ ಪೆಟ್ಟಾಗಿದೆ ಅಂತ.!

'ತಾರಕ್' ಚಿತ್ರೀಕರಣದ ಸಮಯದಲ್ಲಿ ಪೆಟ್ಟು

'ತಾರಕ್' ಚಿತ್ರದ ಶೂಟಿಂಗ್ ಟೈಮ್ ನಲ್ಲಿ ದರ್ಶನ್ ಕಾಲಿಗೆ ಪೆಟ್ಟು ಬಿದ್ದಿದೆ. ಆ ಪೆಟ್ಟು ಇನ್ನೂ ವಾಸಿ ಆಗದ ಕಾರಣ ದರ್ಶನ್ ಇನ್ನೂ ಕಷ್ಟ ಪಟ್ಟುಕೊಂಡೇ ನಡೆಯುತ್ತಿದ್ದಾರೆ.

ರಗ್ಬಿ ಆಟದ ಸನ್ನಿವೇಶ

'ತಾರಕ್' ಚಿತ್ರದಲ್ಲಿ ರಗ್ಬಿ ಆಟದ ಸನ್ನಿವೇಶ ಚಿತ್ರೀಕರಿಸುವಾಗ, ದರ್ಶನ್ ರವರ ಕಾಲಿಗೆ ಚೆಂಡು ಬಿತ್ತಂತೆ. ಅಲ್ಲಿಂದ ದರ್ಶನ್ ಕಾಲಲ್ಲಿ ನೋವು ಕಾಣಿಸಿಕೊಂಡಿದೆ.

ತುಂಬಾ ಹೊತ್ತು ನಿಲ್ಲಲು ಆಗಲ್ಲ

ಕಾಲು ನೋವಿನ ಪರಿಣಾಮ ತುಂಬಾ ಹೊತ್ತು ನಿಲ್ಲಲು ದರ್ಶನ್ ಗೆ ಆಗುತ್ತಿಲ್ಲ. ವೈದ್ಯರು ರೆಸ್ಟ್ ತೆಗೆದುಕೊಳ್ಳುವುದಕ್ಕೆ ಹೇಳಿದ್ದರೂ, ವೃತ್ತಿಪರತೆ ಮೆರೆದಿರುವ ದರ್ಶನ್ 'ತಾರಕ್' ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ತೊಡಗಿದ್ದಾರೆ.

'ತಾರಕ್' ಬಿಡುಗಡೆ ಯಾವಾಗ.?

64 ದಿನಗಳಲ್ಲಿ ಶೂಟಿಂಗ್ ಮುಗಿಸಿರುವ 'ತಾರಕ್' ಚಿತ್ರ ಸೆಪ್ಟೆಂಬರ್ 29 ರಂದು ತೆರೆಗೆ ಬರಲಿದೆ.

English summary
Challenging Star Darshan was injured during on 'Tarak' sets

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada