»   » ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ

ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ

Posted By:
Subscribe to Filmibeat Kannada
ಇನ್ಮುಂದೆ ದರ್ಶನ್ ಅವರ ಮೊದಲ ಆದ್ಯತೆ ಈ ನಿರ್ದೇಶಕರಿಗೆ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಐವತ್ತು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ನಟ. ಒಂದು ಸಿನಿಮಾ ಮುಗಿಯುವ ವರೆಗೂ ಮತ್ತೊಂದು ಚಿತ್ರದ ಬಗ್ಗೆ ಆಗಲಿ, ಡೇಟ್ಸ್ ಗಳ ಬಗ್ಗೆ ಆಗಲಿ ಡಿ ಬಾಸ್ ಎಲ್ಲಿಯೂ ಮಾತನಾಡುವುದಿಲ್ಲ.

ಕೆಲಸದಲ್ಲಿ ಶಿಸ್ತು ಇರಲಿ ಎನ್ನುವ ನಿಟ್ಟಿನಲ್ಲಿ ದರ್ಶನ್ ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡಿದ್ದಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತಾರಂತೆ.

ದರ್ಶನ್ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಸ್ಟಾರ್ ನಟಿ.!

ಕೆಲ ನಿರ್ದೇಶಕರುಗಳು ಯಾವಾಗಲೇ ಬರಲಿ ಅವರಿಗಾಗಿ ಡೇಟ್ಸ್ ಫ್ರೀ ಮಾಡಿಕೊಳ್ಳುತ್ತಾರಂತೆ. ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿದ್ದರು ಅವರಿಗಾಗಿ ಬೇರೆ ಚಿತ್ರಗಳನ್ನೂ ಕ್ಯಾನ್ಸಲ್ ಮಾಡಿಕೊಳ್ಳಲು ತಯಾರಾಗಿರುತ್ತಾರಂತೆ. ಹಾಗಾದರೆ ಯಾರು ಆ ನಿರ್ದೇಶಕರು? ಅವರಿಗೆ ದರ್ಶನ್ ಮೊದಲ ಆದ್ಯತೆ ನೀಡುವುದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಈ ನಿರ್ದೇಶಕರಿಗೆ ಆದ್ಯತೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. 50 ನೇ ಚಿತ್ರ ಪೌರಾಣಿಕ ಸಿನಿಮಾ ಆಗಿರುವುದು ಡಿ ಬಾಸ್ ಗೆ ಖುಷಿ ತಂದಿದ್ಯಂತೆ. ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ದರ್ಶನ್ ಮೊದಲ ಆದ್ಯತೆ ನೀಡುತ್ತಾರಂತೆ.

ಪೌರಾಣಿಕ ಸಿನಿಮಾಗಳ ಮುಂದೆ ಕ್ಯೂ ಇಲ್ಲ

ದರ್ಶನ್ ಕಾಲ್ ಶೀಟ್ ಪಡೆದುಕೊಳ್ಳಲು ನಿರ್ದೇಶಕರು ಕ್ಯೂ ನಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಐತಿಹಾಸಿಕ, ಪೌರಾಣಿಕ ಕಥೆ ಮಾಡಿರುವ ನಿರ್ದೇಶಕರಿಗೆ ದರ್ಶನ್ ಡೇಟ್ಸ್ ಕೊಡುತ್ತಾರಾ ಎನ್ನುವ ಪ್ರಶ್ನೆಗೆ ಡಿ ಬಾಸ್ ಉತ್ತರಿಸಿದ್ದು ಅಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಕಮರ್ಷಿಯಲ್ ಚಿತ್ರಗಳನ್ನ ಪಕ್ಕಕ್ಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ.

ಅಪರೂಪದ ಅವಕಾಶ ಬಿಡುವುದಿಲ್ಲ

ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳನ್ನ ನಿರ್ಮಾಣ ಮಾಡುವವರು ತುಂಬಾ ಕಡಿಮೆ. ಇಂತಹ ಚಿತ್ರ ಮಾಡ್ತಿನಿ ಅಂತ ಬರುವವರೇ ಕಡಿಮೆ ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಕಂಡಿತ ಬಿಡುವುದಿಲ್ಲ ಎನ್ನುವುದು ದರ್ಶನ್ ಅವರ ಅಭಿಪ್ರಾಯ.

ಪೌರಾಣಿಕ ಚಿತ್ರಗಳ ಅವಶ್ಯಕತೆ ಇದೆ

ಕಾಲ ಕಳೆದಂತೆ ಪೌರಾಣಿಕ , ಐತಿಹಾಸಿಕ ಹಿನ್ನಲೆಗಳನ್ನ ತಿಳಿದುಕೊಳ್ಳುವುದು, ಓದುವುದು ಕಡಿಮೆ ಆಗಿದೆ. ಸಿನಿಮಾಗಳ ಮೂಲಕವಾದರೂ ಕಥೆಗಳು ಜನರ ಮುಂದೆ ಬಂದರೆ ನೋಡಿಯಾದರೂ ತಿಳಿದುಕೊಳ್ಳುತ್ತಾರೆ.

ರಾಧಿಕಾ ಪಂಡಿತ್ ಅವರಿಗೆ ದರ್ಶನ್ ಅಭಿಮಾನಿಗಳ ಮನವಿ

English summary
Kannada actor Darshan has given first priority to historical and mythological cinema directors. Darshan believes that historical and mythological films should come more in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X